newsfirstkannada.com

ಆನ್‌ಲೈನ್‌ ಗೇಮ್ ಚಟ; ಹಣಕ್ಕಾಗಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ

Share :

Published February 25, 2024 at 9:21pm

  ​ ಒಂದಲ್ಲ ಎರಡಲ್ಲ ಬರೋಬ್ಬರಿ 4 ಲಕ್ಷ ರೂಪಾಯಿ ಸಾಲ

  ನದಿ ದಡದಲ್ಲಿ ತಾಯಿ ಕತ್ತು ಹಿಸುಕಿ ಕೊಂದ ದುಷ್ಟ ಮಗ!

  ತಾಯಿ ವಿಮೆ ಹಣಕ್ಕಾಗಿ ಪಾಪಿ ಮಗನ ಮಾಸ್ಟರ್​ ಪ್ಲಾನ್​!

ಉತ್ತರ ಪ್ರದೇಶ: ಆನ್​ಲೈನ್ ಗೇಮ್ ಅನ್ನೋದು ಒಂಥರಾ ಗೀಳು ಇದ್ದಂಗೆ. ಈ ಗೀಳಿಗೆ ಅಡಿಕ್ಟ್ ಆಗಿ ಎಷ್ಟೋ ಜನರ ಬದುಕೆ ಬರ್ಬಾದ್ ಆಗಿ ಹೋಗಿದೆ. ಇವತ್ತಿನ ಸ್ಟೋರಿಯಲ್ಲೂ ಈ ಆನ್​​ಲೈನ್​ ಗೇಮ್​ ಹುಚ್ಚಿಗೆ ಬಿದ್ದವನು ಲಕ್ಷ ಲಕ್ಷ ಸಾಲ ಮಾಡಿದ್ದ. ಆನಲೈನ್ ಗೇಮ್ ಅನ್ನೋದು ಒಂದು ರೀತಿಯಲ್ಲಿ ಹುಚ್ಚರ ಸಂತೆ ಇದ್ದಂಗೆ. ಆನ್​ಲೈನ್​ ಗೇಮ್ ಅಂದ್ರೆ ಅದೇನ್​ ಹುಚ್ಚು ಅಂತೀರಾ. ಅದೇನ್​ ಚಟ ಅಂತೀರಾ ಬಿಡಿಸಲಾಗದ ನಂಟು. ಎಳೇಳು ಜನ್ಮದ ನಂಟು ಅನ್ನೋ ರೀತಿ ಯುವಕರಿಗೆ ಆನ್​ಲೈನ್​ ಗೇಮ್​​ನ ಗೀಳು ಅಂಟಿಕೊಂಡಿದೆ.

ಈ ಆನ್​ಲೈನ್ ಗೇಮ್​ ಮೋಹಕ್ಕೆ ಅದೆಷ್ಟು ಜನ ಮನೆ ಆಸ್ತಿ ಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅದೆಷ್ಟು ಯುವಕರು ತಮ್ಮ ಪ್ರಾಣವನ್ನೆ ಕಳ್ಕೊಂಡಿದ್ದಾರೆ. ಇನ್ನು ಕೆಲವರು ಅರೆಹುಚ್ಚರಾಗಿ ಬೀದಿ ಬೀದಿ ಅಲೆದಾಡ್ತಿದ್ದಾರೆ. ಈ ಆನ್​ಲೈನ್ ಗೇಮ್ ಮಾರಕ ಅಂತ ಗೊತ್ತಿದ್ರೂ ಈಗಿನ ಜನರೇಷನ್​ ಹುಡುಗರು ಮಾತ್ರ ಈ ಗೇಮ್​ಗಳಿಗೆ ಸಿಕ್ಕಾಪಟ್ಟೆ ಅಡಿಕ್ಟ್ ಆಗಿದ್ದಾರೆ. ಹೌದು, ಆನ್​ಲೈನ್ ಗೇಮ್​ ಅನ್ನೋದು ಒಂದರ್ಥದಲ್ಲಿ ಬದುಕನ್ನೆ ಬರ್ಬಾದ್ ಮಾಡುವ ಆಟ. ಅದರಲ್ಲೂ ಹಣಕ್ಕಾಗಿ ಆಡೋ ಆಟಗಳಂತೂ ಬದುಕನ್ನ ಬೀದಿಗೆ ತಂದು ನಿಲ್ಲಿಸೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಲಕ್ಷ ಲಕ್ಷ ಸಾಲ ಮಾಡಿಯಾದ್ರೂ ಹುಡುಗರು ಈ ಆನ್​ಲೈನ್ ಗೇಮ್​ ಅನ್ನ ಆಡ್ತಾರೆ. ಕೊನೆಗೆ ಸಾಲ ಕೊಟ್ಟವ ವಾಪಸ್ ಕೇಳ್ದಾಗ ಮಾಡಬಾರದ ಕೆಲಸ ಮಾಡಿ ಪೊಲೀಸರ ಕೈಯಲ್ಲಿ ತಗ್ಲಾಕೊಳ್ತಾರೆ. ಈ ಆನ್​ಲೈನ್​ ಗೇಮ್​ ಸೈಡ್ ಎಫೆಕ್ಟ್​ ಬಗ್ಗೆ ಜನರಿಗೆ ಅದೆಷ್ಟೆ ತಿಳಿಸಿ ಹೇಳಿದ್ರ, ಜನ ಮಾತ್ರ ಈ ಗೀಳಿನಿಂದ ಹೊರ ಬರ್ತಿಲ್ಲ. ಇಂತಾದ್ದೆ ಆನ್​ಲೈನ್ ಗೇಮ್​ನ ಹುಚ್ಚಿಗೆ ಸಿಲುಕಿದ್ದ ಯುವಕನೊಬ್ಬ ಹೆತ್ತ ತಾಯಿಯನ್ನೆ ಬಲಿ ಪಡೆದಿದ್ದಾನೆ.

ಗೇಮ್ ಆಡೋದಕ್ಕೆ ಸಾಲ ಮಾಡಿದ, ದುಡ್ಡಿಗಾಗಿ ತಾಯಿಯನ್ನೇ ಕೊಂದ!

ಆನ್​ಲೈನ್ ಗೇಮ್​ ಅನ್ನೋದು ಒಂದು ರೀತಿಯಲ್ಲಿ ನಶೆ ಇದ್ದಂಗೆ. ಈ ನಶೆ ಅಮಲನ್ನ ತಲೆಗೇರಿಸಿಕೊಂಡವರಿಗೆ ಪ್ರಪಂಚದಲ್ಲಿ ಏನಾಗ್ತಿದೆ ಅನ್ನೋದರ ಅರಿವೇ ಇರಲ್ಲ. ಬೀದಿಯಲ್ಲಿ.. ಮನೆಯಲ್ಲಿ, ಆಫೀಸ್​ನಲ್ಲಿ ಹೀಗೆ ಎಲ್ಲೆಂದ್ರಲ್ಲಿ ಮೊಬೈಲ್ ತೆಗೆದು ಗೇಮ್ ಆಡೋದಕ್ಕೆ ಶುರು ಮಾಡ್ತಾರೆ. ಏನಾದ್ರೂ ಆಗಲಿ ಕೊಟ್ಟಿರುವ ಟಾರ್ಗೆಟ್​​ ಅನ್ನ ಮುಟ್ಟಬೇಕು. ಆಟನಾ ಗೆಲ್ಲಬೇಕು ಇದಷ್ಟೆ ಅವರ ತಲೆಯಲ್ಲಿರುತ್ತೆ. ಆದ್ರೆ ಈ ದರಿದ್ರ ಗೇಮ್​​ನಿಂದಾಗಿ ಹಾಳಾಗ್ತಿರುವ ಟೈಮ್​ ಬಗ್ಗೆ ಅರಿವೇ ಇರಲ್ಲ. ಅದೆಷ್ಟರ ಮಟ್ಟಿಗೆ ಅಂದ್ರೆ ಈ ಗೇಮ್​ನ್ನ ಚಟವಾಗಿಸಿಕೊಂಡವರು ಯಾವ ಮಟ್ಟಕ್ಕಾದ್ರೂ ಇಳಿದು ಬಿಡ್ತಾರೆ. ಉತ್ತರ ಪ್ರದೇಶದ ಪತೇಫುರ್​ನಲ್ಲೂ ಇಂಥಾದ್ದೇ ಆನ್​ಲೈನ್​ ಗೇಮ್​​ನ ಗೀಳಿಗೆ ಬಿದ್ದಿದ್ದ ಮಗ ಹಾಳು ಗೇಮ್​ಗಾಗಿ ಹೆತ್ತ ತಾಯಿಯ ಉಸಿರಿಗೆ ಕೊಳ್ಳಿ ಇಟ್ಟಿದ್ದಾನೆ.

ಹೌದು, ಜಗತ್ತಿನಲ್ಲಿ ಎಂಥೆತಾ ಜನ ಇರ್ತಾರೆ ನೋಡಿ. ಒಂಬತ್ತು ತಿಂಗಳು ತನ್ನ ಮಡಿಲಲ್ಲಿ ಹೆತ್ತು ಹೊತ್ತು ಸಾಕಿದ ತಾಯಿಯ ಜೀವವನ್ನೇ ಈ ಪಾಪಿ ಮಗ ಬಲಿ ಪಡೆದಿದ್ದಾನೆ. ಇದಕ್ಕೆ ಕಾರಣ ಇದೇ ಆನ್​ಲೈನ್​ ಗೇಮ್. ಹಿಮಾಂಶು ಎಂಬಾತ ಉತ್ತರ ಪ್ರದೇಶದ ಪತೇಫುರ ನಿವಾಸಿ. ತಾಯಿ ತಂದೆ ಜೊತೆ ನೆಮ್ಮದಿಯಾಗಿ ಬದುಕಬೇಕಾಗಿದ್ದವನು ಹಾಳಾದ ಆನ್​ಲೈನ್​ ಗೇಮ್​ನ ಹುಚ್ಚು ಹಚ್ಚಿಕೊಂಡಿದ್ದ. ZUPEE ಅನ್ನೋ ಗೇಮ್​​ಗೆ ವ್ಯಸನಿಯಾಗಿದ್ದ ಹಿಮಾಂಶು 24 ಗಂಟೆ ಈ ಆಟ ಆಡ್ತಾನೆ ಕಾಲ ಕಳೆಯುತ್ತಿದ್ದ. ಸುಮ್ಮನೆ ಟೈಂ ಪಾಸ್​ಗಾಗಿ ಆಡೋದಾದ್ರೆ ಓಕೆ. ಆದ್ರೆ ಇದು ಒಂದು ರೀತಿಯಲ್ಲಿ ಜೂಜಾಟ. ಇಂಥಾ ಜೂಜಾಟದ ಗೀಳು ಅಂಟಿಸಿಕೊಂಡಿದ್ದ ಹಿಮಾಂಶು ಈ ಗೇಮ್​ನಲ್ಲಿ ಲಕ್ಷ ಲಕ್ಷ ಹಣ ಹಾಕಿದ್ದ. ಆದ್ರೆ ಹಾಕಿದ್ದ ಹಣ ಯಾವುದು ಹಿಮಾಂಶುಗೆ ವಾಪಸ್ ಬಂದಿಲ್ಲ. ದುರಂತ ಏನಂದ್ರೆ ಈ ಆನ್​ಲೈನ್ ಗೇಮ್​​ಗಾಗಿಯೇ ಹಿಮಾಂಶು​ ಒಂದಲ್ಲ ಎರಡಲ್ಲ ಬರೋಬ್ಬರಿ 4 ಲಕ್ಷ ರೂಪಾಯಿ ಸಾಲ ಮಾಡಿದ್ದ. ಆದ್ರೆ ಅದ್ಯಾವಾಗ ದುಡ್ಡ ಕೊಟ್ಟವರು ವಾಪಸ್ ಕೇಳೋದಕ್ಕೆ ಶುರು ಮಾಡಿದ್ರು ಆಗಲೇ ನೋಡಿ ಹಿಮಾಂಶುಗೆ ಸಂಕಷ್ಟ ಎದುರಾಗಿದ್ದು. ಗೇಮ್​ನಲ್ಲಿ ಹಣ ಹಾಕಿ ಗೆಲ್ಲಬೇಕು ಅಂದುಕೊಂಡಿದ್ದ ಹಿಮಾಂಶು ಸೋತು ಸುಣ್ಣವಾಗಿದ್ದ. ಆದ್ರೆ ಸಾಲ ಕೊಟ್ಟವರು ಬಿಡಬೇಕಲ್ಲ. ಹಣ ಕೊಟ್ಟವರು ಪದೇ ಪದೇ ಹಿಮಾಂಶುಗೆ ವಾಪಸ್​ ಹಣ ಕೊಡುವಂತೆ ಒತ್ತಡ ಹೇರಿದ್ದಾರೆ. ಆದ್ರೆ ಹಿಮಾಂಶುಗೆ ಎಲ್ಲಿಯೂ ಹಣ ಸಿಕ್ಕಿಲ್ಲ. ಕೊನೆಗೆ ಈ ಪಾಪಿ ಮಾಡಿದ್ದು ಯಾರು ಉಹಿಸಲಾಗದಂತ ಭಯಾನಕ ಕೃತ್ಯ.

ಈ ಹಿಮಾಂಶುಗೆ ಎಲ್ಲಿಯೂ ದುಡ್ಡ ಸಿಗದೇ ಇದ್ದಾಗ ನೀಚ ಕೃತ್ಯಕ್ಕೆ ಕೈ ಹಾಕಿ ಬಿಟ್ಟಿದ್ದ. ಅದೇನಂದ್ರೆ ಹಿಮಾಂಶು ತಾಯಿ ಪ್ರಭಾ ಹೆಸರಲ್ಲಿ ಬರೋಬ್ಬರಿ 50 ಲಕ್ಷದ ವಿಮೆ ಮಾಡಿಸಿರಲಾಗುತ್ತೆ. ಈ ವಿಚಾರ ಹಿಮಾಂಶುಗೂ ಕೂಡ ಗೊತ್ತಿರುತ್ತೆ. ಅದ್ಯಾವಾಗ ಸಾಲಗಾರರು ಹಿಮಾಂಶುಗೆ ಕಾಟ ಕೊಡೋದಕ್ಕೆ ಶುರು ಮಾಡಿದ್ರು. ಈ ಪಾಪಿ ಹೆತ್ತ ತಾಯಿಯನ್ನೆ ಕೊಲ್ಲುವ ನಿರ್ಧಾರಕ್ಕೆ ಬಂದಿದ್ದಾನೆ. ತಾಯಿಯನ್ನ ಕೊಂದ್ರೆ ಆಕೆ ಹೆಸರಲ್ಲಿರುವ 50 ಲಕ್ಷ ಸಿಗುತ್ತೆ ಅಂತ ಅಂದ್ಕೊಂಡು, ಪಕ್ಕಾ ಪ್ಲಾನ್ ಮಾಡಿ ತಾಯಿ ಪ್ರಾಣವನ್ನೆ ನಿಲ್ಲಿಸಿ ಬಿಟ್ಟಿದ್ದಾನೆ ಈ ಪಾಪಿ ಮಗ. ತಾಯಿ ವಿಮೆ ಹಣಕ್ಕಾಗಿ ಕಣ್ಣಾಕಿದ್ದ ದುಷ್ಟ ಹಿಮಾಂಶು ತಾಯಿಯನ್ನ ಟ್ರ್ಯಾಕ್ಟರ್​ನಲ್ಲಿ ನದಿ ದಡಕ್ಕೆ ಕರೆದುಕೊಂಡು ಹೋಗಿದ್ದಾನೆ. ಮಗ ಕರೆದನಲ್ಲ ಅಂತ ಅಮಾಯಕ ತಾಯಿ ಮಗನ ಜೊತೆಗೆ ಹೋದ್ರೆ, ಈ ಪಾಪಿ ತಾಯಿಯ ಕತ್ತು ಹಿಸುಕಿ ಆಕೆ ಉಸಿರು ನಿಲ್ಲಿಸಿಬಿಟ್ಟಿದ್ದಾನೆ. ಬಳಿಕ ಶವವನ್ನು ನದಿ ಪಕ್ಕದಲ್ಲೇ ಬೀಸಾಕಿ ಮನೆಗೆ ಬಂದಿದ್ದಾನೆ. ಆಗ ಹಿಮಾಂಶು ಅಪ್ಪ ಬಂದು ಪತ್ನಿ ಬಗ್ಗೆ ವಿಚಾರಿಸಿದಾಗ ನೆರೆಮನೆಯವರು ಹಿಮಾಂಶು ಜೊತೆ ಹೋಗಿರುವ ವಿಚಾರ ಹೇಳಿದ್ದಾರೆ. ಆದ್ರೆ ಬಂದು ನೋಡ್ದಾಗ ಪ್ರಭಾ ಹೆಣವಾಗಿ ಮಲಗಿದ್ಳು. ದುರಂತ ಏನಂದ್ರೆ ಮಗನೇ ಕೊಲೆ ಮಾಡಿದ್ದ ಅನ್ನೋದು ಅಪ್ಪನಿಗೂ ಗೊತ್ತಾಗಿರಲಿಲ್ಲ. ಆದ್ರೆ ಅದ್ಯಾವಾಗ ಪೊಲೀಸರು ಬಂದು ವಿಚಾರಣೆ ಶುರು ಮಾಡಿದ್ರೂ ಆಗಲೇ ನೋಡಿ ಈ ಪಾಪಿ ಹಿಮಾಂಶು ಅಸಲಿ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

ನಮ್ಮ ಠಾಣೆಗೆ ಕೊಲೆ ಬಗ್ಗೆ ಮಾಹಿತಿ ಸಿಕ್ಕಿತ್ತು. ಆತನ ಪತ್ನಿ ಫೆಬ್ರವರಿ 20 ರಂದು ನಾಪತ್ತೆಯಾಗಿದ್ದಾಳೆ ಅಂತ ದೂರು ಕೊಟ್ಟಿದ್ರು. ಅವರ ಪುತ್ರ ಹಿಮಾಂಶು ಹತ್ಯೆ ಮಾಡಿ ಮೃತದೇಹವನ್ನು ಮುಚ್ಚಿಟ್ಟಿದ್ದಾನೆ ಅಂತ ಹೇಳಿದ್ರು. ನಾವು ತನಿಖೆ ಶುರು ಮಾಡಿ ತಾಯಿ ಹತ್ಯೆ ಮಾಡಿದ ಹಿಮಾಂಶುವನ್ನ ಅರೆಸ್ಟ್ ಮಾಡಿದ್ದೀವಿ. ವಿಚಾರಣೆ ಮಾಡ್ದಾಗ ಹಿಮಾಂಶು ದೊಡ್ಡಮ್ಮಳ ಆಭರಣಗಳನ್ನ ಸೇಲ್ ಮಾಡಿದ್ದ. ಈ ವಿಚಾರವಾಗಿ ತಂದೆ ಜೊತೆ ಜಗಳ ಕೂಡ ಆಗಿತ್ತು. ಆಭರಣಗಳನ್ನ ವಾಪಸ್ ಕೊಡುವಂತೆ ಒತ್ತಡ ಹಾಕಲಾಗ್ತಿತ್ತು. ಹೀಗಾಗಿ ಹಿಮಾಂಶು ಗೇಮ್​ನಲ್ಲಿ ಹಣ ಕಳ್ಕೊಂಡಿದ್ದ. ಇದೇ ಕಾರಣಕ್ಕೆ ತಾಯಿಯನ್ನ ಹತ್ಯೆ ಮಾಡಿ ನದಿಯಲ್ಲಿ ಬೀಸಾಕಿದ್ದ.

– ವಿಜಯ್ ಶಂಕರ್ ಮಿಶ್ರಾ, ಎಎಸ್​ಪಿ ಪತೇಪುರ್

ಆನ್​​ಲೈನ್ ಗೇಮ್​ನ ಹುಚ್ಚಿಗೆ ಬಿದ್ದಿದ್ದ ಹಿಮಾಂಶು ತನ್ನ ಸಂಬಂಧಿಕರ ಆಭರಣಗಳನ್ನ ಅಡವಿಟ್ಟು ಹಣ ಹಾಕಿದ್ದ. ಆದ್ರೆ ಹಾಕಿದ ದುಡ್ಡು ಬರದೇ ಇದ್ದಾಗ ಆಭರಣ ಕೊಟ್ಟವರು ವಾಪಸ್ ಕೊಡುವಂತೆ ಒತ್ತಾಯ ಮಾಡಿದ್ದಾರೆ. ಆಗ ಈ ಪಾಪಿ ತಾಯಿಯನ್ನ ಕೊಂದ್ರೆ ಆಕೆ ವಿಮೆ ಹಣ ಸಿಗುತ್ತೆ ಅದ್ರಿಂದ ಸಾಲ ತೀರಿಸಬಹುದು ಅಂತ ಅಂದ್ಕೊಂಡು ತಾಯಿ ಉಸಿರಿಗೆ ಕೊಳ್ಳಿ ಇಟ್ಟುಬಿಟ್ಟಿದ್ದ. ಸದ್ಯ ತಾಯಿಯ ಪ್ರಾಣವನ್ನು ಬಲಿ ಪಡೆದಿರುವ ಪಾಪಿ ಮಗನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆನ್​ಲೈನ್​ ಗೇಮ್ ಅನ್ನೋದು ಮನರಂಜನೆಗಾಗಿ ಮಾತ್ರ. ಆದ್ರೆ ಕೆಲವರು ಇದನ್ನ ಚಟವಾಗಿಸಿಕೊಂಡು, ಬದುಕನ್ನೆ ಬರ್ಬಾದ್ ಮಾಡಿಕೊಳ್ತಿದ್ದಾರೆ. ಈ ಹುಚ್ಚು ಗೇಮ್​ಗಾಗಿ ಮಗನೇ ತಾಯಿ ಪ್ರಾಣ ತೆಗೆದಿರೋದು ನಿಜಕ್ಕೂ ದುರಂತವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆನ್‌ಲೈನ್‌ ಗೇಮ್ ಚಟ; ಹಣಕ್ಕಾಗಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ

https://newsfirstlive.com/wp-content/uploads/2024/02/death-2024-02-25T203302.510.jpg

Load More