newsfirstkannada.com

ಬೆಂಗಳೂರು PSIಗಳ ಮೊದಲ ಆಯ್ಕೆ ಸಂಪತ್ತು ಭರಿತ ಠಾಣೆಗಳು..? ಅನುಮಾನಗಳನ್ನು ಹುಟ್ಟುಹಾಕಿದ ಈ ಕೌನ್ಸಿಲಿಂಗ್..!

Share :

Published February 4, 2024 at 2:32pm

    ಮೂರು ದಿನಗಳ ಹಿಂದೆ 218 ಪಿಎಸ್​ಐಗಳ ವರ್ಗಾವಣೆ

    ವರ್ಗಾವಣೆಗೂ ಮೊದಲು ಕೌನ್ಸಿಲಿಂಗ್ ನಡೆಸಿದ್ದ ಇಲಾಖೆ

    ಆಡುಗೋಡಿ ಠಾಣೆಯ ಜವಾಬ್ದಾರಿ ಯಾರಿಗೂ ಬೇಡ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಆಗುತ್ತಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಕಳೆದ ಮೂರು ದಿನಗಳ ಹಿಂದೆ 218 ಪಿಎಸ್​ಐಗಳನ್ನು ವರ್ಗಾವಣೆ ಮಾಡಿದೆ. ಲೇಟೆಸ್ಟ್ ವಿಚಾರ ಏನೆಂದರೆ ಈ ವರ್ಗಾವಣೆ ವಿಚಾರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಯಾಕೆ ಚರ್ಚೆ ಆಗ್ತಿದೆ..?
ಪೊಲೀಸ್ ಅಧಿಕಾರಿಗಳು ವರ್ಗಾವಣೆ ಮಾಡುವ ಸಂಬಂಧ ಇಲಾಖೆ ಕೌನ್ಸಿಲಿಂಗ್ ನಡೆಸಿತ್ತು. ಪಿಎಸ್​ಐಗಳ ವರ್ಗಾವಣೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕೌನ್ಸಿಲಿಂಗ್ ನಡೆಸಿದ್ದರು. ಈ ವೇಳೆ ಬೆಂಗಳೂರಿನ ಬಹುತೇಕ ಪೊಲೀಸ್ ಅಧಿಕಾರಿಗಳು ಸಂಪತ್ತು ಭರಿತ ಠಾಣೆಗಳೇ ಅವರ ಮೊದಲ ಆಯ್ಕೆ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಬೆಂಗಳೂರು ಸಬ್ ಇನ್ಸ್​ಪೆಕ್ಟರ್ಸ್​ ಮೊದಲ ಆಯ್ಕೆ ಸಂಪತ್ತು ಭರಿತ ಠಾಣೆಗಳು ಮಾತ್ರನಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಯಾವೆಲ್ಲ ಠಾಣೆಗಳ ಆಯ್ಕೆ..?
ಪಿಎಸ್​ಐಗಳ ಆಯ್ಕೆ ಇದ್ದಿದ್ದು ಕಬ್ಬನ್ ಪಾರ್ಕ್ ,ಅಶೋಕ್ ನಗರ,  ಪೀಣ್ಯ, ಕೋರಮಂಗಲ, ಕೆ.ಆರ್ ಪುರಂ ಠಾಣೆಗಳಿಗೆ ಹೆಚ್ಚು ಬೇಡಿಕೆ ಇದ್ದವಂತೆ. ಆಗ್ನೇಯ ವಿಭಾಗದ ಆಡುಗೋಡಿಗೆ ಠಾಣೆಯನ್ನು ಒಬ್ಬನೇ ಒಬ್ಬ ಪಿಎಸ್ಐ ಆಯ್ಕೆ ಮಾಡಿಕೊಂಡಿಲ್ಲ ಎನ್ನಲಾಗಿದೆ. ಈಗಾಗಲೇ ಠಾಣೆಯಲ್ಲಿದ್ದ ನಾಲ್ಕು ಪಿಎಸ್ಐಗಳಲ್ಲಿ ಮೂವರು ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅಲ್ಲಿಗೆ ಆಡುಗೋಡಿ ಠಾಣೆಯಲ್ಲಿ ಓರ್ವ ಸಬ್ ಇನ್ಸ್​ಪೆಕ್ಟರ್ ಬಿಟ್ಟು ಬಿಟ್ಟು ಬೇರೆ ಪಿಎಸ್ಐ ಇಲ್ಲ.

ಯಾಕೆ ಆಡುಗೋಡಿ ಠಾಣೆ ಆಯ್ಕೆ ಅಲ್ಲ..?
ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿದೆ ಎನ್ನಲಾಗಿರುವ ಚರ್ಚೆಗಳ ಪ್ರಕಾರ, ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶೇಕಡಾ 75 ರಷ್ಟು ಸ್ಲಂ ಪ್ರದೇಶ ಬರಲಿದೆ. ಇದೇ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಗಲಾಟೆ , ಕೊಲೆ, ಕೊಲೆ ಯತ್ನ, ರೌಡಿ ಚಟುವಟಿಗಳು ಹೆಚ್ಚಾಗಿ ನಡೆಯುತ್ತವೆ. ಹೈ ರಿಸ್ಕ್ ಇದೆ ಅನ್ನೋ ಕಾರಣಕ್ಕೆ ಆಡುಗೋಡಿ ಠಾಣೆಯನ್ನು ಆಯ್ಕೆ ಮಾಡಿಕೊಳ್ಳಲು ಪಿಎಸ್​ಐಗಳು ಹಿಂದೇಟು ಹಾಕಿತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮೊನ್ನೆ ನಡೆದ ಕೌನ್ಸಿಲಿಂಗ್​ನಲ್ಲಿ ಯಾವೊಬ್ಬ ಪಿಎಸ್​ಐ ಕೂಡ ಆಡುಗೋಡಿಯಂಥ ಅನೇಕ ಠಾಣೆಗಳನ್ನು ಆಯ್ಕೆ ಮಾಡಿಕೊಳ್ಳದೇ ಇರೋದು ಈ ಅನುಮಾನಗಳಿಗೆ ಕಾರಣವಾಗಿದೆ. ಹೆಚ್ಚಾಗಿ ಒಳ ವ್ಯವಹಾರಗಳ ಮೂಲಕ ಸಂಪತ್ತು ಸಿಗುವ ಠಾಣೆಗಳೇ ಕೆಲವು ಅಧಿಕಾರಿಗಳ ಆಯ್ಕೆ ಎನ್ನಲಾಗುತ್ತಿದೆ. ಇದಕ್ಕೆಲ್ಲ ಕಾರಣ ಕೌನ್ಸಿಲಿಂಗ್ ಬಳಿಕ ಎದ್ದಿರುವ ಪ್ರಶ್ನೆಗಳು ಮತ್ತು ಪಿಎಸ್​ಐಗಳು ಆದ್ಯತೆ ನೀಡುತ್ತಿರುವ ಠಾಣೆಗಳಾಗಿವೆ.

ವಿಶೇಷ ವರದಿ: ಪ್ರಜ್ವಲ್ ನಿಟ್ಟೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು PSIಗಳ ಮೊದಲ ಆಯ್ಕೆ ಸಂಪತ್ತು ಭರಿತ ಠಾಣೆಗಳು..? ಅನುಮಾನಗಳನ್ನು ಹುಟ್ಟುಹಾಕಿದ ಈ ಕೌನ್ಸಿಲಿಂಗ್..!

https://newsfirstlive.com/wp-content/uploads/2024/02/ADUGODI-POLICE.jpg

Load More