ಉಸಿರು ಕೊಟ್ಟವನ ಉಸಿರನ್ನೇ ನಿಲ್ಲಿಸಿ ಬಿಟ್ಟ ಪಾಪಿ; ಬುದ್ಧಿವಾದ ಹೇಳಿದ್ದಕ್ಕೆ ತಂದೆಯ ಎದೆಗೆ ಇರಿದ ಪುತ್ರ

author-image
Gopal Kulkarni
Updated On
ಉಸಿರು ಕೊಟ್ಟವನ ಉಸಿರನ್ನೇ ನಿಲ್ಲಿಸಿ ಬಿಟ್ಟ ಪಾಪಿ; ಬುದ್ಧಿವಾದ ಹೇಳಿದ್ದಕ್ಕೆ ತಂದೆಯ ಎದೆಗೆ ಇರಿದ ಪುತ್ರ
Advertisment
  • ಕೆಲಸ ಕಾರ್ಯ ಇಲ್ಲದೆ ಎಣ್ಣೆ, ಡ್ರಗ್ಸ್ ದಾಸನಾಗಿದ್ದ ಅಮಿತ್
  • ಚಟದಿಂದ ಮುಕ್ತಿ ಹೊಂದಿ ಕೆಲಸ ಮಾಡು ಅಂತ ಬುದ್ಧಿವಾದ
  • ಇಷ್ಟಕ್ಕೆ ಕೋಪಗೊಂಡು ತಂದೆಗೆ ಚಾಕುವಿನಿಂದ ಇರಿದ ಮಗ

ನಶೆ, ಯಾವತ್ತಿದ್ರೂ ವಿಷ. ನಶೆಯಲ್ಲಿ ತೇಲಾಡಿಕೊಂಡು ಮಾಡೋ ಅಚಾತುರ್ಯಕ್ಕೆ ಅದೆಷ್ಟೋ ಜನರ ತಲೆ ದಂಡವಾಗಿರೋ ಸ್ಟೋರಿಗಳನ್ನ ಕೇಳಿರ್ತೀವಿ. ಈ ಲಿಸ್ಟ್​ಗೆ ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣ ಕೂಡ ಸೇರ್ಪಡೆಯಾಗಿದೆ. ಇದು ಜೀವ ಕೊಟ್ಟವನ ಜೀವ ತೆಗೆದ ಸ್ಟೋರಿ

ಇತ್ತೀಚಿನ ಸಿನಿಮಾಗಳಲ್ಲಿ ವೈಲೆನ್ಸ್​ ಸಿಕ್ಕಾಪಟ್ಟೆ ಆಗಿಬಿಟ್ಟಿದೆ. ರಕ್ತದ ಹರಿವು ಸಿನಿಮಾದ ಕಲೆಕ್ಷನ್ ಹರಿವನ್ನೂ ಹೆಚ್ಚಿಸ್ತಿದೆ. ಬರೀ ಸಿನಿಮಾಗಳಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಈಗಿನ ಜನರೇಷನ್ ವೈಲೆನ್ಸ್​ನ ಅಪ್ಪಿ ಮುದ್ದಾಡ್ತಿದೆ. ಅದಕ್ಕೆ ಸಾಕ್ಷಿಯೇ ಚಿಕ್ಕ ಚಿಕ್ಕ ವಿಚಾಕ್ಕೂ ಮರ್ಡರ್​ಗಳಾಗ್ತಿರೋದು. ಈಗಿನ ಕಾಲದ ಮಕ್ಕಳು ಹೇಗಿದ್ದಾರೆ ಅಂದ್ರೆ. ಹೆತ್ತವರು ಸ್ವಲ್ಪ ಬುದ್ಧಿವಾದ ಹೇಳಿದ್ರೆ ಸಾಕು. ಸಿಟ್ಟಿಗೆದ್ದು ದೇಹ ಸೀಳಿ ನೆತ್ತರನ್ನ ಹರಿಸಿಬಿಡೋವಷ್ಟು ಕಟುಕರಾಗಿದ್ದಾರೆ. ಎಣ್ಣೆ, ಡ್ರಗ್ಸ್​ ನಶೆಯಲ್ಲಿ ಮುಳುಗಿ ಜೀವ ಹಾಳು ಮಾಡಿಕೊಳ್ತಿದ್ದ ಮಗನಿಗೆ ನಿವೃತ್ತ ಸೈನಿಕ ತಂದೆ ಕೊಟ್ಟ ಉಪದೇಶ, ಜೀವ ಕೊಟ್ಟ ಅಪ್ಪನ ಉಸಿರನ್ನೇ ನಿಲ್ಲಿಸಿದೆ.

ಇದನ್ನೂ ಓದಿ:ಮೈಸೂರಲ್ಲಿ ಒಂದೇ ಕುಟುಂಬದ ನಾಲ್ವರು ಸಾವು; ಯಾರು ಈ ಚೇತನ್? ದುರಂತಕ್ಕೆ ಅಸಲಿ ಕಾರಣ ರಿವೀಲ್‌!

ಚನ್ನಬಸವಯ್ಯ, ಪಾಪಿ ಮಗ ಅಮಿತ್​ಗೆ ಜನ್ಮ ಕೊಟ್ಟ ತಂದೆ, ನಿವೃತ್ತ ಸೈನಿಕ ಕೂಡ. ರಿಟೈರ್ಮೆಂಟ್ ಲೈಫ್​ನಲ್ಲೂ ನೈಸ್ ರಸ್ತೆಯಲ್ಲಿ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ಮಾಡ್ತಿದ್ರು. ತೋಳೆತ್ತರಕ್ಕೆ ಬೆಳದ ಮಗ ನಮ್ಮನ್ನ ಸಾಕಿಲ್ಲ ಅಂದ್ರೂ ಪರವಾಗಿಲ್ಲ. ಅವನ ಜೀವನ ಚೆನ್ನಾಗಿರಲಿ ಅಂತಾ ಬುದ್ಧಿವಾದ ಹೇಳಿದ್ರು. ಚಟ ಬಿಡು.. ಅಂದಿದಕ್ಕೆ ಹೆತ್ತ ಮಗ ತಂದೆಗೆ ಚಟ್ಟ ಕಟ್ಟಿದ್ದಾನೆ. ಈ ಭಯಾನಕ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ನಡೆದಿದೆ.

ಇದನ್ನೂ ಓದಿ:ಬೆಂಗಳೂರಿಗರೇ ಎಚ್ಚರ.. ಇನ್ಮುಂದೆ ನೀರು ವೇಸ್ಟ್ ಮಾಡಿದ್ರೆ ಸ್ಥಳದಲ್ಲೇ ಬೀಳುತ್ತೆ ದಂಡ! ಎಷ್ಟು ಗೊತ್ತಾ?

21 ವರ್ಷದ ಅಮಿತ್ ಕೆಲಸ ಕಾರ್ಯ ಇಲ್ಲದ ಎಣ್ಣೆ, ಡ್ರಗ್ಸ್ ಅಂತ ನಶೆಗೆ ದಾಸನಾಗಿದ್ದ. ನಿವೃತ್ತ ಸೈನಿಕ ಚನ್ನಬಸವಯ್ಯ ನೈಸ್ ರಸ್ತೆಯಲ್ಲಿ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ಮಾಡಿ ಮಗನನ್ನ ಸಾಕುತ್ತಿದ್ರು. ಪ್ರತಿದಿನ ನಶೆ ವಿಚಾರಕ್ಕೆ ಗಲಾಟೆ ಆಗ್ತಿತ್ತು. ನಿನ್ನೆ ಸಹ ಇದೇ ವಿಚಾರಕ್ಕೆ ಗಲಾಟೆ ಶುರುವಾಗಿ ಚಟದಿಂದ ಮುಕ್ತಿ ಹೊಂದಿ ಕೆಲಸ ಮಾಡು ಅಂತ ಚನ್ನಬಸವಯ್ಯ ಬುದ್ಧಿವಾದ ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಮಗ ಅಮಿತ್, ತಂದೆ ಎದೆಗೆ ಚಾಕುವಿನಿಂದ ಭೀಕರವಾಗಿ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾದಲ್ಲಿ ಬಿದ್ದಿದ್ದ ಚನ್ನಬಸವಯ್ಯನನ್ನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆ ತಿಗಳರಪಾಳ್ಯದ ಕೆರೆ ಮುನೇಶ್ವರ ದೇವಸ್ಥಾನದ ಬಳಿ ನಡೆದಿರುವ ಘಟನೆ ನಡೆದಿದ್ದು, ಸದ್ಯ ಕೇಸ್ ದಾಖಲಿಸಿಕೊಂಡು ಆರೋಪಿ ಅಮಿತ್​ನನ್ನ ಬ್ಯಾಡರಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಪ್ಪನಿಗೆ ಚಾಕು ಇರಿದ ಅಮಿತ್​ ವಿಚಾರಣೆ ನಡೀತಿದೆ. ಘಟನೆ ಅಚಾನಕ್ಕಾಗಿ ಆಯ್ತಾ. ಇಲ್ಲ ಕೊಲೆ ಮಾಡ್ಲೇ ಬೇಕು ಅಂತಾ ಅಮಿತ್​ ಪ್ಲಾನ್​ ಮಾಡಿದ್ನಾ ಅನ್ನೋದು ವಿಚಾರಣೆ ಬಳಿಕವಷ್ಟೇ ತಿಳಿಬೇಕಿದೆ. ಅದೇನೇ ಇರಲಿ, ಪ್ರಪಂಚಕ್ಕೆ ಪರಿಚಯ ಮಾಡಿಸಿದ ತಂದೆಯನ್ನ ಪಾಪಿ ಕೊಂದ ಮುಗಿಸಿರೋದು ಕ್ಷಮಿಸಲಾರದ ಕೃತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment