/newsfirstlive-kannada/media/post_attachments/wp-content/uploads/2025/05/SURENDRA_KUMAR.jpg)
ಜಮ್ಮುಕಾಶ್ಮೀರದ ಉಧಂಪುರ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆ (ಐಎಎಫ್)ಯಲ್ಲಿ ಸಹಾಯಕ ವೈದ್ಯಕೀಯ ಸಾರ್ಜೆಂಟ್ (Assistant Medical Sergeant) ಆಗಿ ಕೆಲಸ ಮಾಡುತ್ತಿದ್ದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ರಾಜಸ್ತಾನ ಜುಂಜುವು ಜಿಲ್ಲೆಯ ಮಾಂಡವಾ ಪ್ರದೇಶದ ಮೆಹ್ರಾದಸಿ ಗ್ರಾಮದ ನಿವಾಸಿಯಾದ ಯೋಧ ಸುರೇಂದ್ರ ಕುಮಾರ್ ಮೋಗಾ ಅವರು ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಸುರೇಂದ್ರ ಅವರನ್ನು ಜಮ್ಮುವಿನಿಂದ 40 ಕಿ.ಮೀ ದೂರದಲ್ಲಿ ಇರುವ ಉಧಂಪುರ ವಾಯುನೆಲೆಯಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಇವರು ಸೇನೆಯಲ್ಲಿ ವೈದ್ಯಕೀಯದ 39ನೇ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇದಕ್ಕೂ ಮೊದಲು ಸುರೇಂದ್ರ ಕುಮಾರ್ ಅವರನ್ನು ಲಕ್ನೋದಲ್ಲಿ ನಿಯೋಜಿಸಲಾಗಿತ್ತು. ಎರಡು ತಿಂಗಳ ಹಿಂದಷ್ಟೇ ಉಧಂಪುರಕ್ಕೆ ವರ್ಗಾವಣೆ ಮಾಡಲಾಗಿತ್ತು. ಕೊನೆಯ ಬಾರಿ ಏಪ್ರಿಲ್‌ನಲ್ಲಿ ತನ್ನ ಹುಟ್ಟೂರುಗೆ ಹೋಗಿ ಅಲ್ಲಿ ತಮ್ಮ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದರು. ತಂದೆ, ತಾಯಿಗೆ ಸುರೇಂದ್ರ ಸಿಂಗ್ ಅವರು ಒಬ್ಬನೇ ಮಗನಾಗಿದ್ದು ಈಗ ಅವರು ಹುತಾತ್ಮರಾಗಿರುವುದು ನೋವಿನ ಸಂಗತಿ. ಇವರ ತಂದೆ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
1990ರ ಸೆಪ್ಟೆಂಬರ್ 8 ರಂದು ಸುರೇಂದ್ರ ಕುಮಾರ್ ಅವರು ಜನಿಸಿದ್ದರು. ಸುಮಾರು 14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸುರೇಂದ್ರ ಏಪ್ರಿಲ್ 15 ರಂದು ತಮ್ಮ ಕರ್ತವ್ಯಕ್ಕೆ ಮರಳಿದ್ದರು. ಅವರು ಮಾರ್ಚ್ 29 ರಂದು ಹುಟ್ಟೂರಿಗೆ ಭೇಟಿ ಕೊಟ್ಟಿದ್ದ ಅವರು ಮತ್ತೆ ಏಪ್ರಿಲ್ 15 ರಂದು ಕರ್ತವ್ಯಕ್ಕೆ ವಾಪಸ್ ಆಗಿದ್ದರು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ