Advertisment

ದರ್ಶನ್ ಅಭಿಮಾನಿಗಳೇ ಎಲ್ಲಿದ್ದೀರಾ.. ಬಿಗ್‌ಬಾಸ್ ಬ್ಯೂಟಿ ಸೋನು ಗೌಡ ಖಡಕ್ ವಾರ್ನಿಂಗ್!

author-image
Veena Gangani
Updated On
ದರ್ಶನ್ ಅಭಿಮಾನಿಗಳೇ ಎಲ್ಲಿದ್ದೀರಾ.. ಬಿಗ್‌ಬಾಸ್ ಬ್ಯೂಟಿ ಸೋನು ಗೌಡ ಖಡಕ್ ವಾರ್ನಿಂಗ್!
Advertisment
  • ರೇಣುಕಾ ಕೊಲೆ ಕೇಸ್​ನಲ್ಲಿ 17 ಆರೋಪಿಗಳು ಮಂದಿ ಪರಪ್ಪನ ಅಗ್ರಹಾರಕ್ಕೆ
  • ಒಂದು ಸಲ ಅಭಿಮಾನಿಯಾದ್ರೆ ಸಾಯೋವರೆಗೂ ಆ ಅಭಿಮಾನ ಇರಬೇಕು!
  • ನಮ್ಮ ಬಾಸ್ ದರ್ಶನ್​​ ಕಷ್ಟದಲ್ಲಿ ಇದ್ದಾರೆ ಈಗ ಯಾರು ಬರ್ತಾ ಇದ್ದಾರೆ ಹೇಳಿ?

ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪದಲ್ಲಿ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿದ್ದಾರೆ. ದರ್ಶನ್ ಅವರ ಬಂಧನದ ಬಗ್ಗೆ ಬಿಗ್​ಬಾಸ್ ಮಾಜಿ ಸ್ಪರ್ಧಿ ಸೋನು ಗೌಡ ಅವರು ಪ್ರತಿಕ್ರಿಯಿಸಿದ್ದಾರೆ. ನಟ ದರ್ಶನ್​ ಬಗ್ಗೆ ಕೆಲವೊಂದಿಷ್ಟೂ ಮಾತನಾಡಿದ್ದಾರೆ. ಜೊತೆಗೆ ರೇಣುಕಾಸ್ವಾಮಿ ನನಗೂ ಕೂಡ ಕೆಟ್ಟ ಕೆಟ್ಟದಾಗಿ ಮೆಸೇಜ್​ ಮಾಡಿದ್ದ ಅಂತ ಹೇಳಿಕೊಂಡಿದ್ದಾರೆ.

Advertisment

publive-image

ಇದನ್ನೂ ಓದಿ:‘ರೇಣುಕಾಸ್ವಾಮಿ ನಂಗೂ ಕೆಟ್ಟದಾಗಿ ಮೆಸೇಜ್ ಮಾಡಿದ್ದ’- ಚಿತ್ರಾಲ್ ಬಳಿಕ ಸೋನು ಗೌಡ ಕೊಟ್ರು ಹೊಸ ಟ್ವಿಸ್ಟ್; ಏನಂದ್ರು?

ನಟ ದರ್ಶನ್ ಅವರ ಬಗ್ಗೆ ಮಾತಾಡಿದ ಸೋನು ಗೌಡ, ಒಂದು ಸಲ ಅಭಿಮಾನಿಯಾದ್ರೆ ಸಾಯೋವರೆಗೂ ಆ ಅಭಿಮಾನ ಇದ್ದೇ ಇರುತ್ತದೆ. ನಾನು ದರ್ಶನ್ ಅವರ ಅಭಿಮಾನಿ. ದರ್ಶನ್ ಮಾಡಿದ್ದು ತಪ್ಪು ಅಂತ ನೀವೆಲ್ಲ ಹೇಳುತ್ತಿದ್ದೀರಾ. ನಿಮಗೆಲ್ಲಾ ಗೊತ್ತಿದೆ ಯಾರು ತಪ್ಪು ಮಾಡಿದ್ದಾರೆ, ಯಾರು ಮಾಡಿಲ್ಲ ಅಂತ. ಕೆಲವರು ಎಷ್ಟರ ಮಟ್ಟಿಗೆ ಕೆಟ್ಟದಾಗಿ ಕಾಮೆಂಟ್​ ಮಾಡಿದ್ದೀರಾ? ಆ ಒಂದು ಕಾಮೆಂಟ್​ ಇಷ್ಟರ ಮಟ್ಟಿಗೆ ಹೋಗುತ್ತದೆ ಎಂದು ಗೊತ್ತಾಗಿದೆ. ನಮ್ಮ ಬಾಸ್​ಯಿಂದ ಎಷ್ಟು ಜನರು ಬೆಳೆದಿದ್ದಾರೆ? ದರ್ಶನ್ ಅವರನ್ನು ಬಳಸಿಕೊಂಡವರು ಈಗ ಯಾರೂ ಕೂಡ ಮಾತನಾಡುತ್ತಿಲ್ಲ. ದರ್ಶನ್ ಅವರಿಗೆ ಬಹಳಷ್ಟು ಜನ ಎಲ್ಲಾ ಸ್ವಾರ್ಥಿಗಳೇ. ಆದರೆ ನಮ್ಮ ಬಾಸ್ ಅವರು ಯಾರಿಗೂ ಮೋಸ ಮಾಡಿಲ್ಲ. ನಾನು ತಪ್ಪು ಮಾಡದೆ ಜೈಲಿಗೆ ಹೋಗಿ ಬಂದಿದ್ದೇನೆ.

ನಾನು ಧ್ವನಿ ಎತ್ತಬೇಕು ಅಂತ ಮಾತನಾಡುತ್ತಿದ್ದೇನೆ. ನನ್ನ ಬಗ್ಗೆ ನಾಳೆ ಎಲ್ಲರೂ ಮಾತನಾಡಬಹುದು, ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳೋದಿಲ್ಲ. ತಪ್ಪು ಮಾಡದೆ ಇದ್ದವರೆಲ್ಲ ಜೈಲಿಗೆ ಬಂದಿದ್ದನ್ನು ನಾನು ನೋಡಿದ್ದೇನೆ. ಕೆಟ್ಟದ್ದು ಮಾಡಿದ್ರೆ ಕಾನೂನು ಪ್ರಕಾರ ಶಿಕ್ಷೆ ಆಗತ್ತೆ. ಅಂದು ಅಣ್ಣ, ತಮ್ಮ, ಮಗ ಅಂತ ಹೇಳೋರು ಇವತ್ತು ಬಾಸ್ ಬಗ್ಗೆ ಏನೂ ಮಾತನಾಡ್ತಿಲ್ಲ. ಏನೇ ಆಗಲಿ, ನಾವು ದರ್ಶನ್ ಪರ ನಿಂತುಕೊಳ್ಳಬೇಕು. ರೇಣುಕಾಸ್ವಾಮಿ ಕುಟುಂಬಕ್ಕೆ ಒಳ್ಳೆಯದಾಗಲಿ, ಕಾನೂನಿನ ಪ್ರಕಾರ ಅವರಿಗೆ ಏನು ಸಿಗಬೇಕೋ ಅದು ಸಿಗತ್ತೆ. ಕೆಟ್ಟದಾಗಿ ಕಾಮೆಂಟ್ ಮಾಡೋರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳೋದಿಲ್ಲ. ದರ್ಶನ್ ಅವರ ಒಳ್ಳೆಯತನವೇ ಅವರನ್ನು ಕಾಪಾಡುತ್ತೆ ಎಂದು ಸೋನು ಗೌಡ ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment