/newsfirstlive-kannada/media/post_attachments/wp-content/uploads/2025/05/sofia_qureshi_vyomika_singh.jpg)
ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆ ಬೆನ್ನಲ್ಲೇ ಭಾರತೀಯ ರಕ್ಷಣಾ ಸಚಿವಾಲಯ ಮಹತ್ವದ ಮಾಧ್ಯಮಗೋಷ್ಠಿ ನಡೆಸಿ ವಿರೋಧಿ ರಾಷ್ಟ್ರದ ಸುಳ್ಳುಗಳ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ನೀಡಿದೆ.
ಎರಡು ರಾಷ್ಟ್ರಗಳ ಮಧ್ಯ ಘರ್ಷಣೆ ಸಂದರ್ಭದಲ್ಲಿ ಪಾಕಿಸ್ತಾನ ನಿರಂತರವಾಗಿ ಸುಳ್ಳು ಆರೋಪಗಳನ್ನು ಮಾಡಿದೆ. ಜೆಎಫ್-17 ಯುದ್ಧ ವಿಮಾನದಿಂದ ಬ್ರಹ್ಮೋಸ್ ಕ್ಷಿಪಣಿ, ಎಸ್-400 ನಾಶ ಮಾಡಿರುವುದಾಗಿ ಹೇಳಿದಂತೆ. ಶ್ರೀನಗರ, ಭುಜ್, ಸಿರ್ಸಾ, ಭಟಿಂಡಾ, ಜಮ್ಮುವಿನ ವಾಯು ನೆಲೆಗಳ ಮೇಲೆ ದಾಳಿ ಮಾಡಿ ನಾಶ ಮಾಡಿರುವುದಾಗಿ ಎಲ್ಲ ಕಡೆ ಸುಳ್ಳು ಹೇಳುತ್ತ ಬರುತ್ತಿದೆ ಎಂದು ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಅವರು ಹೇಳಿದ್ದಾರೆ.
ಭಾರತದ ಯಾವುದೇ ಏರ್ಬೇಸ್, ಕ್ಷಿಪಣಿ ನಾಶವಾಗಿಲ್ಲ. ಎಲ್ಲವೂ ಸುರಕ್ಷಿತವಾಗಿ ಇವೆ. ಆದರೆ ಪಾಕಿಸ್ತಾನ ಎಲ್ಲರನ್ನು ತಪ್ಪು ದಾರಿ ಹಿಡಿಸಲು ಸುಳ್ಳುಗಳನ್ನು ಹೇಳುತ್ತ ಹೋಗುತ್ತಿದೆ. ಪಾಕ್ ಈಗಾಗಲೇ ಭಾರತದ ಹೊಡೆತಕ್ಕೆ ತತ್ತರಿಸಿ ಹೋಗಿದೆ. ಪಾಕಿಸ್ತಾನ ಮತ್ತೆ ಬಾಲ ಬಿಚ್ಚಿದರೆ ಅದಕ್ಕೆ ತಕ್ಕ ಉತ್ತರ ಇನ್ನಷ್ಟು ಬಲಿಷ್ಠವಾಗಿರುತ್ತದೆ ಎಂದು ಸೋಫಿಯಾ ಖುರೇಷಿ ಹೇಳಿದ್ದಾರೆ.
ಇದನ್ನೂ ಓದಿ: BREAKING: ಭಾರತ -ಪಾಕಿಸ್ತಾನ ನಡುವೆ ಕದನ ವಿರಾಮ.. ಅಮೆರಿಕ ಅಧ್ಯಕ್ಷ ಹೇಳಿದ್ದು ಏನು?
ಇದಾದ ಮೇಲೆ ಮಾತನಾಡಿದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು, ಅಮೃತಸರ್, ಶ್ರೀನಗರ ಮೇಲೆ ದಾಳಿ ಮಾಡಿರುವುದಾಗಿ ಸುಳ್ಳು ಹೇಳಿದೆ. ಇದು ಅಲ್ಲದೇ ಧಾರ್ಮಿಕ ಸ್ಥಳಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿರುವುದಾಗಿ ಪಾಕಿಸ್ತಾನ ಹೆಜ್ಜೆ ಹೆಜ್ಜೆಗೂ ಸುಳ್ಳು ಹೇಳಿದೆ. ಭಾರತ ಜಾತ್ಯತೀತ ರಾಷ್ಟ್ರ. ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ಭಾರತ ಯಾವುದೇ ಧಾರ್ಮಿಕ ಸ್ಥಳದ ಮೇಲೆ ದಾಳಿ ಮಾಡಿಲ್ಲ, ಮುಂದೆನೂ ಮಾಡೋದಿಲ್ಲ ಎಂದು ಹೇಳಿದ್ದಾರೆ.
ಭಾರತದ ದಾಳಿಯಿಂದ ಪಾಕಿಸ್ತಾನಕ್ಕೆ ತುಂಬಾ ನಷ್ಟವಾಗಿದೆ. ತನ್ನಲ್ಲಿ ಆಗಿರುವ ನೋವು, ಕಷ್ಟವನ್ನು ಹೇಳಿಕೊಳ್ಳಲಾಗದೇ ಭಾರತದ ಮೇಲೆ ಆರೋಪ ಮಾಡಿದೆ. ಭಾರತದ ಎಲ್ಲ ಸ್ಥಳಗಳು ಸುರಕ್ಷಿತವಾಗಿವೆ. ಭಾರತದ ರಕ್ಷಣಾ ಪಡೆಗಳು ಉಗ್ರರ ನೆಲೆ, ಅವರ ಏರ್ಬೇಸ್ ಮೇಲೆ ದಾಳಿ ಮಾಡಿ ಸರ್ವನಾಶ ಮಾಡಿವೆ. ಇದರಿಂದ ಪಾಕಿಸ್ತಾನ ನಲುಗಿ ಹೋಗಿದೆ ಎಂದು ವ್ಯೋಮಿಕಾ ಸಿಂಗ್ ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ