/newsfirstlive-kannada/media/post_attachments/wp-content/uploads/2024/08/sanjay-Kolar.jpg)
ಸಾವು ಹೇಗೆ ಬೇಕಾದರೂ ಬರಬಹುದು. ನಿಂತಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದವರು ಇದ್ದಾರೆ. ಮಲಗಿದಲ್ಲೇ ಕೊನೆಯುಸಿರೆಳೆದವರು ಇದ್ದಾರೆ. ಆದರೆ ಮನೆಗೆ ಬೆಳಕಾಗಿದ್ದ ಮಗನೋರ್ವ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.
ಹೌದು. ಮನೆ ಬಳಿ ಕಾಲು ಜಾರಿ ಬಿದ್ದು ತಲೆಗೆ ಗಾಯವಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಆದರೆ ಸಾವಿನಲ್ಲೂ ಸಾರ್ಥಕತೆ ಮೆರೆಯುವ ಮೂಲಕ ಅನೇಕರ ಬಾಳಿಗೆ ಬೆಳಕಾಗಿದ್ದಾನೆ.
ಇದನ್ನೂ ಓದಿ: ಸಾವಿನ ಸಂಖ್ಯೆ 18ಕ್ಕೆ ಏರಿಕೆ, 40ಕ್ಕೂ ಹೆಚ್ಚು ಜನರಿಗೆ ಗಾಯ.. ಫಾಕ್ಟರಿ ಸ್ಫೋಟದಲ್ಲಿ 380 ಮಂದಿ ಏನಾದ್ರು?
ಕೋಲಾರ ನಗರದ ಅಂಬೇಡ್ಕರ್ ನಗರದ ನಿವಾಸಿ ಸಂಜೀವಪ್ಪ ಹಾಗೂ ವಿಜಯ್ ಕುಮಾರಿ ದಂಪತಿಗಳ ಏಕೈಕ ಪುತ್ರ ಸಂಜಯ್. ಇತ್ತೀಚೆಗೆ ಕಾಲು ಜಾರಿ ಬಿದ್ದು ತಲೆಗೆ ಗಾಯವಾಗಿ ತಲೆಯಲ್ಲಿ ರಕ್ತ ಹೆಪ್ಪು ಗಟ್ಟಿತ್ತು, ಪರಿಣಾಮ ಆತನನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆರ್.ವಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇದನ್ನೂ ಓದಿ: ಮೊಬೈಲ್ ರಿಟ್ರೀವ್, ದರ್ಶನ್ಗೆ ಮತ್ತಷ್ಟು ಸಂಕಷ್ಟ.. ಫೋನ್ನಲ್ಲಿ ಸಿಕ್ಕ ಆ 4 ಸತ್ಯಗಳೇನು?
ಬೆಂಗಳೂರಿನ ಆರ್.ವಿ ಆಸ್ಪತ್ರೆಗೆ ದಾಖಲಾದ ಸಂಜಯ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆದರೆ ಮಗನ ಸಾವಿನ ಬಳಿಕ ಆತನ ಪೋಷಕರು ಅಂಗಾಗಗಳನ್ನ ಬೇರೆ ಬೇರೆ ಆಸ್ಪತ್ರೆಗಳಿಗೆ ದಾನ ಮಾಡಿದ್ದಾರೆ.
ಇದನ್ನೂ ಓದಿ: 7 ವರ್ಷದಲ್ಲಿ ಬರೋಬ್ಬರಿ 10 ಲಕ್ಷ km ಕಾರ್ ಓಡಿಸಿದ ಟ್ರಾವೆಲರ್; ಈತನ ಮುಂದಿನ ಗುರಿಯೇನು?
ಸಂಜಯ್ ಹೃದಯ, ಕಣ್ಣು, ಕರಳು, ಕಿಡ್ನಿಯನ್ನ ದಾನ ಮಾಡಿ ತನ್ನ ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಸದ್ಯ ಸಂಜಯ್ ಮಾಡಿದ ಈ ಪುಣ್ಯದ ಕೆಲಸದಿಂದ ಅನೇಕರ ಬಾಳು ಬೆಳಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ