Advertisment

‘ಇಲ್ಲ, ಅಣ್ಣ ನೀವು ಹೊಡೀತಿರಿ..’ ರೇಣುಕಾಸ್ವಾಮಿ ಮಾದರಿ ಕೇಸ್​​ಗೂ ಮುನ್ನ ಕಾರಿನಲ್ಲಿ ಆಗಿದ್ದೇನು..?

author-image
Veena Gangani
Updated On
‘ಇಲ್ಲ, ಅಣ್ಣ ನೀವು ಹೊಡೀತಿರಿ..’ ರೇಣುಕಾಸ್ವಾಮಿ ಮಾದರಿ ಕೇಸ್​​ಗೂ ಮುನ್ನ ಕಾರಿನಲ್ಲಿ ಆಗಿದ್ದೇನು..?
Advertisment
  • ರೇಣುಕಾಸ್ವಾಮಿ ಕೇಸ್​ನಂತೆ ಆಗುತ್ತೆ ಅಂತಾ ಹೇಳಿ ಗ್ಯಾಂಗ್​ ಹಲ್ಲೆ
  • ಘಟನೆ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಕೇಸ್​ ದಾಖಲು
  • ಸದ್ಯ ಸೋಲದೇವನಹಳ್ಳಿ ಠಾಣೆ ಪೊಲೀಸರಿಂದ ಐವರು ಅರೆಸ್ಟ್​

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಘಾತಕಾರಿ ಕೃತ್ಯವೊಂದು ಕಳೆದ ತಿಂಗಳ 30ರಂದು ಮಧ್ಯಾಹ್ನ 2:30ಕ್ಕೆ ನಡೆದಿದೆ.

Advertisment

publive-image

ಯುವತಿ ಮುಂದೆಯೇ ಯುವಕನನ್ನು ಬೆತ್ತಲೆ ಮಾಡಿ ಕ್ರೌರ್ಯ ಮೆರೆದಿದ್ದಾರೆ. ನೆಲಮಂಗಲ ಸೋಲದೇವನಹಳ್ಳಿಯಲ್ಲಿ ಯುವಕನ ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿದ್ದ ಐವರನ್ನು ಬಂಧಿಸಲಾಗಿದೆ. ಕುಶಾಲ್ ಎಂಬಾತ ತನ್ನ ಮಾಜಿ ಸ್ನೇಹಿತೆಗೆ ಮೆಸೇಜ್ ಮಾಡಿದ ಅನ್ನೋ ಕಾರಣಕ್ಕೆ, ಆತನ ಅಪಹರಿಸಿ ಮನಸೋ ಇಚ್ಛೆ ಹಲ್ಲೆ ಮಾಡಲಾಗಿದೆ. ಅಂದು ರೇಣುಕಾಸ್ವಾಮಿಯ ಬಟ್ಟೆ ಬಿಚ್ಚಿಸಿ, ನಗ್ನಗೊಳಿಸಿ ಚಿತ್ರಹಿಂಸೆ ನೀಡಿದಂತೆ ಇಲ್ಲಿಯೂ ಯುವಕನಿಗೆ ಟಾರ್ಚರ್ ನೀಡಲಾಗಿದೆ. ಮಾತ್ರವಲ್ಲ ಆತನ ಮರ್ಮಾಂಗಕ್ಕೆ ಒದ್ದು, ಕೊಡಬಾರದ ಹಿಂಸೆ ಕೊಟ್ಟಿದ್ದಾರೆ. ‘ತಪ್ಪಾಯ್ತು ಅಣ್ಣಾ, ಬಿಡ್ರೋ’ ಅಂದ್ರೂ ಕೇಳದ ಪಾಪಿಗಳು ಬರ್ಬರವಾಗಿ ಥಳಿಸಿದ್ದಾರೆ.

publive-image

ಅಷ್ಟೇ ಅಲ್ಲದೇ ಕಾರ್​ನಲ್ಲಿ ಯುವತಿ ಮುಂದೆಯೇ ಯುವಕನಿಗೆ ಹಲ್ಲೆ ಮಾಡಿ ವಿಕೃತಿ ಮರೆದಿದ್ದಾರೆ. ಅಲ್ಲದೇ ಹುಡುಗಿಯ ಮುಂದೆಯೇ ಹಾಡು ಹೇಳುವಂತೆ ಒತ್ತಾಯ ಮಾಡಿದ್ದಾರೆ. ಅಲ್ಲದೇ ಅಣ್ಣ ನೀವು ಹೊಡೀತಿರಿ ಅಂತ ಹೇಳಿದ್ರೂ ಆತನನ್ನು ಬಿಡದೇ ಕ್ರೌರ್ಯ ಮೆರೆದಿದ್ದಾರೆ. ಸದ್ಯ ಸೋಲದೇವನಹಳ್ಳಿ ಪೊಲೀಸರು ಈ ಘಟನೆ ಸಂಬಂಧ ಯುವತಿ ಸೇರಿ ಐವರನ್ನು​ ಅರೆಸ್ಟ್ ಮಾಡಿದ್ದಾರೆ. ಹೇಮಂತ್, ಯಶ್ವಂತ್, ಶಿವಶಂಕರ್, ಶಶಾಂಕ್ ಹಾಗೂ ಯುವತಿ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೂ, ಬಂಧಿತ ಆರೋಪಿ ಹೇಮಂತನ ಮೇಲೆ ಇದೇ ರೀತಿ ಹಲ್ಲೆ ಕೇಸ್ ಆರೋಪಗಳು ಇದೆ. ಹಲವು ಬಾರಿ ಹಲ್ಲೆ ಕೇಸ್​ನಲ್ಲಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾನೆ ಈ ಹೇಮಂತ್.

ಇದನ್ನೂ ಓದಿ: ರೇಣುಕಾಸ್ವಾಮಿ ರೀತಿ ಯುವಕನ ಬಟ್ಟೆ ಬಿಚ್ಚಿಸಿ ಹಲ್ಲೆ ಕೇಸ್​.. ಯುವತಿ ಸೇರಿ ಐವರ ಬಂಧನ

Advertisment

publive-image

ಏನಿದು ಕೇಸ್..?

ಕಾಲೇಜಿಗೆ ಹೋಗುವಾಗ ಕುಶಾಲ್ ಮತ್ತು ಯುವತಿ ಮಧ್ಯೆ ಪ್ರೀತಿ ಆಗಿತ್ತಂತೆ. ಎರಡು ವರ್ಷದ ಪ್ರೀತಿ ಕೆಲ ತಿಂಗಳ ಹಿಂದೆ ಮುರಿದು ಬಿದ್ದಿತ್ತು. ಈ ವೇಳೆ ಯುವತಿಗೆ ಬೇರೊಂದು ಹುಡುಗನ ಪರಿಚಯವಾಗಿತ್ತು. ಇದು ಸಹಿಸಲಾಗದೆ ಕುಶಾಲ್ ಯುವತಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾನಂತೆ. ಹೀಗಾಗಿ ಯುವತಿ ತನ್ನ ಸ್ನೇಹಿತರ ಜೊತೆ ಸೇರಿ ಕುಶಾಲ್​ನನ್ನು ಕಿಡ್ನ್ಯಾಪ್ ಮಾಡಿ ಆತನ ಮೇಲೆ ಹಲ್ಲೆ ಮಾಡಬೇಕು ಅಂತ ಪ್ಲಾನ್​ ಮಾಡಿದ್ದಳು. ಅದರಂತೆ ​ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕುಶಾಲ್​ ಮೇಲೆ ಗ್ಯಾಂಗ್​ ಹಲ್ಲೆ ಮಾಡಿದೆ. ಇನ್ನೂ, ಕುಶಾಲ್​ ಮೇಲೆ ಹಲ್ಲೆ ಮಾಡುವಾಗ ದರ್ಶನ್ ಕೇಸ್​ನ ಉಲ್ಲೇಖ ಮಾಡಲಾಗಿದೆ. ರೇಣುಕಾಸ್ವಾಮಿ ಕೇಸ್​ನಂತೆ ಆಗುತ್ತೆ ಅಂತಾ ಹೇಳಿ ಗ್ಯಾಂಗ್​ ಹಲ್ಲೆ ಮಾಡಿದೆ. ಘಟನೆ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಕೇಸ್​ ದಾಖಲಾಗಿದೆ. ಸದ್ಯ ಸೋಲದೇವನಹಳ್ಳಿ ಠಾಣೆ ಪೊಲೀಸರು ಐವರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment