newsfirstkannada.com

ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಸ್ಟಾರ್ ಸಿಂಗರ್ ಸೋನಾ..! ಕಾರಣ..?

Share :

Published February 22, 2024 at 9:46am

Update February 22, 2024 at 10:31am

  ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ರಾಹುಲ್ ಭಾಷಣ

  ಭಾಷಣದಲ್ಲಿ ಹೇಳಿದ್ದ ಒಂದೇ ಒಂದು ಮಾತಿಗೆ ಆಕ್ರೋಶ

  ಸೋಶಿಯಲ್ ಮೀಡಿಯಾದಲ್ಲಿ ರಾಹುಲ್​​ಗೆ ಟಾಂಟ್ ಕೊಟ್ಟ ಸಿಂಗರ್

ಭಾರತ್ ಜೋಡೋ ನ್ಯಾಯ್ ಯಾತ್ರೆ ವೇಳೆ ರಾಹುಲ್ ಗಾಂಧಿ ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಬಗ್ಗೆ ಪ್ರಸ್ತಾಪಿಸಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿಯನ್ನು ಟೀಕೆ ಮಾಡುವ ಭರದಲ್ಲಿ ನಟಿ ಐಶ್ವರ್ಯಾ ರೈ, ಬಿಗ್​ಬಿ ಹೆಸರನ್ನೂ ಎಳೆದು ತಂದಿದ್ದರು.

ಐಶ್ವರ್ಯ ರೈ ಹೆಸರನ್ನು ಹೇಳಿದ್ದಕ್ಕೆ ಖ್ಯಾತ ಗಾಯಕಿ ಸೋನಾ ಮಹಾಪಾತ್ರ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ. ಐಶ್ವರ್ಯ ರೈ ಅವರನ್ನು ಬೆಂಬಲಿಸಿ ಟ್ವಿಟ್ ಮಾಡಿರುವ ಸೋನಾ, ಸೆಕ್ಸಿಸ್ಟ್ ನೆಪದಲ್ಲಿ ಕೆಲ ರಾಜಕಾರಣಿಗಳು ಲಾಭ ಪಡೆಯಲು ಭಾಷಣಗಳಲ್ಲಿ ಮಹಿಳೆಯರನ್ನು ಅವಮಾನಿಸುತ್ತಾರೆಯೇ? ಆತ್ಮೀಯ ರಾಹುಲ್ ಗಾಂಧಿ, ಹಿಂದೆ ಯಾರಾದರೂ ನಿಮ್ಮ ತಾಯಿ, ಸಹೋದರಿ ಈ ರೀತಿ ಅವಮಾನಿಸಿದ್ದಾರೆ, ನಿಮಗೆ ಅದು ಗೊತ್ತಿರಬೇಕು. ಐಶ್ವರ್ಯಾ ರೈ ಚೆನ್ನಾಗಿ ನೃತ್ಯ ಮಾಡ್ತಾರೆ ಎಂದು ನಿಮಗೆ ಚೆನ್ನಾಗಿ ತಿಳಿದಿರಬೇಕು.

ರಾಹುಲ್ ಗಾಂಧಿ ಹೇಳಿದ್ದೇನು..?
ನೀವು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನೋಡಿದ್ದೀರಾ? ಆ ಕಾರ್ಯಕ್ರಮದಲ್ಲಿ ಹಿಂದುಳಿದ OBC ಅಥವಾ ST/SCಗೆ ಸೇರಿದ್ದ ಜನರನ್ನು ನೋಡಿದ್ದೀರಾ? ಅಮಿತಾಭ್ ಬಚ್ಚನ್, ಐಶ್ವರ್ಯಾ ಬಚ್ಚನ್ (ಐಶ್ವರ್ಯ ರೈ) ಮತ್ತು ಪಿಎಂ ನರೇಂದ್ರ ಮೋದಿ ಭಾಗವಹಿಸಿದ್ದರು. ನಿಜವಾಗಿ ದೇಶವನ್ನು ನಡೆಸುವ ಜನರನ್ನು ನಾವು ನೋಡಲಿಲ್ಲ ಎಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಸ್ಟಾರ್ ಸಿಂಗರ್ ಸೋನಾ..! ಕಾರಣ..?

https://newsfirstlive.com/wp-content/uploads/2024/02/RAHUL-GANDHI-8.jpg

Load More