newsfirstkannada.com

‘ನಾವು ಹೆಣ್ಣಾಗಬೇಕು’- ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆಗೆ ಅವಕಾಶ ಕೊಡಿ ಎಂದು ಬೇಡಿಕೆಯಿಟ್ಟ ಲೋಕೋ ಪೈಲಟ್​​ಗಳು

Share :

Published July 6, 2023 at 5:59pm

Update July 6, 2023 at 5:57pm

    ಇಷ್ಟು ದಿನ ಗಂಡಸಾಗಿದ್ದು ಬಹಳಷ್ಟು ಕಿರುಕುಳ ಅನುಭವಿಸಿದ್ದೇವೆ

    ಹೆಣ್ಣಾಗಿ ಲಿಂಗ ಪರಿವರ್ತನೆ ಮಾಡಿಕೊಳ್ಳಲು ಅವಕಾಶ ಕೊಡಿ ಪ್ಲೀಸ್!

    ರೈಲ್ವೆ ಇಲಾಖೆಯ ಹಿರಿಯ, ಕಿರಿಯ ನೌಕರರು ಮಾಡಿರೋ ಡಿಮ್ಯಾಂಡ್

ಸೊಲ್ಲಾಪುರ: ಕಲಿಯುಗದಲ್ಲಿ ಗಂಡು, ಹೆಣ್ಣಾಗಬಹುದು, ಹೆಣ್ಣು ಗಂಡಾಗಬಹುದು. ಅತ್ಯಾಧುನಿಕ ಶಸ್ತ್ರಚಿಕಿತ್ಸೆಯಲ್ಲಿ ಇದಕ್ಕೆ ಅವಕಾಶಗಳೂ ಇವೆ. ಈ ವೈದ್ಯಕೀಯ ಸೌಲಭ್ಯವನ್ನೇ ನಂಬಿಕೊಂಡ ಈ ಲೋಕೋ ಪೈಲಟ್‌ಗಳು ಹೆಣ್ಣಾಗುವ ಬಯಕೆ ವ್ಯಕ್ತಪಡಿಸಿದ್ದಾರೆ. ನಾವು ಇಷ್ಟು ದಿನ ಗಂಡಸಾಗಿದ್ದು ಸಾಕು ಹೆಣ್ಣಾಗಿ ಲಿಂಗ ಪರಿವರ್ತನೆ ಮಾಡಿಕೊಳ್ಳಲು ಅವಕಾಶ ಕೊಡಿ ಎಂದು ಬೇಡಿಕೆಯಿಟ್ಟಿದ್ದಾರೆ. ಯಾರಪ್ಪಾ ಇವ್ರು ಲೋಕೋ ಪೈಲಟ್‌ಗಳು. ಯಾಕಿಂಥಾ ಡಿಮ್ಯಾಂಡ್ ಇಟ್ಟಿದ್ದಾರೆ ಅನ್ನೋದೆ ಸಖತ್ ಇಂಟ್ರೆಸ್ಟಿಂಗ್.

ಮಹಾರಾಷ್ಟ್ರ ಸೊಲ್ಲಾಪುರದ ಕೇಂದ್ರ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಹಿರಿಯ, ಕಿರಿಯ ಲೋಕೋ ಪೈಲಟ್‌ಗಳೇ ಇಂತಹದೊಂದು ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. ಲೋಕೋ ಪೈಲಟ್‌ಗಳ ಸಂಘಟನೆ ಈ ಬಗ್ಗೆ ಮನವಿ ಪತ್ರವೊಂದನ್ನು ಬರೆದಿದ್ದು, ಪತ್ರಕರ್ತರೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಇದನ್ನು ಹಂಚಿಕೊಂಡಿದ್ದು ನೋಡಿದ ಪ್ರತಿಯೊಬ್ಬರೂ ಹುಬ್ಬೇರುವಂತೆ ಮಾಡಿದೆ.

ಸೊಲ್ಲಾಪುರದ ಲೋಕೋ ಪೈಲಟ್‌ಗಳು ತಮ್ಮ ಮೇಲಾಧಿಕಾರಿಗಳಿಗೆ ಈ ಮನವಿ ಪತ್ರ ಬರೆದಿದ್ದಾರೆ. ಅದರಲ್ಲಿ ನಾವು ಗಂಡಸರು ಅನ್ನೋ ಕಾರಣಕ್ಕೆ ನಮಗೆ ತಾರತಮ್ಯ ಮಾಡಲಾಗ್ತಿದೆ. ಹೀಗಾಗಿ ನಾವು ಹೆಂಗಸರಾಗಿ ಲಿಂಗ ಪರಿವರ್ತನೆ ಮಾಡಿಕೊಳ್ಳಲು ಅವಕಾಶ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗಳಿಗೆ ಕೆಲವೊಂದು ವಿನಾಯಿತಿಗಳಿವೆ. ಮಹಿಳಾ ಸಿಬ್ಬಂದಿಗಳಿಗೆ ರಾತ್ರಿ ಪಾಳಿಯಿಲ್ಲ. ಅವರು ಯಾವಾಗ ಬೇಕಾದ್ರು ರಜೆ ಸೌಲಭ್ಯವಿದೆ. ಅವರು ಗೈರು ಹಾಜರಾದ್ರು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಈ ಮಹಿಳಾ ಸಿಬ್ಬಂದಿಗಳ ಸೌಲಭ್ಯ ಪಡೆಯಲು ಲೋಕೋ ಪೈಲಟ್‌ಗಳು ನಾವು ಹೆಣ್ಣಾಗಿ ಬದಲಾಗುತ್ತೇವೆ. ಲಿಂಗ ಪರಿವರ್ತನೆಯ ಶಸ್ತ್ರ ಚಿಕಿತ್ಸೆಗಾಗಿ ಒಂದು ವರ್ಷಗಳ ಕಾಲ ರಜೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ರೈಲ್ವೆ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಆದರೆ ಲೋಕೋ ಪೈಲಟ್‌ಗಳ ಮನವಿ ಪತ್ರ ನೋಡಿದ ನೆಟ್ಟಿಗರು ಬಿದ್ದು, ಬಿದ್ದು ನಕ್ಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ನಾವು ಹೆಣ್ಣಾಗಬೇಕು’- ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆಗೆ ಅವಕಾಶ ಕೊಡಿ ಎಂದು ಬೇಡಿಕೆಯಿಟ್ಟ ಲೋಕೋ ಪೈಲಟ್​​ಗಳು

https://newsfirstlive.com/wp-content/uploads/2023/07/Solapur-Loco-Pilot.jpg

Load More