newsfirstkannada.com

VIDEO: ‘ಫ್ರೀ ಪ್ಯಾಲೆಸ್ಟೀನ್​’ ಘೋಷಣೆ- ಇಸ್ರೇಲ್​​ ರಾಯಭಾರಿ ಕಚೇರಿ ಮುಂದೆ US​ ಸೈನಿಕ ಆತ್ಮಹತ್ಯೆ!

Share :

Published February 27, 2024 at 7:10pm

    ಇಸ್ರೇಲ್​ ರಾಯಭಾರಿ ಕಚೇರಿ ಮುಂದೆಯೇ ಯುಎಸ್​ ಸೈನಿಕ ಆತ್ಮಹತ್ಯೆ!

    ಪ್ಯಾಲೆಸ್ಟೀನ್​ ಹೋರಾಟ ಬೆಂಬಲಿಸಿ ಆತ್ಮಹತ್ಯೆ ಮಾಡಿಕೊಂಡ ಹುತಾತ್ಮ ಯೋಧ

    ಫ್ರೀ ಪ್ಯಾಲೆಸ್ಟಿನ್​ ಎಂದು ಇಸ್ರೇಲ್​ ವಿರುದ್ಧ ಧಿಕ್ಕಾರ ಕೂಗುತ್ತಾ ಪ್ರಾಣತ್ಯಾಗ ಮಾಡಿದ

ವಾಷಿಂಗ್ಟನ್‌: ಯುಎಸ್​ನಲ್ಲಿರೋ ಇಸ್ರೇಲ್​​ ರಾಯಭಾರಿ ಕಚೇರಿ ಮುಂಭಾಗ ಸೈನಿಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ​ ಆರೋನ್​​ ಬುಶ್​ನೆಲ್​​​ (25) ಎಂಬ ಯುಎಸ್​​ ಸೈನಿಕ ಆತ್ಮಹತ್ಯೆ ಮಾಡಿಕೊಂಡವರು.

ಇದನ್ನು ಓದಿ: ಹೇ ನವಿಲೇ.. ಹೆಣ್ಣವಿಲೇ.. ಬಿಗ್​ಬಾಸ್​ ‘ಬೆಂಕಿ’ ಪೋಸ್‌ಗೆ ಫಿದಾ ಆದ ಫ್ಯಾನ್ಸ್; ಫೋಟೋ ಇಲ್ಲಿದೆ!

ಇಸ್ರೇಲ್​​, ಪ್ಯಾಲೆಸ್ಟೀನ್ ಮಧ್ಯೆ ಸಂಘರ್ಷ ಮುಂದುವರಿದಿದೆ. ಸದ್ಯ ಗಾಜಾ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಇಸ್ರೇಲ್​​ ವಿರುದ್ಧ ಪ್ಯಾಲೆಸ್ಟೀನ್ ಹೋರಾಟವನ್ನು ಬೆಂಬಲಿಸಿ ಯುಎಸ್​​ ಸೈನಿಕ ಆತ್ಮಾಹುತಿ ಮಾಡಿಕೊಂಡಿದ್ದಾನೆ. ಫ್ರೀ ಪ್ಯಾಲೆಸ್ಟೀನ್ ಎಂದು ಘೋಷಣೆ ಕೂಗುತ್ತಾ ಬೆಂಕಿ ಹಚ್ಚಿಕೊಂಡು ಇಸ್ರೇಲ್​​ ರಾಯಭಾರಿ ಕಚೇರಿ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಇಡೀ ಅಮೆರಿಕಾವನ್ನೇ ತಲ್ಲಣಗೊಳಿಸಿದೆ.

ಬುಶ್​​ನೆಲ್​ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಬಲಿಯಾಗುವ ಮುನ್ನ ಫ್ರೀ ಪ್ಯಾಲೆಸ್ಟೀನ್​ ಎಂದು ಘೋಷಣೆ ಕೂಗಿದ್ದಾನೆ. ಈ ಘಟನೆ ನಡೆದ ಕೂಡಲೇ ಸ್ಥಳದಲ್ಲೇ ಇದ್ದ ಭದ್ರತಾ ಅಧಿಕಾರಿ ಒಬ್ಬರು ಸೈನಿಕನನ್ನು ಕಾಪಾಡಲು ಮುಂದಾಗಿದ್ದಾರೆ. ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ. ಆದ್ರೆ, ಆಸ್ಪತ್ರೆಗೆ ದಾಖಲಿಸಲು ಹೋಗುತ್ತಿದ್ದಾಗ ಮಾರ್ಗಮಧ್ಯೆಯೇ ಸೈನಿಕ ಪ್ರಾಣಬಿಟ್ಟಿದ್ದಾನೆ ಎಂದು ಯುಎಸ್​​ ಸೇನೆ ಮೂಲಗಳು ತಿಳಿಸಿವೆ. ಸದ್ಯ ಪ್ಯಾಲೆಸ್ಟೀನ್​​​ ಹೋರಾಟ ಬೆಂಬಲಿಸಿ ಯುಎಸ್​ ಸೈನಿಕ ಮಾಡಿಕೊಂಡ ಆತ್ಮಹತ್ಯೆ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ಫ್ರೀ ಪ್ಯಾಲೆಸ್ಟೀನ್​’ ಘೋಷಣೆ- ಇಸ್ರೇಲ್​​ ರಾಯಭಾರಿ ಕಚೇರಿ ಮುಂದೆ US​ ಸೈನಿಕ ಆತ್ಮಹತ್ಯೆ!

https://newsfirstlive.com/wp-content/uploads/2024/02/fire-31.jpg

Load More