/newsfirstlive-kannada/media/post_attachments/wp-content/uploads/2025/05/ckd.jpg)
ಚಿಕ್ಕೋಡಿ: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಹೊತ್ತಲ್ಲಿ ಮದುವೆಯಾದ ಮೂರೇ ದಿನಕ್ಕೆ ಸೈನಿಕರೊಬ್ಬರು ದೇಶ ಸೇವೆಗೆ ವಾಪಸ್ ತೆರಳಿದ್ದಾರೆ. ಹೌದು, ಮಹಾರಾಷ್ಟ್ರದ ಜಳಗಾಂವ್‌ನ ಪಾಚೋರಾದ ಯೋಧ ಮನೋಜ್ ಪಾಟೀಲ್ ಮದುವೆ ಇದೇ ಮೇಲೆ 5ರಂದು ಅದ್ದೂರಿಯಾಗಿ ನೆರವೇರಿತು. ಇತ್ತ ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದ್ರೆ, ಅತ್ತ ಭಾರತ-ಪಾಕ್ ಗಡಿಯಲ್ಲಿ ಆಕ್ರಮಣಕಾರಿ ದಾಳಿ ನಡೆಯುತ್ತಿದೆ.
ಇದನ್ನೂ ಓದಿ: ಕರಾಚಿ ಮೇಲೆ ಭಾರತ ಕ್ಷಿಪಣಿ, ಡ್ರೋಣ್ ಅಟ್ಯಾಕ್.. ಖತಂ ಆಗ್ತಾನಾ ದಾವೂದ್ ಇಬ್ರಾಹಿಂ..?
ಈ ಹಿನ್ನೆಲೆಯಲ್ಲಿ ಮನೋಜ್ ಕುಮಾರ್ಗೆ ತುರ್ತಾಗಿ ಸೇನೆಯಿಂದ ಕರೆ ಬಂದಿದೆ. ಮಹಾರಾಷ್ಟ್ರದ ಮನೋಜ್ ಪಾಟೀಲ್ ಹಾಗೂ ನಾಚಂಖೇಡೆಯ ರಾಮಚಂದ್ರ ಪಾಟೀಲ್ ಅವರ ಪುತ್ರಿ ಯಾಮಿನಿ ಅವರಿಗೆ ಮೇ.5 ರಂದು ಅದ್ದೂರಿ ಮದುವೆ ನಿಶ್ಚಯವಾಗಿತ್ತು. ಇದರಿಂದಾಗಿ ಮನೋಜ್ ರಜೆ ಹಾಕಿ ಹಳ್ಳಿಗೆ ಬಂದಿದ್ರು. ಇತ್ತ ಮದುವೆ ಸಂಭ್ರಮದ ನಡುವೆಯೇ ಯೋಧ ಮನೋಜ್ ಪಾಟೀಲ್ ಅವರಿಗೆ ಸೇನೆಯಿಂದ ಕರೆ ಬಂದಿತ್ತು. ತುರ್ತಾಗಿ ಸೇನೆಯಲ್ಲಿ ಸೇರಿಕೊಳ್ಳುವಂತೆ ಸೂಚಿಸಲಾಗಿತ್ತು. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಯುದ್ಧದ ಆತಂಕ ಶುರುವಾಯಿತು.
ಇತ್ತ ಮದುವೆಯಾದ ಮೂರನೇ ದಿನ ಮಗನನ್ನ ಸೇನೆಗೆ ಕಳುಹಿಸಬೇಕಲ್ಲಾ ಎಂದು ಪೋಷಕರು ಚಿಂತಿತರಾಗಿದ್ರೆ, ಪತಿಯೊಂದಿಗೆ ಜೀವನದ ಸುಂದರ ಕನಸು ಕಂಡಿದ್ದ ಪತ್ನಿ ಯಾಮಿನಿ ಕಣ್ಣೀರಿಡುತ್ತಾ ಮೌನಕ್ಕೆ ಜಾರಿದ್ದರು. ಈ ವೇಳೆ ಮನೋಜ್ ಪಾಟೀಲ್ ಏನು ಮಾಡಲಾಗದೇ ಸೇನೆಗೆ ಹೊರಟು ನಿಂತ್ರೆ, ಯೋಧನ ಕೈ ಹಿಡಿದ ಸಂಗಾತಿ ಆತನಿಗೆ ಧೈರ್ಯ ತುಂಬುತ್ತಾ ನನಗೆ ದೇಶ ಸೇವೆ ಮುಖ್ಯ. ನನ್ನ ಕುಂಕುಮವನ್ನು ಗಡಿಗೆ ಕಳಿಸುತ್ತಿರುವುದು ನನಗೆ ಹೆಮ್ಮೆ ಇದೆ ಎಂದು ಕಣ್ಣೀರು ಹಾಕಿದ್ದಾರೆ.
ಇದೀಗ ಮೇ.8ನೇ ತಾರೀಕು ಮನೋಜ್ ಪಾಟೀಲ್ ದೇಶ ಸೇವೆಗೆ ಹೊರಡುವ ಸಮಯ ಬಂದೇ ಬಿಟ್ಟಿತು. ಒಂದು ಕಡೆ ಮನೆಯವರು ಮದುವೆಯ ಮೂರನೇ ದಿನಕ್ಕೆ ಗಡಿಗೆ ಕಳುಹಿಸಲು ಇಷ್ಟವಿಲ್ಲದಿದ್ದರೂ,ದೇಶ ಸೇವೆಯೇ ಮುಖ್ಯ ಅಂತ ಮಗನ ಜೊತೆ ನಿಂತರು. ಇತ್ತ ಪತ್ನಿ ಕೂಡ ಗಂಡನಿಗೆ ಧೈರ್ಯ ಹೇಳುತ್ತಾ ರೈಲ್ವೇ ನಿಲ್ದಾಣದ ಕಡೆಗೆ ಹೊರಟು ಬಿಟ್ಟರು. ಯೋಧ ಮನೋಜ್ ಪಾಟೀಲ್ ಅರಿಶಿನ ಹಚ್ಚಿದ ದೇಹ, ಕೈಯಲ್ಲಿ ಮೆಹಂದಿಯೊಂದಿಗೆ ಗಡಿಗೆ ದೇಶ ಸೇವೆಗೆ ಹೊರಟರು. ಈ ವೇಳೆ ಪತ್ನಿ ದೇಶ ಸೇವೆಗೆ ಹೊರಡುತ್ತಿರುವ ಪತಿಗೆ ಕಣ್ಣೀರ ವಿದಾಯ ಹೇಳಿದ್ದು, ಒಂದು ಕ್ಷಣ ಇಡೀ ರೈಲ್ವೇ ನಿಲ್ದಾಣವೇ ಕಣ್ಣೀರ ಕಡಲಲ್ಲಿ ಮುಳುಗಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ