/newsfirstlive-kannada/media/post_attachments/wp-content/uploads/2025/01/Droupadi_Murmu_1-2.jpg)
ನವದೆಹಲಿ: 2025-26 ಬಜೆಟ್ ಮಂಡನೆಗೂ ಒಂದಿನ ಮೊದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಸಂಸತ್ತಿನ ಬಜೆಟ್ ಅಧಿವೇಶನ ಪ್ರಾರಂಭಿಸಿದ್ದಾರೆ. ಉಭಯ ಸದನಗಳ ಕುರಿತು ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಷ್ಟ್ರಪತಿ ಭಾಷಣದ ಮೇಲೆ ಟೀಕೆ ಮಾಡಿದ್ದಾರೆ.
ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಿದ್ದಾರೆ. ಈ ಭಾಷಣಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಟೀಕೆ ವ್ಯಕ್ತಪಡಿಸಿದ್ದಾರೆ. ಭಾಷಣ ಮಾಡುವಾಗ ರಾಷ್ಟ್ರಪತಿ ತುಂಬಾ ದಣಿದಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: Economic Survey: ದೇಶದ ಜಿಡಿಪಿ, ಹಣದುಬ್ಬರದ ಬಗ್ಗೆ ಮಾಹಿತಿ, ಉದ್ಯೋಗಿಗಳಿಗೆ ಎಚ್ಚರಿಕೆ..!
ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದ ಬಳಿಕ ಹೊರ ಬಂದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ರಾಷ್ಟ್ರಪತಿ ಭಾಷಣ ತುಂಬಾ ಬೋರಿಂಗ್ ಆಗಿತ್ತು ಅಲ್ವಾ ಎಂದು ಸೋನಿಯಾ ಗಾಂಧಿರನ್ನ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸೋನಿಯಾ ಗಾಂಧಿ, ಪೂರ್ ಲೇಡಿ, ರಾಷ್ಟ್ರಪತಿ ತುಂಬಾ ದಣಿದಿದ್ದರು. ಭಾಷಣದೂದ್ದಕ್ಕೂ ಸುಳ್ಳು ಭರವಸೆಗಳೇ ತುಂಬಿದ್ದವು ಎಂದು ಹೇಳಿದ್ದಾರೆ. ಸದ್ಯ ಇದೀಗ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದು ಅಲ್ಲದೇ ಕಾಂಗ್ರೆಸ್ ಸಂಸದ ಪಪ್ಪು ಯಾದವ್ ಅವರು ಮಾತನಾಡಿ, ರಾಷ್ಟ್ರಪತಿ ದ್ರೌಪದಿ ಮುರ್ಮು ರಬ್ಬರ್ ಸ್ಟಾಂಪ್ ಇದ್ದಾಗೆ. ಅವರು ಭಾಷಣ ಮಾಡುವಾಗ ಯಾರದ್ದೋ ಲವ್ ಲೆಟರ್ ಓದಿದಂತೆ ಓದಿದರು. ಅದರಿಂದ ಏನು ಉಪಯೋಗವಿಲ್ಲ. ಸುಳ್ಳುಗಳಿಂದ ಜನರನ್ನು ಡೈವರ್ಟ್ ಮಾಡುವ ಕೆಲಸ ನಡೆದಿದೆ ಎಂದು ಪಪ್ಪು ಯಾದವ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ