ಸೋನಲ್​​, ತರುಣ್​ ಸುಧೀರ್​​ ಹಳದಿ ಶಾಸ್ತ್ರ ಹೇಗಿತ್ತು? ಯಾರೆಲ್ಲಾ ಭಾಗಿಯಾಗಿದ್ರು?

author-image
Ganesh Nachikethu
Updated On
ಇಂದು ತರುಣ್​-ಸೋನಲ್ ಮದ್ವೆ.. ನಿರ್ದೇಶಕನ ಕೈ ಹಿಡಿಯುತ್ತಿರೋ ಈ ನಟಿ​ ಯಾರು? ಮೂಲತಃ ಎಲ್ಲಿಯವ್ರು?
Advertisment
  • ಸ್ಯಾಂಡಲ್​ವುಡ್​​ ಸ್ಟಾರ್​ ಡೈರೆಕ್ಟರ್​​ ತರುಣ್‌ ಕಿಶೋರ್‌ ಸುಧೀರ್‌
  • ತರುಣ್‌ ಕಿಶೋರ್‌ ಸುಧೀರ್‌ ಹಾಗೂ ನಟಿ ಸೋನಲ್‌ ಮದುವೆ!
  • ಧರ್ಮ ಬೇರೆ ಬೇರೆಯಾದ್ರೂ ಹಿಂದೂ ಧರ್ಮದ ಪ್ರಕಾರ ವಿವಾಹ

ಸ್ಯಾಂಡಲ್​ವುಡ್​​ ಸ್ಟಾರ್​ ಡೈರೆಕ್ಟರ್​​ ತರುಣ್‌ ಕಿಶೋರ್‌ ಸುಧೀರ್‌ ಹಾಗೂ ಕನ್ನಡದ ನಟಿ ಸೋನಲ್‌ ಮಂಥೆರೊ ಆಗಸ್ಟ್‌ 11ರಂದು ಮದುವೆಯಾಗಲಿದ್ದಾರೆ. ಈ ಜೋಡಿ ಹಳದಿ ಶಾಸ್ತ್ರವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದೆ.

ಇನ್ನು, ಹಳದಿ ಶಾಸ್ತ್ರದಲ್ಲಿ ನಟ ಶರಣ್, ನೆನಪಿರಲಿ ಪ್ರೇಮ್ ಸೇರಿ ಮುಂತಾದವರು ಭಾಗಿಯಾಗಿದ್ರು. ಹಳದಿ ಶಾಸ್ತ್ರಕ್ಕಾಗಿ ಸೋನಲ್, ತರುಣ್ ವಿಶೇಷವಾದ ಡ್ರೆಸ್ ಧರಿಸಿದ್ದರು. ಧರ್ಮ ಬೇರೆ ಬೇರೆಯಾಗಿದ್ರೂ ಹಿಂದೂ ಸಂಪ್ರದಾಯದ ಪ್ರಕಾರವೇ ಮದುವೆ ಆಗಲಿದೆ.

publive-image

ಹಲವು ದಿನಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕೊನೆಗೂ ತರುಣ್‌ ಹಾಗೂ ಸೋನಲ್‌ ಪ್ರೀತಿ ವಿಷಯ ಒಪ್ಪಿಕೊಂಡಿದ್ದು, ಮದುವೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಜೋಡಿಯು ತಮ್ಮ ಸುಂದರ ಪೋಟೋಶೂಟ್‌ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಇಬ್ಬರ ಮಧ್ಯೆ ಲವ್​ ಹೇಗೆ?

ಈ ಹಿಂದೆಯೇ ಇಬ್ಬರಿಗೆ ಪರಿಚಯ ಆಯ್ತು. ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾದಂತೆ ಪ್ರೀತಿಯ ಬಂಧನ ಬೆಸೆದಿದೆ. ಆದರೆ ಆ ಪ್ರೀತಿ ಬಹಳ‌ ಗುಟ್ಟಾಗಿ ಉಳಿದಿತ್ತಂತೆ. ಕೊನೆಗೆ ತರುಣ್‌ ಮತ್ತು ಸೋನಲ್‌ ಮನಬಿಚ್ಚಿ ಪ್ರೀತಿ ಹಂಚಿಕೊಂಡಿದ್ದರು. ತದನಂತರ ಎರಡು ಮನೆಯವರ ಭೇಟಿ ಮಾಡಿ ಮಾತುಕತೆ ಮಾಡಿದ್ದರು. ಎರಡು ಕುಟುಂಬದಿಂದಲೂ ಮದುವೆಗೆ ಗ್ರೀನ್ ಸಿಗ್ನಲ್‌ ಸಿಕ್ಕಿದೆ. ಹೀಗಾಗಿ ಜೋಡಿ ಆಗಸ್ಟ್ ತಿಂಗಳಲ್ಲಿ ವಿವಾಹ‌ವಾಗಲು ಮುಂದಾಗಿದ್ದಾರೆ.

ಇದನ್ನೂ ಓದಿ: VIDEO: ದುನಿಯಾ ವಿಜಯ್​​ ಕೊಲೆಗೆ ಯತ್ನ.. ಭೀಮಾ ರಿಲೀಸ್​ ಹೊತ್ತಲ್ಲೇ ಸ್ಫೋಟಕ ಸತ್ಯ ಬಿಚ್ಚಿಟ್ಟ ಸಲಗ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment