/newsfirstlive-kannada/media/post_attachments/wp-content/uploads/2024/11/BAL.jpg)
ಭಾರತೀಯ ಫ್ಯಾಶನ್ ಡಿಸೈನ್ ಅನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದ ಲೆಜೆಂಡರಿ ಫ್ಯಾಷನ್ ಡಿಸೈನರ್ ರೋಹಿತ್ ಬಾಲ್ (63) ಅವರು ನಿಧನ ಹೊಂದಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ದೆಹಲಿಯ ಆಸ್ಪತ್ರೆಯೊಂದರಲ್ಲಿ ನ.1 ರಂದು ಕೊನೆಯುಸಿರೆಳೆದರು. ಸದ್ಯ ಈ ಸಂಬಂಧ ಬಾಲಿವುಡ್ ನಟಿ ಸೋನಮ್ ಕಪೂರ್ ಅವರು ಭಾವನಾತ್ಮಕ ಗೌರವ ಸೂಚಿಸಿದ್ದಾರೆ.
ನಿಧನರಾದ ರೋಹಿತ್ ಬಾಲ್ ಅವರನ್ನು ಬಾಲಿವುಡ್ ಕ್ಷೇತ್ರದಲ್ಲಿ ಎಲ್ಲರೂ ಪ್ರೀತಿಯಿಂದ ಗುಡ್ಡ ಎಂದೇ ಕರೆಯುತ್ತಿದ್ದರು. ಇದೇ ಹೆಸರನ್ನು ಸೋನಮ್ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬಳಸಿದ್ದಾರೆ. ಸಂಭ್ರದಿಂದ ದೀಪಾವಳಿ ಆಚರಣೆ ಮಾಡುವಾಗಲೇ ನೀವು ಇಲ್ಲ ಎನ್ನುವ ಸುದ್ದಿ ಕೇಳಿ ತುಂಬಾ ನೋವಾಯಿತು. ನಿಮ್ಮ ಸಲಹೆಯಂತೆ ಎಲ್ಲವನ್ನೂ ಕಲಿತೆ. ನಾನು ನಿಮ್ಮ ದೊಡ್ಡ ಅಭಿಮಾನಿ. ನಿಮಗೆ ಶಾಂತಿ ಸಿಗಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸೋನಮ್ ಕಪೂರ್ ಬರೆದುಕೊಂಡಿದ್ದಾರೆ.
ಇನ್ನು ರೋಹಿತ್ ಬಾಲ್ ಅವರ ನೆನಪಿಗಾಗಿ ಅವರ ವಿನ್ಯಾಸಗಳಲ್ಲಿ ಒಂದಾದ ಡ್ರೆಸ್ ತೊಟ್ಟಿರುವ ಫೋಟೋವನ್ನ ಇನ್ಸ್ಟಾಗೆ ಶೇರ್ ಮಾಡಿದ್ದಾರೆ. ರೋಹಿತ್ ಬಾಲ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು 2023 ನವೆಂಬರ್ನಲ್ಲಿ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆ ಹಿನ್ನೆಲೆಯಲ್ಲಿ ಅವರನ್ನು ದೆಹಲಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಫ್ಯಾಶನ್ ಡಿಸೈನ್ ಲೆಜೆಂಡರಿ ಕೊನೆಯುಸಿರೆಳೆದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ