Advertisment

ದರ್ಶನ್​ ಭೇಟಿಗೆ ನಿರಾಕರಿಸಿದ್ರಾ ಸೋನಲ್​? ತರುಣ್​ ಕೈ ಹಿಡಿಯೋ ಹುಡುಗಿ ಕೊಟ್ಟ ಕಾರಣ ಏನು ಗೊತ್ತಾ?

author-image
AS Harshith
Updated On
ದರ್ಶನ್​ ಭೇಟಿಗೆ ನಿರಾಕರಿಸಿದ್ರಾ ಸೋನಲ್​? ತರುಣ್​ ಕೈ ಹಿಡಿಯೋ ಹುಡುಗಿ ಕೊಟ್ಟ ಕಾರಣ ಏನು ಗೊತ್ತಾ?
Advertisment
  • ತರುಣ್​​-ಸೋನಲ್​ ವಿವಾಹಕ್ಕೆ ಇನ್ನು ಏಳು ದಿನ ಬಾಕಿ
  • ಲವ್​ ಮಾಡಿ ಮದುವೆಯಾಗುತ್ತಿರುವ ಸ್ಯಾಂಡಲ್​ವುಡ್​ ನಿರ್ದೇಶಕ ಮತ್ತು ನಟಿ
  • ತರುಣ್​ ಬಾಳಲ್ಲಿ ‘ಬೆಳಕಿನ ಕವಿತೆ’ ಬರೆಯಲು ರೆಡಿಯಾದ ಸೋನಲ್​​ ಮೊಂತೆರೊ

ಸ್ಯಾಂಡಲ್​ವುಡ್​ ನಟ, ನಿರ್ದೇಶಕ ತರುಣ್​ ಮತ್ತು ನಟಿ ಸೋನಲ್​ ಮೊಂತೆರೊ ಮದುವೆ ಇದೇ ತಿಂಗಳು 10-11ರಂದು ನಡೆಯಲಿದೆ. ಮದುವೆಗೆ ಕೆಲ ದಿನಗಳು ಬಾಕಿ ಇದ್ದು, ಸದ್ಯ ಸ್ಟಾರ್​ ಜೋಡಿ ಮದುವೆ ತರಾತುರಿಯಲ್ಲಿದ್ದಾರೆ. ಅತ್ತ ತರುಣ್​ ಆಪ್ತ ಸ್ನೇಹಿತ ನಟ ದರ್ಶನ್​ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈಗಾಗಲೇ ತರುಣ್ ಜೈಲಿಗೆ ತೆರಳಿ ದರ್ಶನ್​ ಭೇಟಿ ಮಾಡಿ, ಮದುವೆ ವಿಚಾರ ಪ್ರಸ್ತಾಪಿಸಿ ವಿಚಾರ ತಿಳಿಸಿದ್ದಾರೆ. ಆದರೆ ನಟಿ ಸೋನಲ್​ ಇದುವರೆಗೆ ದರ್ಶನ್​ ಭೇಟಿಗೆ ಜೈಲಿಗೆ ಹೋಗಿಲ್ಲ. ಇದರ ನಡುವಲ್ಲಿ ರಾಖಿ ಕಟ್ಟಿಸಿದ ಅಣ್ಣನ ಭೇಟಿಗೆ ಸೋನಲ್​ ಯಾಕೆ ಹೋಗಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ. ಆದರೀಗ ಅಭಿಮಾನಿಗಳ ಅನುಮಾನದ ಪ್ರಶ್ನೆಗೆ ನಟಿ ಸೋನಲ್​​ ಉತ್ತರಿಸಿದ್ದಾರೆ.

Advertisment

publive-image

ನಾನು ದರ್ಶನ್ ಅವರನ್ನು ಅಲ್ಲಿ ನೋಡೋಕೆ ಇಷ್ಟ ಪಡಲ್ಲ. ತರುಣ್ ಹೋಗಿ ನೋಡ್ಕೊಂಡ್ ಬಂದ್ರು. ನಾನು ಅವರನ್ನು ನೋಡಿರೋ ರೀತಿನೇ ಬೇರೆ. ಅಂಥಾ ಪರಿಸ್ಥಿತಿಯಲ್ಲಿ ನಾನು ಅವರನ್ನು ನೋಡೋಕೆ ಆಗಲ್ಲ ಎಂದು ನಟಿ ಸೋನಲ್​​ ಸ್ಪಷ್ಟಣೆ ನೀಡಿದ್ದಾರೆ.

publive-image

ಇದನ್ನೂ ಓದಿ: ಫೋಲ್ಡೇಬಲ್​ ಸ್ಮಾರ್ಟ್​​ಫೋನನ್ನು ಪರಿಚಯಿಸುತ್ತಿದೆ ಗೂಗಲ್​! ಆಗಸ್ಟ್​ 14ರಂದು ನಿಮ್ಮ ಮುಂದೆ ಹಾಜರು

ತರುಣ್​​ ವಿವಾಹದ ಮೊದಲ ಆಮಂತ್ರಣ ಪತ್ರವನ್ನು ದರ್ಶನ್​ ಪತ್ನಿ ವಿಜಯಲಕ್ಷ್ಮೀಯವರಿಗೆ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದೆ. ಅವರು ತುಂಬಾ ನೋವಲ್ಲಿ ಇದ್ರು. ಹೆಚ್ಚು ಮಾತಾಡೋಕೆ ಆಗ್ಲಿಲ್ಲ ಎಂದು ತರುಣ್​ ಹೇಳಿದ್ದಾರೆ.

Advertisment

publive-image

ಇದನ್ನೂ ಓದಿ: ಅಯ್ಯೋ! ಏಕಾಏಕಿ ಬ್ಯಾನ್​​ ಆಯ್ತು ವಾಟ್ಸ್​​ಆ್ಯಪ್​, ಇನ್​ಸ್ಟಾ, ಯೂಟ್ಯೂಬ್​! ಮುಂದೇನು ಕತೆ?

ಆಗಸ್ಟ್ 10-11 ರಂದು ಬೆಂಗಳೂರಿನ ಬಸವೇಶ್ವರ ನಗರದ ಶಂಕರ್​ ಮಠದ ಬಳಿಯ​ ಹಾಲ್​ನಲ್ಲಿ ತರುಣ್​ ಮತ್ತು ಸೋನಲ್​ ವಿವಾಹವಾಗುತ್ತಿದ್ದಾರೆ. ಇನ್ನು ಈ ಜೋಡಿ ವಿಶೇಷವಾದ ಆಮಂತ್ರಣ ಪತ್ರಿಕೆಯನ್ನು​ ಮುದ್ರಿಸಿದ್ದಾರೆ. ಪರಿಸರ ಸ್ನೇಹಿ ಲಗ್ನ ಪತ್ರಿಕೆಯನ್ನು ಮುದ್ರಿಸಿ ವಿತರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment