ಟ್ರೆಂಡ್ ಆಗ್ತಿದೆ ಹೆಣ್ಮಕ್ಕಳ ಸೋಲೋ ಟ್ರಿಪ್; ಯುವತಿಯರು ಇದನ್ನು ಪಾಲಿಸಿದರೆ ಜರ್ನಿ ಇನ್ನಷ್ಟು ಈಸಿ!

author-image
Veena Gangani
Updated On
ಟ್ರೆಂಡ್ ಆಗ್ತಿದೆ ಹೆಣ್ಮಕ್ಕಳ ಸೋಲೋ ಟ್ರಿಪ್; ಯುವತಿಯರು ಇದನ್ನು ಪಾಲಿಸಿದರೆ ಜರ್ನಿ ಇನ್ನಷ್ಟು ಈಸಿ!
Advertisment
  • ಟ್ರಿಪ್​ಗೆ ಹೋಗಬೇಕೆಂದು ಪ್ಲಾನ್​ ಮಾಡುತ್ತಿದ್ದರೇ ಈ ಸ್ಟೋರಿ ಓದಿ
  • ನೀವೂ ಏಕಾಂಗಿಯಾಗಿ ಪ್ರಯಾಣ ಮಾಡಲು ಬಯಸುತ್ತಿದ್ದೀರಾ?
  • ನಡೆಯಲು ಆರಾಮದಾಯಕವಾಗಿ ಇರುವ ಹಾಗೇ ನೋಡಿಕೊಳ್ಳಬೇಕು

ಈಗಿನ ಯುವತಿಯರಿಗೆ ಏಕಾಂಗಿಯಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ಸ್ವತಂತ್ರವಾಗಿ ಪ್ರಯಾಣಿಸುತ್ತಿದ್ದಾರೆ. ಅದರಲ್ಲೂ ಹಗಲು ರಾತ್ರಿ ಎನ್ನದೇ ಟ್ರಾವೆಲ್​ ಮಾಡ್ತಾ ಇರುತ್ತಾರೆ. ಆದರೆ ಈ ವೇಳೆ ಮಹಿಳೆಯರಿಗೆ ಕೆಲವೊಂದು ಅಗತ್ಯ ವಸ್ತುಗಳು ಇಟ್ಟುಕೊಳ್ಳಬೇಕಾಗುತ್ತೆ. ಅದರ ಜೊತೆಗೆ ಮಹಿಳೆಯರು ಕೆಲವೊಂದು ಅಗತ್ಯ ಸಲಹೆಗಳನ್ನು ತಿಳಿದುಕೊಳ್ಳಿ.

publive-image

ಸಾಮಾನ್ಯವಾಗಿ ಮಹಿಳೆಯರು ಒಂಟಿಯಾಗಿ ಟ್ರಾವೆಲ್ ಮಾಡುತ್ತಿದ್ದರೇ ಬಹುಮುಖವಾಗಿ ಅವರು ಇಟ್ಟುಕೊಳ್ಳಬಹುದಾದ ಅಂಶ ಎಂದರೆ ಅದು ಉಡುಪುಗಳು. ವೆಕೆಶನ್​ಗೆ ತಕ್ಕಂತೆ ಉಡುಗಳನ್ನು ತೆಗೆದಿಟ್ಟುಕೊಳ್ಳಿ. ಅದರ ಜೊತೆಗೆ ಒಳ ಬಟ್ಟೆಗಳನ್ನು ಇಟ್ಟುಕೊಂಡರೇ ಉತ್ತಮ. ಟ್ರಿಪ್​ಗೆ ಹೋಗಬೇಕಾದಾಗ ಹಗುರವಾದ ಬಟ್ಟೆಗಳನ್ನು ಇಟ್ಟುಕೊಂಡರೇ ಒಳ್ಳೆಯದು.

ಇದನ್ನೂ ಓದಿ:ಹೆಣ್ಣಿಗೆ ಕುಂಕುಮವೇ ಅಂದ ಚೆಂದ.. ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು? ತಪ್ಪದೇ ಈ ಸ್ಟೋರಿ ಓದಿ!

publive-image

ಏಕೆಂದರೆ ಹೋಗುವ ಸ್ಥಳದಲ್ಲಿ ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ. ಉದಾಹರಣೆಗೆ ಸ್ಕಾರ್ಫ್, ಶಾಲು, ಕಂಬಳಿ ಅಥವಾ ಬೀಚ್ ಕವರ್ ಡ್ರೇಸ್​ ಅಪ್‌ (Beach Cover Up Dress) ಸೇರಿದಂತೆ ಬೆಟ್ಟೆಗಳನ್ನು ಇಟ್ಟುಕೊಂಡರೇ ಉತ್ತಮ. ಇನ್ನು, ನೀವು ಟ್ರಿಪ್​ಗೆ ತೆಗೆದುಕೊಂಡು ಹೋಗುವ ಬ್ಯಾಗ್​ನಲ್ಲಿ ಒಂದು ಅಥವಾ ಎರಡು ಶೂಗಳು ಸಾಕಷ್ಟು ಜಾಗವನ್ನು ತೆಗೆದುಕೊಳ್ಳಬಹುದು. ಹಾಗಾಗಿ ನಿಮ್ಮ ಬ್ಯಾಗ್​ನಲ್ಲಿ ಅನಗತ್ಯ ತೂಕವನ್ನು ಸೇರಿಸಬೇಡಿ. ನಡೆಯಲು ಆರಾಮದಾಯಕವಾಗಿ ಇರುವ ಹಾಗೇ ನೋಡಿಕೊಳ್ಳಬೇಕು.

publive-image

ಏಕಾಂಗಿಯಾಗಿ ಮಹಿಳಾ ಪ್ರಯಾಣಿಸುವಾಗ ಸುರಕ್ಷತೆಗೆ ಅತಿ ಹೆಚ್ಚು ಆದ್ಯತೆ ನೀಡಿವುದು ಇಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಬೆಲೆಬಾಳುವ ವಸ್ತುಗಳನ್ನು ಯಾವಾಗಲೂ ನಿಮ್ಮ ಹತ್ತಿರ ಇರಿಸಿಕೊಳ್ಳಬೇಡಿ. ಬದಲಾಗಿ ಸಣ್ಣ ಕ್ರಾಸ್‌ಬಾಡಿ ಬ್ಯಾಗ್ ಅಥವಾ ಮನಿ ಬೆಲ್ಟ್ ಅನ್ನು ಪ್ಯಾಕ್ ಮಾಡಿ. ಅಲ್ಲದೆ, ನಿಮ್ಮ ಪಾಸ್‌ಪೋರ್ಟ್‌ನ ಫೋಟೋಕಾಪಿ, ತುರ್ತು ಸಂಪರ್ಕಗಳು ಮತ್ತು ಯಾವುದೇ ಪ್ರಮುಖ ಪ್ರಯಾಣ ದಾಖಲೆಗಳನ್ನು ಮೂಲದಿಂದ ಪ್ರತ್ಯೇಕ ಸ್ಥಳದಲ್ಲಿ ಇರಿಸಿ. ಇದರ ಜೊತೆಗೆ ಮುಖ್ಯವಾಗಿ ಪಾಡ್ಸ್, ನಿಮಗೆ ಬೇಕಾದ ಮೇಕಪ್ ಸೆಟ್, ವಾಟರ್​ ಬಾಟಲ್ ತೆಗೆದುಕೊಂಡು ಹೋಗುವುದನ್ನು ಮರೆಯದಿರಿ.

ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ದುಬಾರಿ ಕಾರು ಖರೀದಿಸಿದ ಲಕ್ಷ್ಮೀ ನಿವಾಸ ಸೀರಿಯಲ್​ ಬಾಲ ನಟಿ ಖುಷಿ; ಬೆಲೆ ಎಷ್ಟು?

publive-image

ಪ್ಯಾಕಿಂಗ್ ಲೈಟ್ ನಿಮ್ಮ ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸುತ್ತದೆ. ಆದರೆ ನಿಮ್ಮ ಲಗೇಜ್ ಬಗ್ಗೆ ಚಿಂತಿಸದೆ ಸುಲಭವಾಗಿ ತಿರುಗಾಡಲು ಮತ್ತು ನಿಮ್ಮ ಪ್ರವಾಸವನ್ನು ಆನಂದಿಸಲು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತದೆ. ಈ ಸಲಹೆಗಳೊಂದಿಗೆ ನಿಮ್ಮ ಏಕಾಂಗಿ ಪ್ರಯಾಣಕ್ಕೆ ಆತ್ಮವಿಶ್ವಾಸದಿಂದ ಹೊಸ ಸ್ಥಳಗಳನ್ನು ಅನ್ವೇಷಿಸಲು ಸಿದ್ಧರಾಗಿರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment