newsfirstkannada.com

ಮಗನಿಗಾಗಿ 21 ದಿನಗಳಿಂದ ಉಪವಾಸ ಮಾಡುತ್ತಿರುವ ಮಹಾತಾಯಿ.. ಏನಿದು ಸ್ಟೋರಿ?

Share :

Published February 2, 2024 at 11:08am

    ಜನವರಿ 12 ರಂದು ಚಿಕ್ಕಮ್ಮನ ಮನೆಗೆಂದು ಹೇಳಿ ಹೋಗಿದ್ದ ಮಗ

    ಮಗನ ನಾಪತ್ತೆಯಿಂದ‌ ಕಂಗಾಲಾಗಿರುವ ತಾಯಿ ಮತ್ತು ಕುಟುಂಬಸ್ಥರು

    ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ ತಾಯಿ

ಬಾಗಲಕೋಟೆ: ಚಿಕ್ಕಮ್ಮನ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದ ಮಗ ನಾಪತ್ತೆಯಾದ ಹಿನ್ನೆಲೆಯಲ್ಲಿ ಬರುವಿಕೆಗಾಗಿ 21 ದಿನಗಳಿಂದ ಊಟ ಮಾಡದೆ ತಾಯಿ ಉಪವಾಸದಲ್ಲಿದ್ದಾರೆ.

ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡಾದ ಗಣೇಶ್ ರಾಮಪ್ಪ ಲಮಾಣಿ (27) ಜನವರಿ 12 ರಂದು ವಿಜಯಪುರದಲ್ಲಿನ ಚಿಕ್ಕಮ್ಮನ ಮನೆಗೆ ಹೋಗಿ ಬರುತ್ತೇನೆಂದು ಹೋಗಿದ್ದ. ಆದರೆ ಇವತ್ತಿನವರೆಗೂ ಮನೆಗೆ ವಾಪಸ್ ಆಗಿಲ್ಲ. ಇದರಿಂದ ಕಂಗಲಾಗಿರುವ ಅವರ ತಾಯಿ ಶಾಂತಾಬಾಯಿ ರಾಮಪ್ಪ ಲಮಾಣಿ (46) ಮಗನ ಬರುವಿಕೆಗಾಗಿ ಕಾದಿದ್ದು 21 ದಿನದಿಂದ ಊಟವನ್ನೇ ಮಾಡದೇ ಉಪವಾಸದಲ್ಲಿದ್ದಾರೆ.

ಊಟ ತ್ಯಜಿಸಿ ಮಗನಿಗಾಗಿ ಕಾದು ಕುಳಿತ ತಾಯಿ ಕಣ್ಣೀರಲ್ಲೇ ಕೈತೊಳೆಯುತ್ತಿದ್ದು ಪ್ರತಿ ಕ್ಷಣ ಹಾತೊರೆಯುತ್ತಿದ್ದಾರೆ. ವಿಜಯಪುರದಿಂದ ತೆರಳುವಂತಹ ಪ್ರತಿ ರೈಲನ್ನು ಅವರ ಕುಟುಂಬಸ್ಥರು ಪರೀಕ್ಷಿಸುತ್ತಿದ್ದಾರೆ. ಎಷ್ಟೇ ಹುಡುಕಿದ್ರೂ ಮಗ ಮಾತ್ರ ಸಿಗುತ್ತಿಲ್ಲ. ಹೀಗಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ತಾಯಿ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗನಿಗಾಗಿ 21 ದಿನಗಳಿಂದ ಉಪವಾಸ ಮಾಡುತ್ತಿರುವ ಮಹಾತಾಯಿ.. ಏನಿದು ಸ್ಟೋರಿ?

https://newsfirstlive.com/wp-content/uploads/2024/02/BGK_MISSING.jpg

Load More