/newsfirstlive-kannada/media/post_attachments/wp-content/uploads/2024/05/Rahul-Gandhi-Sonia-Gandhi.jpg)
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ನೋಟಿಸ್ ಜಾರಿಗೊಳಿಸಿದ ಬೆನ್ನಲ್ಲೇ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಸಂಕಷ್ಟ ಶುರುವಾಗಿದೆ.
ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಕಾಂಗ್ರೆಸ್‌ನ ಘಟಾನುಘಟಿಗಳಿಗೆ ಸಂಕಷ್ಟ ಎದುರಾಗಿದೆ. ಈ ಪ್ರಕರಣದ ಹೆಬ್ಬಾವಿನಂತೆ ಹಸ್ತಪಡೆಯನ್ನ ಬಿಟ್ಟು ಬಿಡದಂತೆ ಸುತ್ತುವರಿದಿದ್ದು, ಕೋರ್ಟ್‌ಗೆ ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್ ಸಲ್ಲಿಸಿದೆ. ಗಾಂಧಿ ಪರಿವಾರದ ಮೇಲೆ ಆರೋಪದ ಚಾರ್ಜ್ ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯದ ರೈತರಿಗೆ ಖುಷಿ ಸುದ್ದಿ ಕೊಟ್ಟ ಭಾರತೀಯ ಹವಾಮಾನ ಇಲಾಖೆ; ಈ ಬಾರಿಯೂ ಬರಗಾಲವಿಲ್ಲ!
ನ್ಯಾಷನಲ್ ಹೆರಾಲ್ಡ್ನ ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ತಾಯಿ ಸೋನಿಯಾ ಗಾಂಧಿ ಆರೋಪಿ 1 ಆಗಿದ್ರೆ.. ಮಗ ರಾಹುಲ್ ಗಾಂಧಿ ಆರೋಪಿ 2 ಅಂತಾ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಇದೇ ಮೊದಲ ಬಾರಿಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ಭಾರೀ ಬಿರುಗಾಳಿಯನ್ನೇ ಸೃಷ್ಟಿಸಿದೆ.
ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ಈ ಮೂಲಕ ಮೊದಲ ಬಾರಿಗೆ ಸೋನಿಯಾ ಗಾಂಧಿಮತ್ತು ರಾಹುಲ್ ಗಾಂಧಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾದಂತಾಗಿದೆ. ಇವರಿಬ್ಬರ ಜೊತೆಗೆ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಹಾಗೂ ಸುಮನ್ ದುಬೆ ಹೆಸರನ್ನೂ ಆರೋಪಿಗಳ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಇಡಿ ಚಾರ್ಜ್‌ಶೀಟ್ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಕೇಂದ್ರದ ವಿರುದ್ಧ ಮುಗಿಬಿದ್ದಿದ್ದು, ಇದು ದ್ವೇಷ ರಾಜಕಾರಣವಲ್ಲದೇ ಮತ್ತೇನು ಅಲ್ಲ ಎಂದು ಕಿಡಿಕಾರುತ್ತಿದ್ದಾರೆ.
‘ಕೈ’ ಲಾಕ್ ಮಾಡುತ್ತಾ ಇ.ಡಿ?
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಏಪ್ರಿಲ್ 25ರಂದು ವಿಚಾರಣೆ ನಡೆಸಲಿದೆ. ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಏಪ್ರಿಲ್ 9ರಂದು ಸಲ್ಲಿಸಲಾದ ಆರೋಪಪಟ್ಟಿಯನ್ನ ಪರಿಶೀಲನೆ ನಡೆಸಿ, ಏಪ್ರಿಲ್ 25ರಂದು ಪ್ರಕರಣವನ್ನ ಮುಂದಿನ ವಿಚಾರಣೆಗೆ ಮುಂದೂಡಿದ್ದಾರೆ. ಈ ಹಿಂದೆ, ಕಾಂಗ್ರೆಸ್ ನಿಯಂತ್ರಿತ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮತ್ತು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ಗೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಪ್ತಿ ಮಾಡಿದ್ದ 661 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನ ವಶಕ್ಕೆ ಪಡೆಯಲು ಇಡಿ ನೋಟಿಸ್ ಜಾರಿ ಮಾಡಿತ್ತು. ಆದ್ರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿರುವುದು ಇದೇ ಮೊದಲು.
ಇದನ್ನೂ ಓದಿ:ಏನಾದ್ರೂ ಆಗ್ಲಿ.. ಜೀವನೋತ್ಸಾಹ ಹೀಗೆ ಇರಲಿ; ಈ ಜೋಡಿ ಖುಷಿಯ ವಿಡಿಯೋ ಒಮ್ಮೆ ನೋಡಿ!
ಪ್ರಿಯಾಂಕಾ ಗಾಂಧಿ ಪತಿಗೂ ಇ.ಡಿ ಸಂಕಷ್ಟ
ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾಗೂ ಇ.ಡಿ ಬೆಂಬಿಡದೇ ಕಾಡ್ತಿದೆ. ಹರಿಯಾಣದ ಶಿಖೋಪುರ ಭೂ ವ್ಯವಹಾರದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದಿಂದ 2ನೇ ಬಾರಿಗೆ ಸಮನ್ಸ್ ನೀಡಲಾಗಿತ್ತು. ಸಮನ್ಸ್ ಬಂದ ಬೆನ್ನಲ್ಲೇ ರಾಬರ್ಟ್ ವಾದ್ರಾ, ನಿನ್ನೆ ವಿಚಾರಣೆಗಾಗಿ ಇಡಿ ಕಚೇರಿಗೆ ಹಾಜರಾಗಿದ್ರು. ರಾಬರ್ಟ್ ವಾದ್ರಾಗೆ ಸುಮಾರು 6 ಗಂಟೆಗಳ ಸುಧೀರ್ಘ ವಿಚಾರಣೆಯನ್ನ ತನಿಖಾಧಿಕಾರಿಗಳು ನಡೆಸಿದ್ರು. ಇಂದು ಮತ್ತೆ ವಿಚಾರಣೆಗೆ ಬರೋದಕ್ಕೆ ಸೂಚಿಸಿರೋದ್ರಿಂದ ವಾದ್ರಾ ಇಂದು ಇ.ಡಿ ಮುಂದೆ ಹಾಜರಾಗಲಿದ್ದಾರೆ.
ರಾಬರ್ಟ್ ವಾದ್ರಾ ವಿರುದ್ಧ ಪ್ರಕರಣದಲ್ಲಿ ಈಗಾಗಲೇ ಸಂಬಂಧಿಸಿ ಆಸ್ತಿಗಳನ್ನ ಇಡಿ ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿದ್ದು, ಈಗ ಅವುಗಳ ಸ್ವಾಧೀನಕ್ಕೆ ಪಡೆಯಲು ಮುಂದಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ನ ಟಾಪ್ 2 ನಾಯಕರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿರುವುದು ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಸೃಷ್ಟಿಸಿದೆ. ಈವರೆಗೆ ಗಾಂಧಿ ಕುಟುಂಬ ಈ ಬಗ್ಗೆ ಮೌನ ಮುರಿಯದಿರೋದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದಲ್ಲಿ ಆತಂಕದ ವಾತಾವರಣ.. ಏನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ