ಇಷ್ಟು ಚಿಕ್ಕ ವಯಸ್ಸಿನಲ್ಲೇ ಘೋರ ದುರಂತ.. ತೇಜಸ್ ಸಾವಿಗೆ ವರುಣ್, ವರ್ಷ ಕಾವೇರಿ ನೋವಿನ ವಿದಾಯ

author-image
Veena Gangani
Updated On
ಇಷ್ಟು ಚಿಕ್ಕ ವಯಸ್ಸಿನಲ್ಲೇ ಘೋರ ದುರಂತ.. ತೇಜಸ್ ಸಾವಿಗೆ ವರುಣ್, ವರ್ಷ ಕಾವೇರಿ ನೋವಿನ ವಿದಾಯ
Advertisment
  • ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ತೇಜಸ್
  • ತೇಜಸ್ ಅಕಾಲಿಕ ಮರಣದಿಂದ ಶಾಕ್​ಗೆ ಒಳಗಾದ ಕಿರುತೆರೆ ನಟ ನಟಿಯರು
  • ಅತಿ ಚಿಕ್ಕ ವಯಸ್ಸಿನಲ್ಲಿ ದುರಂತ ಅಂತ್ಯ ಕಂಡ ವರುಣ್ ಆರಾಧ್ಯ ಆಪ್ತ ಸ್ನೇಹಿತ

ಸೋಷಿಯಲ್ ಮೀಡಿಯಾ ರೀಲ್ ಸ್ಟಾರ್ ಎಂದೇ ಫೇಮಸ್ ಆಗಿರೋ ವರುಣ್ ಆರಾಧ್ಯ ಹಾಗೂ ವರ್ಷ ಕಾವೇರಿ ಅವರ ಆಪ್ತ ಸ್ನೇಹಿತ ತೇಜಸ್ ಇನ್ನಿಲ್ಲ. ಹೌದು, ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟ ವರುಣ್ ಆರಾಧ್ಯ ಆಪ್ತ ಸ್ನೇಹಿತ ಕೆಲಸದ ನಿಮಿತ್ತ ಸ್ನೇಹಿತ ಜೊತೆಯಲ್ಲಿ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಹೋಗುತ್ತಿದ್ದಾಗ ತೇಜಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಗೆ ಬೈಕ್​ನಲ್ಲಿದ್ದ ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ಅಪರಿಚಿತ ವಾಹನ ಡಿಕ್ಕಿ.. ಭೀಕರ ಅಪಘಾತಕ್ಕೆ ಸ್ಥಳದಲ್ಲೇ ಪ್ರಾಣಬಿಟ್ಟ ದರ್ಶನ್ ಅಭಿಮಾನಿ

publive-image

ಮೃತ ತೇಜಸ್​​ ನಟ ವರುಣ್ ಆರಾಧ್ಯ ಅವರ ಕುಚಿಕು ಗೆಳೆಯ ಆಗಿದ್ದರು. ತೇಜಸ್‌ ಹಠಾತ್ ಸಾವಿನ ಸುದ್ದಿ ಕೇಳಿ ಇಡೀ ಆಪ್ತ ಬಳದ ಜೊತೆಗೆ ಕನ್ನಡ ಕಿರುತೆರೆ ನಟ ನಟಿಯರು ಶಾಕ್​ಗೆ ಒಳಗಾಗಿದ್ದಾರೆ. ಭೀಕರ ಅಪಘಾತದಲ್ಲಿ ತೇಜಸ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳಿ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತೆ ಆಗಿದೆ. ಇನ್ನೂ ಬಾಳಿ ಬದುಕಬೇಕಿದ್ದ ಯುವಕ ಇಷ್ಟು ಚಿಕ್ಕ ವಯಸ್ಸಿನಲ್ಲಿ ದುರಂತ ಅಂತ್ಯ ಕಂಡಿರುವುದು ಬಹಳ ದೊಡ್ಡ ನೋವಿನ ವಿಚಾರವಾಗಿದೆ.

ಯಾರು ಈ ತೇಜಸ್?

publive-image

ಕಿರುತೆರೆ ನಟ ವರುಣ್ ಆರಾಧ್ಯ ಅವರ ಕುಚಿಕು ಗೆಳೆಯ ಆಗಿದ್ದರು ತೇಜಸ್. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಌಕ್ಟೀವ್ ಆಗಿದ್ದರು. ಹೊಸ ಹೊಸ ರೀಲ್ಸ್​ ಶೇರ್​ ಮಾಡಿ ನೆಟ್ಟಿಗರಿಗೆ ಮನರಂಜನೆ ನೀಡುತ್ತಿದ್ದರು. ಜೊತೆಗೆ ಯಾವಾಗಾಲು ನಟ ವರುಣ್ ಆರಾಧ್ಯ ಜೊತೆಯೇ ಕಾಲ ಕಳೆಯುತ್ತಿದ್ದರು. ಇನ್ನು ತೇಜಸ್ ಅವರು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ 33 ಸಾವಿರ ಫಾಲೋವರ್ಸ್ ಅನ್ನು ಹೊಂದಿದ್ದರು. ಸಾಕಷ್ಟು ಜನಪ್ರಿಯತೆ ಪಡೆದಿದ್ದ ತೇಜಸ್ ಅಕಾಲಿಕ ಮರಣದಿಂದ ಸಾಕಷ್ಟು ಜನ ಶಾಕ್​ಗೆ ಒಳಗಾಗಿದ್ದಾರೆ. ತೇಜಸ್ ನಿಧನ ಹಿನ್ನೆಲೆಯಲ್ಲಿ ಕಿರುತೆರೆಯ ಹಲವು ನಟರು ಕಂಬನಿ ಮಿಡಿಯುತ್ತಿದ್ದಾರೆ. ಜೊತೆಗೆ ನೆಟ್ಟಿಗರು ಕೂಡ ಕಾಮೆಂಟ್​ ಮಾಡುವ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ:ಕಿರುತೆರೆ ನಟನ ಗೆಳೆಯ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಸಾವು.. ಇನ್ನೊಬ್ಬ ಗಂಭೀರ

ನಿಮ್ಮ ಕೊನೆ ಮಾತು ಫ್ರೆಂಡ್ಶಿಪ್ ಬಗ್ಗೆ ಹೇಳಿ ಲಾಸ್ಟ್ ಮಾಡಿ ಬಿಟ್ಟರಿ. ಆ ದೇವ್ರು ನೀಮ್ಮ ಕುಟುಂಬಕ್ಕೆ ಹಾಗೂ ನಿಮ್ಮ ಸ್ನೇಹಿತರಿಗೆ ಈ ನೋವನ್ನು ತಡಿಯೋ ಶಕ್ತಿ ಕೊಡಲಿ, ತುಂಬಾ ಬೇಜಾರ್ ಆಯಿತು ಈ ವಿಷಯ ಕೇಳಿ ನಿನ್ನೆ ಇದ್ದೋರು ಇವತ್ತಿಲ್ಲ ಇಷ್ಟೇ ಜೀವನ. ಎಲ್ಲರ ಜೊತೆನೂ ಚೆನ್ನಾಗಿರಪ್ಪಾ, ಛೇ ಜೀವನ ಎಷ್ಟು ಕ್ಷಣಿಕ ಅಲ್ವ. ಈ ರೀಲ್ ಅಪ್ಲೋಡ್ ಮಾಡಿ‌ ಇನ್ನು 24ಗಂಟೆ ಆಗಿಲ್ಲ ನೀವೇ ಈ ಲೋಕದಿಂದ ದೂರ ಹೋಗ್ಬುಟ್ರಲ್ಲ. ಈ ರೀಲ್ಸಿಗಿರೋ ಆಯಸ್ಸು ಮನುಷ್ಯನಿಗೆ ಇಲ್ಲದಂತೆ ಆಯಿತು ಅಂತಾ ಕಮೆಂಟ್ಸ್​ ಮಾಡಿ ಬೇಸರ ಹೊರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment