/newsfirstlive-kannada/media/post_attachments/wp-content/uploads/2025/07/kipi-kirthiu.jpg)
ಹಾಯ್​ ಜನರೇ, ಬನ್ನಿ ಬನ್ನಿ ಜನರೇ ಅಂತ ಸೋಷಿಯಲ್​ ಮೀಡಿಯಾದಲ್ಲಿ ತನ್ನದೇ ಟ್ರೆಂಡ್​ ಸೃಷ್ಟಿಸಿರೋ ಇನ್ಫ್ಯೂಎನ್ಸರ್​​ ಕಿಪ್ಪಿ ಕೀರ್ತಿ ಯಾರಿಗೆ ತಾಣೇ ಗೊತ್ತಿಲ್ಲ ಹೇಳಿ. ಸೋಷಿಯಲ್​ ಮೀಡಿಯಾದಲ್ಲಿ ತನ್ನ ವಿಶೇಷ ನಗು ಮತ್ತು ಮಾತುಗಳಿಂದಲೇ ಗಮನ ಸೆಳೆದಿರುವ ಕಿಪ್ಪಿ ಕೀರ್ತಿ ಲವ್​ ಸ್ಟೋರಿ ಪ್ರಕರಣ ಸದ್ಯ ಸಂಚಲನ ಮೂಡಿಸಿದೆ. ಕಿಪ್ಪಿ ಕೀರ್ತಿಗಾಗಿ ಬಿಲ್ಡಪ್ ಕೊಟ್ಟು ರೀಲ್ಸ್ ಮಾಡಿದ್ದ ಮುತ್ತು ಅಲಿಯಾಸ್ ಬ್ಲಾಕ್ ಕೋಬ್ರಾ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಕ್ಲಾಸ್​ ತಗೊಂಡಿದ್ದಾರೆ.
ಇದನ್ನೂ ಓದಿ: ಕನ್ನಡದ ಸ್ಟಾರ್ ನಿರೂಪಕಿ ಮದುವೆ.. ಅನುಶ್ರೀ ಆಗ್ತಾ ಇರೋದು ಲವ್​..? ಅರೇಂಜ್ ಮ್ಯಾರೇಜ್​..?
ಕೈಯಲ್ಲಿ ಚಾಕು ಹಿಡಿದುಕೊಂಡು ರೀಲ್ಸ್ ಮಾಡಿದ್ದ ಮುತ್ತು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಕೊಂಡಿದ್ದ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೊಬಳಿಯ ಹೊಸಕೆರೆ ಮೂಲದ ಮುತ್ತು, ಕ್ಯಾತ್ಸಂದ್ರ ಬಳಿ ಕಡಲೆಕಾಯಿ ವ್ಯಾಪಾರ ಮಾಡಿಕೊಂಡಿದ್ದ. ಈ ವ್ಯಾಪಾರದ ಜೊತೆಯಲ್ಲಿ ರೀಲ್ಸ್ ಮಾಡಿಕೊಂಡಿದ್ದ. ಕಿಪಿ ಕೀರ್ತಿ ನನ್ನವಳು. ಅವಳ ಹೆಸರು ಹೇಳಿದರೇ ನಾಲಿಗೆ ಕತ್ತರಿಸುತ್ತೇನೆ ಎಂದು ಚಾಕು ಹಿಡಿದು ಬಿಲ್ಡಪ್ ಕೊಟ್ಟಿದ್ದ. ಇದರ ಜೊತೆಯಲ್ಲಿಯೇ ಕಿಪಿ ಕೀರ್ತಿ ವಿಚಾರವಾಗಿ ಒಂದಿಷ್ಟು ವಿಡಿಯೋಗಳನ್ನು ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದ. ಚಾಕು ಹಿಡಿದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಕ್ಯಾತ್ಸಂದ್ರ ಪೊಲೀಸರು ಸ್ವಯಂ ಪ್ರೇರಿತ ಕೇಸ್​ ದಾಖಲಿಸಿಕೊಂಡಿದ್ದರು.
ಬಳಿಕ ಮುತ್ತುವನ್ನು ಸ್ಟೇಷನ್​ಗೆ ಕರೆಸಿ ಪೊಲೀಸರು ಮತ್ತೊಮ್ಮೆ ಈ ರೀತಿ ವಿಡಿಯೋ ಮಾಡಿದ್ರೆ ಬೆಂಡೆತ್ತೋದಾಗಿ ಹೇಳಿ ಎಚ್ಚರಿಕೆ ನೀಡಿದ್ದಾರೆ. ಮತ್ತೊಮ್ಮೆ ಚಾಕು ಹಿಡಿದು ಈ ರೀಲ್ಸ್ ಮಾಡೋದಿಲ್ಲ ಎಂದು ಮುತ್ತು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಇನ್ನು ಮತ್ತು ವಿಡಿಯೋ ಮಾಡಿದ್ದು ಕಪ್ಪೆ ಅಲಿಯಾಸ್​ ಸುನೀಲನಿಗೋಸ್ಕರ. ವಿಡಿಯೋದಲ್ಲಿ ಇರೋದೇನು ಅಂದ್ರೆ ಏಯ್ ಕಪ್ಪೆ, ನರಸೇಪುರದ ಸುನಿಲ್ ಕಪ್ಪೆ. ಏನೋ ನಿಂದು, ಯಾರನ್ನ ಮೂಟೆ ಕಟ್ಟಿ ಹಾಕ್ತಿನಿ ಅಂತ ಹೇಳ್ತಿದ್ದೀಯಾ? ಜಾಸ್ತಿ ಮಾಡ್ತಿದ್ದೀಯಾ? ತುಮಕೂರಿಗೆ ಬಂದು ಮುತ್ತು ಬ್ಲಾಕ್ ಕೋಬ್ರಾ ಯಾರು ಅಂತ ಕೇಳು? ತುಮಕೂರಿನ ಜನ ನನ್ನ ಹಿಸ್ಟರಿ ಹೇಳುತ್ತಾರೆ. ನನ್ನ ಹೆಸರು ಕೇಳಿದ್ರೆ ನೀನು ದಂಗಾಗಿ ಹೋಗ್ತಿಯ ಅಂತೆಲ್ಲಾ ಬೆದರಿಸಿದ್ದಾರೆ.
ಈ ಸುನೀಲ ಯಾರು ಅಂದ್ರೆ ಕಿಪ್ಪಿ ನನ್ನವಳು ಆಕೆ ನನ್ನ ಲವ್​ ಮಾಡ್ತಿದ್ದಾಳೆ ಅಂತ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋಗಳನ್ನ ಶೇರ್​ ಮಾಡಿದ್ದ ವ್ಯಕ್ತಿ. ಈತ ಕೂಡಾ ತುಮಕೂರಿನವನು. ಈ ಸುನೀಲ ಅಲಿಯಾಸ್​ ಕಪ್ಪೆ ನನ್ನ ಕೀರ್ತಿ ಬಗ್ಗೆ ಯಾರೂ ಮಾತಾಡಬಾರದು ಅಂತ ಹೇಳಿದ್ದ. ಇವನಿಗೆ ಟಾಂಗ್​ ಕೊಡೋಕೆ ಮುತ್ತು ಅಲಿಯಾಸ್​ ಬ್ಲಾಕ್​ ಕೋಬ್ರಾ ಬೆದರಿಕೆ ಹಾಕಿದ್ದ. ಆದ್ರೆ, ಮಂಗಳೂರು ಮೂಲದ ಕಿಪ್ಪಿ ಸದ್ಯ ತನ್ನ ಪ್ರಿಯಕರ ಮತ್ತುವಿನ ಜೊತೆ ಪ್ರೀತಿಯಲ್ಲಿದ್ದಾಳೆ. ಬ್ರೇಕಪ್​ಅಂದಿದ್ದ ಇಬ್ಬರೂ ಕೆಲ ದಿನಗಳ ಹಿಂದಷ್ಟೇ ಮತ್ತೆ ಒಂದಾಗಿದ್ದಾರೆ. ಈ ಬಗ್ಗೆ ಕಿಪ್ಪಿ ತನ್ನ ಸೋಷಿಯಲ್​ ಮೀಡಿಯಾ ಅಕೌಂಟ್​ನಲ್ಲಿ ಶೇರ್​ ಮಾಡ್ಕೊಂಡಿದ್ದಾರೆ. ಸಿನಿಮಾಗಳಲ್ಲೂ ಕಿಪ್ಪಿಗೆ ಆಫರ್ಸ್​ ಬರ್ತಿದ್ದು, ಕಿಪ್ಪಿ ತಮ್ಮ ಭವಿಷ್ಯದ ಬೆಳವಣಿಗೆ ಬಗ್ಗೆ ಯೋಚನೆ ಮಾಡ್ತಿದ್ದಾರೆ. ಆದ್ರೂ ಈ ಯುವಕರು ಹೀಗೆ ಕಿಪ್ಪಿ ನನ್ನವಳು ಕಿಪ್ಪಿ ನನ್ನವಳು ಅಂತ ಕಿತ್ತಾಡ್ಕೊಂಡು ಪೊಲೀಸ್​ ಸ್ಟೇಷನ್​ ಮೆಟ್ಟಿಲು ಹತ್ತುತ್ತಿದ್ದಾರೆ. ಇಲ್ಲಿ ಯಾರಿಗೇಳೋಣಾ ನಮ್ಮ ಪ್ರಾಬ್ಲಮ್ಮು ಅಂತಾ ಯಾರು ಯಾರಿಗೆ ಹೇಳಿಕೊಳ್ತಿದ್ದಾರೋ ಗೊತ್ತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ