Advertisment

ಇಂದೇ ತರುಣ್​ ಜೊತೆ ಬನಾರಸ್ ಬ್ಯೂಟಿ ಮದುವೆ ಆಗಿದ್ದೇಕೆ? ರಿವೀಲ್ ಮಾಡಿದ ಸೋನಲ್; ಏನದು?

author-image
Veena Gangani
Updated On
ಇಂದೇ ತರುಣ್​ ಜೊತೆ ಬನಾರಸ್ ಬ್ಯೂಟಿ ಮದುವೆ ಆಗಿದ್ದೇಕೆ? ರಿವೀಲ್ ಮಾಡಿದ ಸೋನಲ್; ಏನದು?
Advertisment
  • ನಟಿ ಸೋನಲ್ ಮೊಂತೆರೊಗೆ ತುಂಬಾನೇ ವಿಶೇಷ ದಿನ ಏಕೆ?
  • ​ಸ್ಯಾಂಡಲ್​ವುಡ್​ ಸ್ಟಾರ್​ ನಿರ್ದೇಶಕನ ಕೈ ಹಿಡಿದ ನಟಿ ಸೋನಲ್
  • ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾದ ಸ್ಟಾರ್​ ಜೋಡಿ

ಇಂದು ನಟಿ ಸೋನಲ್ ಮೊಂತೆರೊ ಅವರು ಸ್ಯಾಂಡಲ್​ವುಡ್​ ಸ್ಟಾರ್​ ಡೈರೆಕ್ಟರ್​​ ತರುಣ್‌ ಸುಧೀರ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರು, ಸ್ನೇಹಿತರು, ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ಈ ಸ್ಟಾರ್​ ಜೋಡಿ ಮದುವೆಯಾಗಿದೆ. ಇಂದು ನಟಿ ಸೋನಲ್ ಮೊಂತೆರೊ ಅವರಿಗೆ ಡಬಲ್ ಖುಷಿಯಾದ ದಿನವಾಗಿದೆ.

Advertisment

publive-image

ಹೌದು, ನಟಿ ಸೋನಲ್ ಮೊಂತೆರೊ ಅವರಿಗೆ ಇಂದು ತುಂಬಾನೇ ವಿಶೇಷ ದಿನವಾಗಿದೆ. ಒಂದು ಇಂದು ಸೋನಲ್ ಮೊಂತೆರೊ ಅವರ ಹುಟ್ಟು ಹಬ್ಬ. ಇನ್ನೊಂದು ಮದುವೆ ದಿನ. ಸುದ್ದಿಗಾರರೊಂದಿಗೆ ಮಾತಾಡುತ್ತಿದ್ದಾಗ, ಇಂದು ನನ್ನ ಹುಟ್ಟು ಹಬ್ಬ. ಹುಟ್ಟು ಹಬ್ಬದ ದಿನವೇ ಹೊಸ ಜೀವನ ಶುರು ಮಾಡುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ನನಗೆ ತುಂಬಾನೇ ಮುಖ್ಯ. ಆದರೆ ನನ್ನ ಹುಟ್ಟು ಹಬ್ಬ ಇದೆ ಅಂತ ಮದುವೆ ಮಾಡಿಕೊಂಡಿಲ್ಲ. ಈ ದಿನ ತುಂಬಾ ವಿಶೇಷ ಅಂತ ಮದುವೆ ಆಗಿದ್ದೇವೆ ಅಂತ ಹೇಳಿದ್ದಾರೆ.

ಇದನ್ನೂ ಓದಿ:ದರ್ಶನ್​ ಬಗ್ಗೆ ಮಾತಾಡುತ್ತಿದ್ದಂತೆ ಭಾವುಕರಾದ ತರುಣ್​ ಸುಧೀರ್​; ಮತ್ತೆ ಕಾಟೇರನ ಭೇಟಿ ಬಗ್ಗೆ ಹೇಳಿದ್ದೇನು?

publive-image

ಇನ್ನು, ಈ ಸ್ಟಾರ್​ ಜೋಡಿಯ ಮದುವೆಯೂ ಬೆಂಗಳೂರಿನಲ್ಲಿರೋ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೆಸ್​ನಲ್ಲಿ ನಡೆದಿದೆ. ​ ಸ್ಟಾರ್​ ಡೈರೆಕ್ಟರ್​​ ಮದುವೆಗೆ ಸ್ಯಾಂಡಲ್​ವುಡ್​ ಖ್ಯಾತ ನಟ ಹಾಗೂ ನಟಿಯರು ಬಂದು ಶುಭ ಹಾರೈಸಿದ್ದಾರೆ. ಅದರಲ್ಲೂ ನಟ ವಿನೋದ್​ ರಾಜ್​, ಗೋಲ್ಡನ್ ಸ್ಟಾರ್ ಗಣೇಶ್​, ನೆನಪಿರಲಿ ಪ್ರೇಮ್​, ನಟಿ ಶ್ರುತಿ, ನಟ ಶರಣ್​, ನಿಶ್ವಿಕಾ ನಾಯ್ಡು, ನಟಿ ಮಾಳವಿಕ ಅವಿನಾಶ್ ದಂಪತಿ, ತೆಲುಗು ಸ್ಟಾರ್​ ನಟ ಜಗಪತಿ ಬಾಬು, ಗಾಯಕ ವಿಜಯ್​ ಪ್ರಕಾಶ್​, ನಟಿ ತಾರಾ, ನಟಿ ಮೇಘನಾ ಗಾಂವ್ಕರ್, ನಟಿ ಕಾರುಣ್ಯ ರಾಮ್, ಸಂಜನಾ ಗಲ್ರಾನಿ, ಆಶಿಕಾ ರಂಗನಾಥ್, ಸುಧಾರಾಣಿ, ವಿ ನಾಗೇಂದ್ರ ಪ್ರಸಾದ್, ನಟ ಬಾಲಾಜಿ ವೀರಸ್ವಾಮಿ, ಬಿಗ್​ಬಾಸ್​ ಸ್ಪರ್ಧಿ ತನಿಷಾ ಕುಪ್ಪಂಡ, ನಟ ನಿರಂಜನ್ ದೇಶಪಾಂಡೆ ದಂಪತಿ, ಜೊತೆ ಜೊತೆಯಲಿ ಸೀರಿಯಲ್​ ಖ್ಯಾತ ನಟಿ ಮೇಘ ಶೆಟ್ಟಿ ಆಗಮಿಸಿದ್ದಾರೆ.

Advertisment

publive-image

ಮದುವೆ ಹಾಲ್​ಗೆ ಸೋನಲ್ ಮೊಂತೆರೊ ಅವರನ್ನು ಗ್ರ್ಯಾಂಡ್​ ಆಗಿ ಮೆಲ್​ಕಮ್​ ಮಾಡಲಾಗಿತ್ತು. ಸೋನಲ್ ಮೊಂತೆರೊ ಅವರು ಹಾಲ್​ಗೆ ಎಂಟ್ರಿ ಕೊಡುತ್ತಿದ್ದಂತೆ ಸಾಕಷ್ಟು ಯುವತಿಯರು ಡ್ಯಾನ್ಸ್ ಮಾಡುತ್ತಾ ಅವರನ್ನು ಬರಮಾಡಿಕೊಂಡಿದ್ದಾರೆ. ಬಳಿಕ ಹಿಂದೂ ಸಂಪ್ರದಾಯದಂತೆ ತರುಣ್‌ ಕಿಶೋರ್‌ ಸುಧೀರ್‌ ಹಾಗೂ ನಟಿ ಸೋನಲ್ ಮೊಂತೆರೊ ಮದುವೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment