newsfirstkannada.com

ಭರ್ಜರಿ ರೋಸ್​ ಸೆಲೆಬ್ರೆಷನ್.. ಉಂಗುರ ಬದಲಿಸಲು ತರುಣ್ ಸುಧೀರ್- ಸೋನಲ್‌ ರೆಡಿ; ಎಲ್ಲಿ?

Share :

Published August 31, 2024 at 7:38pm

    ಈ ನವ ಜೋಡಿ ಮದುವೆ ಸಂಭ್ರಮದಿಂದ ಇನ್ನು ಹೊರ ಬಂದಿಲ್ವಾ?

    ಮದುವೆಗೆ ರೆಡಿಯಾದ ತರುಣ್ ಸುಧೀರ್- ಸೋನಲ್‌ ಮೊಂತೆರೋ

    ವೆಡ್ಡಿಂಗ್​​ನಲ್ಲಿ 2 ಕಡೆಯ ಕುಟುಂಬ ಸದಸ್ಯರು ಭಾಗಿ ಆಗಲಿದ್ದಾರೆ

ಸ್ಯಾಂಡಲ್​ವುಡ್​ನ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಸೋನಲ್‌ ಮೊಂತೆರೋ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ನವ ದಂಪತಿಗಳು ಹೊಸ ಹೊಸ ಕನಸುಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಆಗಸ್ಟ್​ 11 ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಅದ್ಧೂರಿಯಾಗಿ ಕುಟುಂಬಸ್ಥರು, ಗುರು, ಹಿರಿಯರ ಸಮ್ಮುಖದಲ್ಲಿ ಈ ನವ ಜೋಡಿ ಸಪ್ತಪದಿ ತುಳಿದಿತ್ತು. ಇದರ ಬೆನ್ನಲ್ಲೇ ಈ ಬ್ಯೂಟಿಫುಲ್ ಜೋಡಿ ಮತ್ತೊಮ್ಮೆ ವಿವಾಹವಾಗಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ: ತರುಣ್ ಸುಧೀರ್, ಸೋನಲ್ ಮೊಂತೆರೊ ಆರತಕ್ಷತೆ; ಯಾರೆಲ್ಲಾ ಸ್ಟಾರ್‌ ಬಂದ್ರು? ಫೋಟೋಗಳಲ್ಲಿ ನೋಡಿ!

ಆಗಸ್ಟ್​ 11 ರಂದು ಹಿಂದೂ ಸಂಪ್ರಾದಾಯದಂತೆ ತರುಣ್ ಸುಧೀರ್ ಹಾಗೂ ಸೋನಲ್‌ ಮೊಂತೆರೋ ಮದುವೆಯಾಗಿದ್ದರು. ಆದರೆ ಈಗ ಮತ್ತೊಮ್ಮೆ ಕ್ರೈಸ್ತ ಸಂಪ್ರದಾಯದಂತೆ ವಿವಾಹವಾಗಲು ತರುಣ್ ಸುಧೀರ್ ಹಾಗೂ ಸೋನಲ್‌ ಸಿದ್ಧತೆಯಲ್ಲಿದ್ದಾರೆ. ಇದಕ್ಕಾಗಿಯೇ ಸೋನಾಲ್ ತಮ್ಮ ನಿವಾಸದಲ್ಲಿ ರೋಸ್ ಸೆಲೆಬ್ರೆಷನ್ ಮಾಡಿದ್ದಾರೆ. ಈ ಸೆಲೆಬ್ರೆಷನ್​​ಗೆ ಸೋನಾಲ್ ಅವರ ಸ್ನೇಹಿತರು, ಕುಟುಂಬಸ್ಥರು ಭಾಗಿಯಾಗಿದ್ದರು. ಸೆಲೆಬ್ರೆಷನ್​ನಲ್ಲಿ ನವವಧು ಸೋನಾಲ್ ಗೋಲ್ಡ್​ ಕಲರ್ ಡ್ರೆಸ್ ಧರಿಸಿ ಪಳ ಪಳ ಅಂತ ಹೊಳೆಯುತ್ತಿದ್ದರು. ಅಲ್ಲದೇ ಫೋಟೋಗೆ ಮಸ್ತ್​ ಮಸ್ತ್​ ಪೋಸ್​ಗಳನ್ನು ಕೊಟ್ಟಿದ್ದಾರೆ. ಸದ್ಯ ಇದೇ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನು ಕ್ರೈಸ್ತ ಸಂಪ್ರದಾಯದಂತೆ ಈ ಜೋಡಿ ಮದುವೆಯಾಗುವುದು ಎಲ್ಲಿ, ಯಾವಾಗ ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡುತ್ತದೆ. ಇದಕ್ಕೆ ಉತ್ತರ ಕೂಡ ಸಿಕ್ಕಿದೆ. ಸೋನಾಲ್​-ತರುಣ್ ಇಬ್ಬರು ಕ್ರೈಸ್ತ ಸಂಪ್ರದಾಯದಂತೆ ಮಂಗಳೂರಿನ ಚರ್ಚ್​ವೊಂದರಲ್ಲಿ ನಾಳೆ ಅಂದರೆ ಸೆಪ್ಟೆಂಬರ್​ 01 ರಂದು ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ. ಈ ಚರ್ಚ್ ವೆಡ್ಡಿಂಗ್​ಗೆ ಎರಡು ಕಡೆಯ ಕುಟುಂಬಸ್ಥರು ಭಾಗವಹಿಸಲಿದ್ದಾರೆ. ಆದರೆ ಯಾವ ಚರ್ಚ್​​ನಲ್ಲಿ ಸೋನಾಲ್​-ತರುಣ್ ಉಂಗುರ ಬದಲಾಯಿಸಿಕೊಳ್ಳುತ್ತಾರೆ ಎಂದು ನಿಖರವಾಗಿ ತಿಳಿದು ಬಂದಿಲ್ಲ.

ಇದನ್ನೂ ಓದಿ: ಜೈಲಲ್ಲಿ ದರ್ಶನ್ ಭೇಟಿ ಮಾಡಿದ್ದೇಕೆ? ಪೊಲೀಸರಿಗೆ ಸಿನಿಮಾ ಡೈಲಾಗ್ ಹೊಡೆದ ಚಿಕ್ಕಣ್ಣ; ಆಮೇಲೇನಾಯ್ತು? 

ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್‌ ಹಿಂದೂ ಸಂಪ್ರದಾಯದಂತೆ ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಮದುವೆಯಾಗಿದ್ದರು. ಈ ಸಂಭ್ರಮಕ್ಕೆ ಸ್ಯಾಂಡಲ್​ವುಡ್​ನ ನಟ, ನಟಿಯರು ಬಂದು ಆಶೀರ್ವಾದಿಸಿ, ಶುಭ ಹಾರೈಸಿದ್ದರು. ಈ ನವ ಜೋಡಿ ಮದುವೆ ಸಂಭ್ರಮದಿಂದ ಇನ್ನು ಹೊರ ಬಂದಿಲ್ಲ. ಇನ್ನು ಚರ್ಚ್​ ವೆಡ್ಡಿಂಗ್ ಬಳಿಕ ಅದ್ಧೂರಿ ರೆಸೆಪ್ಷನ್‌ ಸಹ ಏರ್ಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭರ್ಜರಿ ರೋಸ್​ ಸೆಲೆಬ್ರೆಷನ್.. ಉಂಗುರ ಬದಲಿಸಲು ತರುಣ್ ಸುಧೀರ್- ಸೋನಲ್‌ ರೆಡಿ; ಎಲ್ಲಿ?

https://newsfirstlive.com/wp-content/uploads/2024/08/TARUN_SONAL-1.jpg

Load More