/newsfirstlive-kannada/media/post_attachments/wp-content/uploads/2025/03/HAPPY-MOOD.jpg)
ಇದು ಕಾಲದ ಹಿಂದೆ ನಿರಂತರವಾಗಿ ಓಡುವ ಅನಿವಾರ್ಯತೆ ಸೃಷ್ಟಿಯಾಗಿರುವ ಜಗತ್ತು. ಆಧುನಿಕ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರಂತರವಾಗಿ ನಾವು ಬದುಕಿನ ಓಟದ ವೇಗವನ್ನು ಹೆಚ್ಚಿಸುತ್ತಲೇ ಇರಬೇಕು. ನಿತ್ಯವೂ ಬ್ಯುಸಿ ಲೈಫ್ನಿಂದಾಗಿ ನಾವು ಸದಾ ಒತ್ತಡದಲ್ಲಿಯೇ ಬದುಕುತ್ತಿದ್ದೇವೆ. ಸಣ್ಣ ಸಣ್ಣ ಖುಷಿಗಳನ್ನು ಕೂಡ ಸಂಭ್ರಮಿಸದಷ್ಟು ದುಃಖಿತ ಭಾವಸ್ಥಿತಿ ಜಗತ್ತಿನದು. ನಮ್ಮನ್ನು ನಾವು ಖುಷಿಯಾಗಿಟ್ಟುಕೊಳ್ಳುವದನ್ನೇ ಮರೆತುಬಿಟ್ಟಿದ್ದೇವೆ ಎಂಬುದಂತೂ ಅಕ್ಷರಶಃ ಸತ್ಯ.
ನೀವು ಕೂಡ ಯಾವುದೇ ಟೆನ್ಶನ್ ಇಲ್ಲದೇ, ಸದಾ ಹಸನ್ಮುಖಿಯಾಗಿರಬೇಕಾದರೆ, ಕೆಲವು ಟಿಪ್ಸ್ಗಳನ್ನು ಫಾಲೋ ಮಾಡಬೇಕು.
ಅದರಲ್ಲಿ ಮೊದಲನೇಯದು ನಿಮ್ಮನ್ನು ನೀವು ಸದಾ ಪಾಸಿಟಿವ್ ಆಗಿ ಇಟ್ಟುಕೊಳ್ಳಿ. ಪಾಸಿಟಿವ್ ವಿಚಾರಗಳನ್ನು ನಿಮ್ಮದಾಗಿಸಿಕೊಳ್ಳಿ. ನಿಮ್ಮೊಂದಿಗೆ ನೀವೇ ಪಾಸಿಟಿವ್ ಮಾತುಗಳನ್ನು ಆಡಿ. ಸ್ವಯಂ ಪ್ರೇರಿತರಾಗಿ. ನಮ್ಮನ್ನು ಖುಷಿ ಪಡಿಸಲು ಬೇರೆಯವರಿಗಾಗಿ ಕಾಯುವುದು ಬೇಡ.
ನಿಮ್ಮ ಬಗ್ಗೆ ನಿಮಗೆ ಜ್ಞಾನವಿರಲಿ, ಅರಿವಿರಲಿ. ನಿಮ್ಮ ಕೌಶಲ್ಯದ ಮೇಲೆ ಹೆಚ್ಚು ಫೋಕಸ್ ಆಗಿರಿ ಇದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮವಿಶ್ವಾಸವೂ ಹೆಚ್ಚುತ್ತದೆ. ಇದರಿಂದ ನೀವು ಖುಷಿ ಖುಷಿಯಾಗಿರಬಹುದು.
ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ನಿಮ್ಮನ್ನು ನೀವು ಸದಾ ಸುರಕ್ಷಿತವಾಗಿಟ್ಟುಕೊಳ್ಳಲು ನೋಡಿ ನಿತ್ಯ ಅರ್ಧ ಗಂಟೆ ವ್ಯಾಯಾಮ ಇಲ್ಲವೇ ಧ್ಯಾನ ಅಥವಾ ಪ್ರಾಣಾಯಾಮದಲ್ಲಿ ತೊಡಗಿಕೊಳ್ಳಿ. ಇದು ನಿಜಕ್ಕೂ ನಮ್ಮ ಮಾನಸಿಕ ಹಾಗೂ ದೈಹಿಕವಾಗಿ ನಿಮ್ಮನ್ನು ನಿರಾಳತೆಗೆ ಕೊಂಡೊಯ್ಯುತ್ತದೆ.
ಶಾಪಿಂಗ್, ಸ್ಕಿನ್ ಕೇರ್ ಇಲ್ಲವೇ ಫನ್ನಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿ ಇದು ನಿಮಗೆ ಒಂದು ನಿಮಗೊಂದು ಒಳ್ಳೆಯ ಅನುಭೂತಿಯ ಅನುಭವ ಕೊಡುವುದು. ಓದು, ಶಾಪಿಂಗ್, ಸಮಾನ ಮನಸ್ಕರರೊಂದಿಗೆ ಹರಟೆ, ಇವೆಲ್ಲವೂ ಕೂಡ ನಿಮ್ಮನ್ನು ಖುಷಿಯಾಗಿಡುವಲ್ಲಿ ಸಹಾಯಕವಾಗುತ್ತವೆ.
ನಿಮ್ಮಲ್ಲಿ ಸದಾ ಕೊರತೆಯನ್ನೊಂದೇ ಅಥವಾ ನ್ಯೂನ್ಯತೆಗಳನ್ನಷ್ಟೇ ಹುಡುಕಿಕೊಂಡು ಮಾತನಾಡುವ ಹಾಗೂ ಲೇವಡಿ ಮಾಡುವ. ಅದನ್ನೇ ಅವರ ವಿಕೃತ ಆನಂದಕ್ಕಾಗಿ ಸರಕು ಮಾಡಿಕೊಳ್ಳುವವರಿಂದ ಸದಾ ದೂರವಿರಿ.
ಇನ್ನೊಂದು ಅತಿ ಮುಖ್ಯ ವಿಷಯವೆಂದರೆ ಜಗತ್ತಿನಲ್ಲಿ ಯಾರು ಪರಿಪೂರ್ಣರಲ್ಲ. ಎನಾದರೂ ಒಂದು ಕೊರತೆಯನ್ನು ಹೊಂದಿಯೇ ಹೊಂದಿರುತ್ತಾರೆ. ಯಾವುದಾದರೂ ಒಂದು ಬಲಹೀನತೆ ಇದ್ದೇ ಇರುತ್ತದೆ. ಹೀಗಾಗಿ ನಿಮ್ಮನ್ನು ನೀವು ಎಂದಿಗೂ ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಲು ಹೋಗಬೇಡಿ ಇದು ತುಂಬಾ ಅಪಾಯಕಾರಿ. ಜಗತ್ತಿನ ಎಂತಹ ಸುಂದರಿಯಾದರೂ ಸರಿ ತುಟಿಗೊಂದ ಸಣ್ಣ ಬಣ್ಣ ಹಚ್ಚಿಕೊಂಡೇ ಆಚೆ ಬರುತ್ತಾಳೆ, ಕಾರಣ ತನ್ನಲ್ಲಿರುವ ಯಾವುದೋ ಒಂದು ಕೊರತೆಯನ್ನು ಮುಚ್ಚಿಟ್ಟುಕೊಳ್ಳುತ್ತಿದ್ದಾಳೆ ಅಂತಲೇ ಅರ್ಥವಲ್ಲವೇ? ಹೀಗಾಗಿ ನೀವು ಇನ್ನೊಬ್ಬರೊಂದಿಗೆ ನಿಮ್ಮನ್ನು ಹೋಲಿಸಿಕೊಂಡು, ನೀವು ಅವರಿಗಿಂತ ಕಮ್ಮಿ ಎಂದು ಎಂದಿಗೂ ಭಾವಿಸಬೇಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ