newsfirstkannada.com

21 ದಿನಗಳ ಅಮರಣಾಂತ ಉಪವಾಸ ಅಂತ್ಯಗೊಳಿಸಿದ ಸೋನಮ್ ವಾಂಗ್​ಚುಕ್..!

Share :

Published March 27, 2024 at 7:58am

    ಉಪ್ಪು ಮತ್ತು ನೀರನ್ನು ಮಾತ್ರ ಸೇವಿಸಿ ಸತ್ಯಾಗ್ರಹ ನಡೆಸುತ್ತಿದ್ದರು

    ಬೇಡಿಕೆ ಈಡೇರದಿದ್ರೆ ಉಪವಾಸ ವಿಸ್ತರಿಸುವ ಬಗ್ಗೆ ಎಚ್ಚರಿಕೆ

    ಉಪವಾಸ ಅಂತ್ಯಗೊಳ್ತಿದ್ದಂತೆ ಸಾವಿರಾರು ಮಂದಿ ಸ್ಥಳಕ್ಕೆ ಜಮಾವಣೆ

ಲಡಾಖ್​ನ ಪರಿಸರದ ಉಳಿವು ಮತ್ತು ರಾಜ್ಯದ ಸ್ಥಾನಮಾನಕ್ಕೆ ಒತ್ತಾಯಿಸಿ ಇಂಜಿನಿಯರ್ ಮತ್ತು ಶಿಕ್ಷಣ ಸುಧಾರಕ ಸೋನಮ್ ವಾಂಗ್​ಚುಕ್ ಕಳೆದ 21 ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ.

ಇವರು 21 ದಿನಗಳ ಕಾಲ ಉಪ್ಪು ಮತ್ತು ನೀರನ್ನು ಮಾತ್ರ ಸೇವಿಸಿ ಸತ್ಯಾಗ್ರಹ ನಡೆಸುತ್ತಿದ್ದರು. ಇದೀಗ ಸತ್ಯಾಗ್ರಹಕ್ಕೆ ಬ್ರೇಕ್​ ಹಾಕಿದ್ದು, ಕೇಂದ್ರ ಸರ್ಕಾರ ಒಂದು ವೇಳೆ ನಮ್ಮ ಮನವಿಗೆ ಒಪ್ಪದಿದ್ದರೆ, ನನ್ನ ಹೋರಾಟವನ್ನು ಸಾವಿನವರೆಗೂ ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಲಡಾಖ್​ನಲ್ಲಿ 13ನೇ ದಿನಕ್ಕೆ ಕಾಲಿಟ್ಟ ಅಮರಣಾಂತ ಉಪವಾಸ; ಸೋನಮ್ ವಾಂಗ್​ಚುಕ್ ಅವರ ಬೇಡಿಕೆ ಏನು..?

ಉಪವಾಸ ಅಂತ್ಯಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಸಾವಿರಾರು ಮಂದಿ ಜಮಾಯಿಸಿದ್ದು, ಅವರೂ ಕೂಡ ಇದೇ ಬೇಡಿಕೆಗಳನ್ನು ಮುಂದಿಟ್ಟು ಒಂದ್ವೇಳೆ ಬೇಡಿಕೆ ಈಡೇರದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಏನಿದು ಬೇಡಿಕೆ..?

ಕೇಂದ್ರಾಡಳಿತ ಲಡಾಖ್​ ಅನ್ನು ಸಂವಿಧಾನದ ಆರನೇ ಶೆಡ್ಯೂಲ್​ಗೆ ಸೇರಿಸಬೇಕು ಎಂಬುವುದು ವಾಂಗ್​ ಚುಕ್ ಆಗ್ರಹ. ಇದು ಲಡಾಖ್​ನ ಸ್ಥಳೀಯ ಜನರಿಗೆ ಬುಡಕಟ್ಟು ಪ್ರದೇಶಗಳ ಆಡಳಿತದ ಹಕ್ಕನ್ನು ನೀಡುತ್ತದೆ. ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದೆ. ಸಂವಿಧಾನದ ಆರನೇ ಶೆಡ್ಯೂಲ್ ಭಾರತದ ಉದಾರತೆಗೆ ಸಾಕ್ಷಿಯಾಗಿದೆ. ಆರನೇ ಶೆಡ್ಯೂಲ್‌ನ ಉದ್ದೇಶ ಕೇವಲ ಲಡಾಕ್​ ಪ್ರದೇಶವನ್ನು ಹೊರಗಿನವರಿಂದ ದೂರ ಇಡೋದಲ್ಲ. ಸ್ಥಳೀಯ ಜನರಿಂದಲೂ ಪರಿಸರ ಸೂಕ್ಷ್ಮ ಪ್ರದೇಶಗಳು, ಸಂಸ್ಕೃತಿಗಳು ಮತ್ತು ಬುಡಕಟ್ಟುಗಳನ್ನು ರಕ್ಷಿಸುವ ಅವಶ್ಯಕತೆ ಇದೆ. ಇದು ಜಾರಿಯಾದರೆ ಅದೆಲ್ಲ ಸಾಧ್ಯ. ಸೂಕ್ಷ್ಮವಲ್ಲದ ಪ್ರದೇಶಗಳನ್ನು ಆರ್ಥಿಕ ವಲಯಗಳಾಗಿ ಮಾಡಬಹುದು. ಇದರಿಂದ ಕೈಗಾರಿಕೆಗಳನ್ನು ಸ್ಥಾಪಿಸಬಹುದು. ದೇಶ ಮತ್ತು ವಿದೇಶಗಳು ಇಲ್ಲಿ ಹೂಡಿಕೆಗಳನ್ನೂ ಮಾಡಬಹುದು. ಇದರಿಂದ ಲಡಾಖ್‌ ಜನರಿಗೆ ಯಾವುದೇ ಸಮಸ್ಯೆ ಆಗಲ್ಲ ಅನ್ನೋದು ವಾಂಗ್​ಚುಕ್​​ ಅವರ ಬೇಡಿಕೆ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

21 ದಿನಗಳ ಅಮರಣಾಂತ ಉಪವಾಸ ಅಂತ್ಯಗೊಳಿಸಿದ ಸೋನಮ್ ವಾಂಗ್​ಚುಕ್..!

https://newsfirstlive.com/wp-content/uploads/2024/03/sonam.jpg

Load More