newsfirstkannada.com

ಸೋನು ಗೌಡ ಅರೆಸ್ಟ್; ಮಗು ದತ್ತು ಪಡೆಯಲು ನಿಯಮ ಏನು ಹೇಳುತ್ತೆ.. ಯಾರೆಲ್ಲ ಪಡೆಯಹುದು?

Share :

Published March 22, 2024 at 11:05am

Update March 22, 2024 at 11:30am

    ಮಗು ದತ್ತು ಪಡೆದ ಕೇಸ್​ನಲ್ಲಿ ಸೋನು ಶ್ರೀನಿವಾಸ್ ಗೌಡ ಅರೆಸ್ಟ್

    ಬೆಂಗಳೂರು ಬ್ಯಾಡರಳ್ಳಿ ಪೊಲೀಸರಿಂದ ಸೋನು ಗೌಡ ಬಂಧನ

    ಕಾನೂನು ಬಾಹೀರವಾಗಿ ಮಗು ದತ್ತು ಪಡೆದ್ರಾ ಸೋನು ಗೌಡ

ಬೆಂಗಳೂರು: 8 ವರ್ಷದ ಬಾಲಕಿಯನ್ನು ದತ್ತು ತೆಗೆದುಕೊಳ್ಳುವಲ್ಲಿ ಕಾನೂನು ಉಲ್ಲಂಘಿಸಿರುವ ಆರೋಪ ಹಿನ್ನೆಲೆಯಲ್ಲಿ ಸೋಶಿಯಲ್​ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್​ ಗೌಡ ಬಂಧನವಾಗಿದ್ದಾರೆ. ಸದ್ಯ ಬೆಂಗಳೂರಿನ ಬ್ಯಾಡರಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸೋನುಗೌಡರನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಸೋನುಗೌಡ ಕೇಸ್ ಒಂದು ಕಡೆ ಇರಲಿ. ಸದ್ಯ ದತ್ತು ತೆಗೆದುಕೊಳ್ಳಬೇಕು ಎಂದರೆ ಸರ್ಕಾರದ ನಿಯಮಗಳು, ಕಾನೂನು ಏನು ಹೇಳುತ್ತವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಯಾರು ದತ್ತು ಪಡೆಯಲು ಅರ್ಹರು ಆಗಿರುತ್ತಾರೆ..?

ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸ್ಥಿರವಾಗಿರುವ ಹಾಗೂ ಆರ್ಥಿಕವಾಗಿ ಸಮರ್ಥವಾಗಿರುವ ವ್ಯಕ್ತಿ ಮಾತ್ರ ಮಗುವನ್ನು ದತ್ತು ಪಡೆಯಬೇಕು. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ ಮಕ್ಕಳನ್ನು ದತ್ತು ಪಡೆಯುವಂತಿಲ್ಲ. ವಿವಾಹಿತ ದಂಪತಿಯ ಎರಡೂ ಸಂಗಾತಿಗಳು ದತ್ತು ತೆಗೆದುಕೊಳ್ಳಲು ಒಪ್ಪಿಗೆ ಇರಬೇಕು. ಒಬ್ಬ ಮಹಿಳೆ ಗಂಡು-ಹೆಣ್ಣು ಎರಡು ಮಕ್ಕಳನ್ನು ದತ್ತು ಪಡೆಯಬಹುದು. ಒಂಟಿ ಪುರುಷ ಗಂಡು ಮಗುವನ್ನು ಮಾತ್ರ ದತ್ತು ಪಡೆಯಬಹುದು. 3 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿ ವಿಶೇಷ ಅಗತ್ಯತೆಗಳನ್ನು ಹೊಂದಿರುವ ಮಕ್ಕಳು/ಸಂಬಂಧಿ ಅಥವಾ ಮಲ ಪೋಷಕರ ದತ್ತು ಪಡೆದ ಪೋಷಕರ ಹೊರತು ಮತ್ತೊಂದು ಮಗುವನ್ನು ದತ್ತು ತೆಗೆದುಕೊಳ್ಳುವಂತಿಲ್ಲ.

ಇದನ್ನು ಓದಿ: Breaking News: ಬಿಗ್​ಬಾಸ್ ಖ್ಯಾತಿಯ ಸೋನು ಗೌಡ ಅರೆಸ್ಟ್

ಸೋನು ಗೌಡ ಮೇಲಿರುವ ಆರೋಪ ಏನು..?

ಮಕ್ಕಳನ್ನು ದತ್ತು ತೆಗೆದುಕೊಳ್ಳಬೇಕಾದ್ರೆ ಕೆಲವೊಂದು ನಿಯಮ ಪಾಲಿಸಬೇಕಾಗುತ್ತದೆ. ದತ್ತು ತೆಗೆದುಕೊಳ್ಳುವ ತಾಯಿ ಮತ್ತು ಮಗುವಿಗೆ 25 ವರ್ಷಗಳ ಅಂತರವಿರಬೇಕು. ಸೋನುಗೌಡ ಕೇಸ್​ನಲ್ಲಿ ಮಗುವಿಗೆ 8 ವರ್ಷ ಮತ್ತು ಆಕೆಗೆ 23 ವರ್ಷ. ಈ ಮೂಲಕ ಸೋನು ಗೌಡ ನಿಯಮ ಉಲ್ಲಂಘನೆ ಮಾಡಿರೋದು ತಿಳಿಯುತ್ತಿದೆ. ರೀಲ್ಸ್‌ ಮಾಡುವ ಉದ್ದೇಶದಿಂದ ಮಗುವನ್ನು ತನ್ನಿಷ್ಟ ಬಂದಂತೆ ಬಳಸಿಕೊಂಡಿದ್ದಾರೆಂಬ ಆರೋಪ ಕೂಡ ಇದೆ. CWCಯ ಕೆಲವೊಂದು ನಿಯಮವನ್ನು ಸಹ ಇಲ್ಲ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ಕಾನೂನು ಉಲ್ಲಂಘಿಸಿ ಮಗು ದತ್ತು ಪಡೆದ ಆರೋಪ; ಸೋನುಗೌಡ ವಿರುದ್ಧ ಕೇಸ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೋನು ಗೌಡ ಅರೆಸ್ಟ್; ಮಗು ದತ್ತು ಪಡೆಯಲು ನಿಯಮ ಏನು ಹೇಳುತ್ತೆ.. ಯಾರೆಲ್ಲ ಪಡೆಯಹುದು?

https://newsfirstlive.com/wp-content/uploads/2024/03/SONUGOWDA.jpg

Load More