/newsfirstlive-kannada/media/post_attachments/wp-content/uploads/2025/06/Raja-raghuvamshi.jpg)
ಮೇಘಾಲಯಕ್ಕೆ ಹನಿಮೂನ್‌ಗಾಗಿ ಹೋಗಿದ್ದ ರಾಜ ರಘುವಂಶಿ ಹತ್ಯೆ ಕೇಸ್‌ನ ಮತ್ತಷ್ಟು ಮಾಹಿತಿಗಳು ಬಯಲಾಗಿವೆ. ಪೊಲೀಸರಿಗೆ ಸೋನಮ್ ಮೇಲೆಯೇ ಅನುಮಾನ ಶುರುವಾಗಲು ಬಲವಾದ ಕಾರಣಗಳು ಇತ್ತು.
ರಾಜ ರಘುವಂಶಿ ಜೊತೆ ತಂಗಿದ್ದ ಹೋಮ್ ಸ್ಟೇನಲ್ಲೇ ಹಂತಕಿ ಸೋನಮ್ ಮಂಗಳಸೂತ್ರ ಹಾಗೂ ಚಿನ್ನದ ಉಂಗುರವನ್ನು ಬಿಟ್ಟು ಹೋಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಮಂಗಳಸೂತ್ರ ಧರಿಸದೇ ಹೋಗಿದ್ದು ಅನುಮಾನಕ್ಕೆ ಕಾರಣವಾಗಿದೆ.
/newsfirstlive-kannada/media/post_attachments/wp-content/uploads/2025/06/Meghalaya-honymoon-IndoreCouple-2.jpg)
ಹೋಮ್ ಸ್ಟೇನಲ್ಲಿ ಮಂಗಳ ಸೂತ್ರ ಸಿಕ್ಕ ಮೇಲೆ ಪೊಲೀಸರು ಸೋನಮ್ ಮೇಲೆ ಅನುಮಾನಪಟ್ಟು ಆಕೆಯ ಮೇಲೆ ಗಮನ ಕೇಂದ್ರೀಕರಿಸಿದ್ದರು. ಸೋನಮ್ ಫೋನ್ ಕಾಲ್ ರೆಕಾರ್ಡ್ ತೆಗೆದು ತನಿಖೆ ನಡೆಸಿದಾಗ ಯಾಱರ ಜೊತೆ ಸಂಪರ್ಕ ಇದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ. ಸೋನಮ್ ಫೋನ್ ಕಾಲ್ ಆಧಾರದ ಮೇಲೆ ಪ್ರಿಯಕರ ರಾಜು ಕುಶ್ವಾಹಾ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ.
/newsfirstlive-kannada/media/post_attachments/wp-content/uploads/2025/06/Meghalaya-honymoon-IndoreCouple.jpg)
ಹನಿಮೂನ್ ಹ*ತ್ಯೆಗೂ ನಡೆದಿದ್ದೇನು?
ಕಳೆದ ಮೇ 23ರ ಮಧ್ಯಾಹ್ನ 12.30ಕ್ಕೆ ರಾಜ ರಘುವಂಶಿ ತಾಯಿ ಉಮಾ ಜೊತೆ ಸೋನಮ್ ಫೋನ್ ಮಾಡಿ ಮಾತನಾಡಿದ್ದರು. ತನ್ನ ಮಗ ರಾಜ ರಘುವಂಶಿ ಜೊತೆಗೂ ಮಾತನಾಡಿಸಿದ್ದರು. ಇದೇ ತಾಯಿ-ಮಗನ ಕೊನೆಯ ಫೋನ್ ಸಂಭಾಷಣೆ.
ಮೇ 23ರ ಮಧ್ಯಾಹ್ನ 2.15ರೊಳಗೆ ಆರೋಪಿಗಳಾದ ವಿಶಾಲ್, ಆಕಾಶ್, ಆನಂದ್ ಸೇರಿ ರಾಜು ರಘುವಂಶಿಯನ್ನು ಹತ್ಯೆ ಮಾಡಿದ್ದರು. ಮಧ್ಯಾಹ್ನ 2.30ಕ್ಕೆ ರಾಜು ರಘುವಂಶಿ ಫೋನ್‌ನಿಂದಲೇ ಸೋನಮ್ ಫೇಸ್ ಬುಕ್ ಅಕೌಂಟ್‌ನಿಂದ ನಮ್ಮದು ಏಳೇಳು ಜನ್ಮಗಳ ಸಂಬಂಧ ಎಂದು ಪೋಸ್ಟ್ ಮಾಡಿದ್ದರು.
/newsfirstlive-kannada/media/post_attachments/wp-content/uploads/2025/06/Meghalaya-honymoon-IndoreCouple-1.jpg)
ಯಾರಿಗೂ ಅನುಮಾನ ಬಾರದಂತೆ ಸೋನಮ್, ತನ್ನ ಗಂಡ ರಾಜು ರಘುವಂಶಿ ಜೊತೆ ಚೆನ್ನಾಗಿದ್ದೇನೆ ಎಂಬ ಭಾವನೆ ಬರಲೆಂದು ಈ ರೀತಿ ಪೋಸ್ಟ್ ಮಾಡಿದ್ದಾರೆ. ಆದರೆ ಹಂತಕರ ಗ್ಯಾಂಗ್ ಮಚ್ಚಿನಿಂದ ತಲೆಗೆ ಹೊಡೆದು ರಾಜ ರಘುವಂಶಿಯ ಹತ್ಯೆ ಮಾಡಿದೆ. ಬಳಿಕ ರಾಜ ರಘುವಂಶಿಯ ಶವವನ್ನು ಬೆಟ್ಟದ ಮೇಲ್ಭಾಗದಿಂದ ಕಂದಕಕ್ಕೆ ತಳ್ಳಿದ್ದಾರೆ.
ಇದನ್ನೂ ಓದಿ: ಕಾಲ್ತುಳಿತ ಸಂತ್ರಸ್ತರಿಗೆ ಪರಿಹಾರ ಘೋಷಿಸಿ ಸೈಲೆಂಟ್ ಆದ RCB, KSCAನಲ್ಲೂ ಗೊಂದಲ; ಕಾರಣವೇನು?
ಸೋನಮ್-ರಾಜು ಪರಸ್ಪರ ಆರೋಪ!
ಇನ್ನೂ ಪೊಲೀಸ್ ತನಿಖೆಯ ವೇಳೆ ಮೇಘಾಲಯ ಪೊಲೀಸರು ಸೋನಮ್ ಹಾಗೂ ರಾಜು ಕುಶ್ವಾಹಾ ಇಬ್ಬರನ್ನೂ ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ರಾಜ ರಘುವಂಶಿ ಕೊಲೆಗೆ ಸೋನಮಳೇ ಕಾರಣ ಎಂದು ರಾಜು ಕುಶ್ವಾಹಾ ಹೇಳಿದ್ರೆ, ನಾನು ಅಲ್ಲ, ರಾಜು ಕುಶ್ವಾಹಾನೇ ರಾಜ ರಘುವಂಶಿ ಕೊಲೆಗೆ ಕಾರಣ ಎಂದು ಸೋನಮ್ ಹೇಳಿದ್ದಾರೆ. ಕೊಲೆಗೆ ನೀನು ಕಾರಣ, ನೀನು ಕಾರಣ ಎಂದು ಪರಸ್ಪರರ ಮೇಲೆ ಆರೋಪ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us