/newsfirstlive-kannada/media/post_attachments/wp-content/uploads/2024/08/akka-anu2.jpg)
ಕನ್ನಡತಿ ‘ಅಕ್ಕ ಅನು’ ಯಾರಿಗೆ ಗೊತ್ತಿಲ್ಲ ಹೇಳಿ? ಸೋಷಿಯಲ್​ ಮೀಡಿಯಾ ಬಳಕೆದಾರರು ಇವರನ್ನು ಪ್ರತಿ ದಿನ ನೋಡಿರುತ್ತಾರೆ. ಒಂದಲ್ಲಾ ಒಂದು ವಿಚಾರಕ್ಕೆ ಅಕ್ಕ ಅನು ಸುದ್ದಿಯಲ್ಲಿ ಇರುತ್ತಾರೆ. ಸರ್ಕಾರಿ ಶಾಲೆ, ದೇವಾಲಯ ಸೇರಿದಂತೆ ಇತರೆ ಪಾರಂಪರಿಕ ತಾಣಗಳಿಗೆ ಹೋಗಿ ಸ್ವಚ್ಛತೆ ಮತ್ತು ಪುನರುಜ್ಜೀವನ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
ಈ ಬಗ್ಗೆ ಹಲವು ವಿಡಿಯೋಗಳನ್ನು ಸಹ ಅಕ್ಕ ಅನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲೂ ಅನು ಅವರು ಮಾಡುವ ಕೆಲಸಕ್ಕೆ ಸಾಕಷ್ಟು ಜನ ಮೆಚ್ಚುಗೆ ಸಹ ವ್ಯಕ್ತಪಡಿಸುತ್ತಿರುತ್ತಾರೆ. ಇನ್ನೂ ಕೆಲವರು ಅವರ ಕೆಲಸಕ್ಕೆ ಅಡೆ-ತಡೆ ಉಂಟು ಮಾಡ್ತಿರುತ್ತಾರೆ. ಆದರೆ ಅವರು ಮಾತ್ರ ಯಾವುದಕ್ಕೂ ತಲೆ ಕಡೆಸಿಕೊಳ್ಳದೇ ತಮ್ಮದೆಯಾದ ಕೆಲಸದಲ್ಲಿ ಬ್ಯುಸಿ ಆಗಿರುತ್ತಾರೆ.
/newsfirstlive-kannada/media/post_attachments/wp-content/uploads/2024/08/akka-anu1.jpg)
ಕೆಚ್ಚೆದೆಯ ಕನ್ನಡತಿ ಅಂತಲೇ ಕರೆಸಿಕೊಳ್ಳುವ ಅಕ್ಕ ಅನು ಸರಕಾರಿ ಶಾಲೆಗೆ ಭೇಟಿ ಕೊಟ್ಟಿದ್ದರು. ಆಗ ಶಾಲೆಯ ವಿದ್ಯಾರ್ಥಿಗಳು ಅನು ಅವರ ಸುತ್ತಮುತ್ತ ಕುಳಿತುಕೊಂಡಿದ್ದರು. ಜೊತೆಗೆ ಅಕ್ಕ ಅವರ ಜಡೆ ಹೆಣೆದಿದ್ದಾರೆ. ಇದೇ ವಿಡಿಯೋವನ್ನು ಅನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋ ಜೊತೆಗೆ ನನ್ನ ಪ್ರೀತಿಯ ಸುತ್ತ ಇರುವ ಮುತ್ತುಗಳು. ಈ ಮುತ್ತುಗಳಿಂದ ನಾನು ಸುಂದರವಾಗಿ ಕಾಣುತ್ತಿದ್ದೇನೆ ಅಂತ ಬರೆದುಕೊಂಡಿದ್ದಾರೆ.
View this post on Instagram
ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಆ ಮಕ್ಕಳು ಮುತ್ತ ಆದರೆ ನೀನು ವಜ್ರ ಅಕ್ಕ, ಎಷ್ಟು ಚೆನ್ನಾಗಿ ಜಡೆ ಹಾಕಿದರೆ ಅನು ಅಕ್ಕ. ಅನು ಅಕ್ಕ ಯಾವತ್ತಿದ್ರೂ ಅಪ್ಪಟ ಮುತ್ತು ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us