newsfirstkannada.com

ಈತ ಮಗನೋ? ರಾಕ್ಷಸನೋ? ಹೆತ್ತ ತಂದೆಯ ಕಪಾಳಕ್ಕೆ ಹೊಡೆದು, ತಾಯಿ ಕೂದಲೆಳೆದು ಮೃಗದಂತೆ ವರ್ತಿಸಿದ ಮಗ

Share :

Published March 4, 2024 at 10:58am

  ಹುಟ್ಟಿಸಿದ ತಂದೆ-ತಾಯಿ ಮೇಲೆ ಕೈ ಮಾಡಿದ ಮಗ

  ಅಪ್ಪನ ಕಪಾಳಕ್ಕೆ ಹೊಡೆದು, ಎದೆಗೆ ಒದ್ದ ಮಗ

  ತಾಯಿಯ ತಲೆಗೂದಲು ಎಳೆದು ಹೀನಾಯ ವರ್ತನೆ

ಮಗನೋರ್ವ ಆಸ್ತಿಗಾಗಿ ತಂದೆ-ತಾಯಿಗೆ ಸರಿಯಾಗಿ ಹೊಡೆದ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ನಡೆದಿದೆ. ತಾಯಿಯ ಕೂದಲು ಎಳೆದು ಮೃಗದಂತೆ ವರ್ತಿಸಿದ್ದಾನೆ. ತಂದೆಗೂ ಕಪಾಳಮೋಕ್ಷ ಮಾಡಿ ಕಾಲಲ್ಲಿ ಒದ್ದು ದುರ್ನಡತೆ ತೋರಿದ್ದಾನೆ.

ಶ್ರೀನಿವಾಸುಲು ರೆಡ್ಡಿ ತನ್ನ ತಂದೆ-ತಾಯಿಗೆ ಹೀನಾಯವಾಗಿ ಥಳಿಸಿದ ಆರೋಪಿ. ಅಣ್ಣನಿಗೆ ಭೂಮಿಯನ್ನು ನೀಡಿದ್ದರಿಂದ ಕೋಪಗೊಂಡ ಶ್ರೀನಿವಾಸುಲು ತಂದೆ-ತಾಯಿ ಮೇಲೆ ಹಗೆ ಸಾಧಿಸಿದ್ದಾನೆ. ಆಸ್ತಿಯನ್ನು ನೀಡದಕ್ಕೆ ತಂದೆ-ತಾಯಿಗೆ ಥಳಿಸಿದ್ದಾನೆ.

ಪೋಷಕರಿಗೆ ಹೀನಾಯವಾಗಿ ಥಳಿಸಿದ ಮಗನ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸದ್ಯ ಶ್ರೀನಿವಾಸುಲು ರೆಡ್ಡಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಅರೆಸ್ಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈತ ಮಗನೋ? ರಾಕ್ಷಸನೋ? ಹೆತ್ತ ತಂದೆಯ ಕಪಾಳಕ್ಕೆ ಹೊಡೆದು, ತಾಯಿ ಕೂದಲೆಳೆದು ಮೃಗದಂತೆ ವರ್ತಿಸಿದ ಮಗ

https://newsfirstlive.com/wp-content/uploads/2024/03/Andra.jpg

Load More