ಇರಾನ್​ ಮೇಲೆ ಇಸ್ರೇಲ್​ ದಾಳಿ, ಇದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧ; ಸೋನಿಯಾ ಗಾಂಧಿ

author-image
Bheemappa
Updated On
ಇರಾನ್​ ಮೇಲೆ ಇಸ್ರೇಲ್​ ದಾಳಿ, ಇದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧ; ಸೋನಿಯಾ ಗಾಂಧಿ
Advertisment
  • ಸೋನಿಯಾ ಗಾಂಧಿ ಲೇಖನ ರೀಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ
  • ಇರಾನ್ ಮೇಲೆ ಇಸ್ರೇಲ್​​ನಿಂದ ದಾಳಿಯು ಕಾನೂನಿಗೆ ವಿರುದ್ಧವಾಗಿದೆ
  • ಭಾರತ ಮೌನ, ಮೋದಿ ಸರ್ಕಾರವನ್ನ ಟೀಕಿಸಿದ ಸೋನಿಯಾ ಗಾಂಧಿ

ಇಸ್ರೇಲ್ ಮತ್ತು ಇರಾನ್ ಸಂಘರ್ಷದ ಬಗ್ಗೆ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂಗ್ಲೀಷ್ ಪತ್ರಿಕೆಯೊಂದಕ್ಕೆ ಸುದೀರ್ಘ ಲೇಖನ ಬರೆದಿದ್ದಾರೆ. ಇದರಲ್ಲಿ ಇಸ್ರೇಲ್​ನಿಂದ ಇರಾನ್ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯುಹು ಶಾಂತಿಯನ್ನು ಕಡೆಗಣಿಸಿದ್ದು, ಉಗ್ರವಾದವನ್ನು ಬೆಳೆಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೂಡ ಇರಾನ್ ಮೇಲಿನ ದಾಳಿಯ ಅಪಾಯಕಾರಿ ಹಾದಿಯನ್ನು ಹಿಡಿದಿದ್ದಾರೆ ಎಂದು ಟೀಕಿಸಿದ್ದಾರೆ. ಜೊತೆಗೆ ಗಾಜಾ, ಇರಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯ ಬಗ್ಗೆ ಭಾರತದ ಮೌನವು ಭಾರತದ ನೈತಿಕ, ರಾಜತಾಂತ್ರಿಕ ಸಂಪ್ರದಾಯಗಳಿಗೆ ವಿರುದ್ಧವಾದದ್ದು ಎಂದು ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ.

ಸೋನಿಯಾ ಗಾಂಧಿ ಅವರ ಈ ಲೇಖನವನ್ನು ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಟ್ವೀಟರ್​​ನಲ್ಲಿ ರೀಟ್ವೀಟ್ ಮಾಡಿದ್ದು, ಇಸ್ರೇಲ್​​ನಿಂದ ಇರಾನ್ ಮೇಲಿನ ದಾಳಿಯು ಕಾನೂನಿಗೆ ವಿರುದ್ಧವಾದದ್ದು ಎಂದು ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿದ್ದಾರೆ. ಸೋನಿಯಾ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ ಇಬ್ಬರು ಇಸ್ರೇಲ್​​ನಿಂದ ಇರಾನ್ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದಾರೆ. ಇದು ಭಾರತ ಹಾಗೂ ಕರ್ನಾಟಕದಲ್ಲೂ ಚರ್ಚೆಗೆ ಕಾರಣವಾಗಿದೆ.

publive-image

ಸೋನಿಯಾ ಗಾಂಧಿ ಬರೆದ ಲೇಖನದಲ್ಲಿ ಏನೇನಿದೆ?.

ಗಾಜಾದ ನಾಶದ ಬಗ್ಗೆ ಭಾರತದ ಮೌನ ಹಾಗೂ ಇರಾನ್‌ನಲ್ಲಿನ ಪ್ರತಿಕೂಲ ಪರಿಸ್ಥಿತಿಯ ಬಗೆಗಿನ ಮೌನವು ಭಾರತದ ನೈತಿಕ, ರಾಜತಾಂತ್ರಿಕ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಇಂಗ್ಲೀಷ್ ಪತ್ರಿಕೆಯೊಂದಕ್ಕೆ ಲೇಖನ ಬರೆದಿದ್ದಾರೆ.
ಗಾಜಾದಲ್ಲಿನ ಮಾನವೀಯತೆಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ಶಾಂತಿಯುತವಾದ 2 ದೇಶಗಳ ನಿಲುವು ಅನ್ನು ಕೈಬಿಟ್ಟಿದೆ.

ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಎಂಬ 2 ದೇಶಗಳು ಇರಬೇಕೆಂಬುದು ಭಾರತದ ದೀರ್ಘಕಾಲದ ನೀತಿಯಾಗಿತ್ತು. ಇದನ್ನು ಈಗ ಭಾರತ ಸರ್ಕಾರ ಕೈ ಬಿಟ್ಟಿದೆ ಎಂದು ಸೋನಿಯಾಗಾಂಧಿ ಟೀಕಿಸಿದ್ದಾರೆ. ಸಾರ್ವಭೌಮ, ಸ್ವತಂತ್ರ ಪ್ಯಾಲೆಸ್ಟೈನ್ ದೇಶವು ಇಸ್ರೇಲ್ ಪಕ್ಕದಲ್ಲೇ ಇರಬೇಕೆಂಬುದು ಭಾರತದ ಈ ಹಿಂದಿನ ನಿಲುವು ಆಗಿತ್ತು. ಈಗ ಭಾರತದ ಮೌನವು ಧ್ವನಿಯನ್ನು ಕಳೆದುಕೊಂಡಿದ್ದನ್ನು ಮಾತ್ರ ಪ್ರತಿನಿಧಿಸಲ್ಲ, ಮೌಲ್ಯಗಳ ಶರಣಾಗತಿಯನ್ನು ಪ್ರತಿನಿಧಿಸುತ್ತದೆ ಎಂದು ಸೋನಿಯಾಗಾಂಧಿ ಹೇಳಿದ್ದಾರೆ.

ಇಸ್ರೇಲ್ ದೇಶವು ಬೇಷರತ್ ಮತ್ತು ಪವರ್ ಫುಲ್ ಆದ ಪಾಶ್ಚಿಮಾತ್ಯ ರಾಷ್ಟ್ರಗಳ ಬೆಂಬಲದೊಂದಿಗೆ ಇರಾನ್ ಮೇಲೆ ದಾಳಿ ನಡೆಸಿದೆ.

ಇದನ್ನೂ ಓದಿ:ಘನ ಘೋರ ಘಟನೆ.. ಸೊಸೆಯ ಜೀವ ತೆಗೆದು ಮನೆ ಮುಂದೆಯೇ ಹೂತು ಹಾಕಿದ ಪಾಪಿ ಮಾವ!

publive-image

ಭಾರತದ ಕಾಂಗ್ರೆಸ್ ಪಕ್ಷವು 2023ರ ಆಕ್ಟೋಬರ್ 7 ರಂದು ಹಮಾಸ್ ಸಂಘಟನೆಯು ಇಸ್ರೇಲ್ ಮೇಲೆ ನಡೆಸಿದ ದಾಳಿಯನ್ನು ಖಂಡಿಸುತ್ತದೆ. ಆ ದಾಳಿಯು ಭಯಾನಕವಾಗಿದ್ದು, ಒಪ್ಪಲು ಸಾಧ್ಯವಿಲ್ಲ. ಆದರೇ, ಇಸ್ರೇಲ್‌ನ ವಿನಾಶಕಾರಿ ಪ್ರತಿಕ್ರಿಯೆ ಬಗ್ಗೆ ನಾವು ಮೌನವಾಗಿರಲು ಸಾಧ್ಯವಿಲ್ಲ. 55 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೈನ್ ನಾಗರಿಕರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಇಡೀ ಕುಟುಂಬ, ಆಸ್ಪತ್ರೆಗಳು ದಾಳಿಗೀಡಾಗಿವೆ. ಗಾಜಾ ಸಂಪೂರ್ಣವಾಗಿ ಕುಸಿಯುವ ಸ್ಥಿತಿಯಲ್ಲಿದೆ. ಗಾಜಾದ ನಾಗರಿಕರು ಮಾತನಾಡಲಾಗದಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸೋನಿಯಾಗಾಂಧಿ ಲೇಖನದಲ್ಲಿ ಬರೆದಿದ್ದಾರೆ.

2025ರ ಜೂನ್ 13 ರಂದು ವಿಶ್ವ ಮತ್ತೊಮ್ಮೆ ಇಸ್ರೇಲ್‌ನ ಏಕಪಕ್ಷೀಯ ಮಿಲಿಟರಿಯ ಕ್ರಮಗಳಿಂದ ಉಂಟಾದ ಅಪಾಯಕಾರಿ ಪರಿಣಾಮಗಳಿಗೆ ಸಾಕ್ಷಿಯಾಗಿದೆ. ಇಸ್ರೇಲ್​​ನಿಂದ ಇರಾನ್ ಮತ್ತು ಅದರ ಸಾರ್ವಭೌಮತ್ವದ ಮೇಲಿನ ಕಾನೂನಿಗೆ ವಿರುದ್ಧವಾದ ದಾಳಿಯು ಭಾರಿ ತೊಂದರೆಯನ್ನು ಉಂಟು ಮಾಡುವಂಥದ್ದು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇರಾನ್ ಮೇಲೆ ಇಸ್ರೇಲ್ ನಡೆಸಿದ ಬಾಂಬಿಂಗ್ ಮತ್ತು ಇರಾನ್ ನೆಲದಲ್ಲಿ ನಡೆದ ಟಾರ್ಗೆಟೆಡ್ ಹತ್ಯೆಗಳನ್ನು ಖಂಡಿಸುತ್ತದೆ. ಇದು ಅಪಾಯಕಾರಿ ಉದ್ವಿಗ್ನತೆಯಿಂದ ಪ್ರಾದೇಶಿಕ ಮತ್ತು ಜಾಗತಿಕ ಪರಿಣಾಮಗಳನ್ನು ಉಂಟು ಮಾಡುತ್ತದೆ. ಇಸ್ರೇಲ್‌ನ ಇತ್ತೀಚಿನ ಗಾಜಾದ ಮೇಲಿನ ಅಪರಿಮಿತ ದಾಳಿ ಸೇರಿದಂತೆ ಬಹಳಷ್ಟು ಕ್ರಮಗಳು ನಾಗರಿಕರ ಜೀವ ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಕಡೆಗಣಿಸಿವೆ. ಇಸ್ರೇಲ್​ನ ಈ ಕ್ರಮಗಳು ಅಸ್ಥಿರತೆಯನ್ನು ಮೂಢಿಸುತ್ತಿದ್ದು, ಮತ್ತಷ್ಟು ಬಿಕ್ಕಟ್ಟಿಗೆ ನಾಂದಿ ಹಾಡಲಿವೆ ಎಂದು ಸೋನಿಯಾಗಾಂಧಿ ಹೇಳಿದ್ದಾರೆ.


">June 21, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment