ಕೊನೆಗೂ ಸಾರಿ ಕೇಳಿದ ಸೋನು ನಿಗಮ್‌.. ಕನ್ನಡಿಗರ ಪ್ರೀತಿಗೆ ದೊಡ್ಡ ಸಲಾಂ!

author-image
admin
Updated On
ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದ ಗಾಯಕ; ಸೋನು ನಿಗಮ್​ ಅರ್ಜಿ ಮುಂದೂಡಿದ ಹೈಕೋರ್ಟ್​​
Advertisment
  • ನನ್ನ ಕನ್ನಡ ಹಾಡುಗಳು ನನಗೆ ಹಿಂದಿ ಹಾಡಿಗಿಂತ ಹೆಚ್ಚು ಗೌರವ
  • ಸ್ಯಾಂಡಲ್‌ವುಡ್‌ನಿಂದ ತಾತ್ಕಾಲಿಕವಾಗಿ ಬ್ಯಾನ್ ಆದ ಬಳಿಕ ಸಾರಿ!
  • ನಾನು ಕರ್ನಾಟಕದಿಂದ ದೈವಿಕ ಪ್ರೀತಿಯನ್ನು ಪಡೆದಿದ್ದೇನೆ ಎಂದ ಸೋನು

ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್‌ ಕೊನೆಗೂ ಕ್ಷಮೆಯಾಚಿಸಿದ್ದಾರೆ. ಸ್ಯಾಂಡಲ್‌ವುಡ್‌ನಿಂದ ತಾತ್ಕಾಲಿಕವಾಗಿ ಬ್ಯಾನ್ ಆದ ಬಳಿಕ ಸೋನು ನಿಗಮ್‌ ಕನ್ನಡಿಗರ ಒತ್ತಾಯಕ್ಕೆ ಮಣಿದಿದ್ದಾರೆ.

ಬ್ಯಾನ್ ಆದ ಬಳಿಕ ಸೋನು ನಿಗಮ್ ಅವರು ಯಾವುದು ಸರಿ, ಯಾವುದು ತಪ್ಪು ಅನ್ನೋ ಲೆಕ್ಕಾಚಾರವನ್ನ ಕನ್ನಡಿಗರಿಗೇ ಬಿಡುತ್ತೇನೆ. ನಿಜ ಹೇಳಬೇಕೆಂದರೆ, ನಾನು ನನ್ನ ಕನ್ನಡ ಹಾಡುಗಳನ್ನು ಹಿಂದಿ ಸೇರಿ ಇತರ ಭಾಷೆಗಳ ಹಾಡುಗಳಿಗಿಂತಲೂ ಹೆಚ್ಚು ಗೌರವದಿಂದ ನೋಡಿದ್ದೇನೆ.

ಇದನ್ನೂ ಓದಿ: ಬ್ಯಾನ್ ಆದ ಮೇಲೂ ಕ್ಷಮೆ ಕೇಳದ ಸೋನು ನಿಗಮ್‌.. ಕನ್ನಡಿಗರ ಬಗ್ಗೆ ಹೊಸ ಪೋಸ್ಟ್‌; ಏನಂದ್ರು? 

ನೀವು ಯಾವ ತೀರ್ಪು ನೀಡಿದರೂ ನಾನು ಅದನ್ನು ಗೌರವದಿಂದ ಸ್ವೀಕರಿಸುತ್ತೇನೆ. ನಾನು ಕರ್ನಾಟಕದ ಕಾನೂನು ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಯ ಮೇಲೆ ಪೂರ್ಣ ಗೌರವ ಮತ್ತು ನಂಬಿಕೆ ಇಟ್ಟುಕೊಂಡಿದ್ದೇನೆ. ನನ್ನಿಂದ ನಿರೀಕ್ಷಿಸಬಹುದಾದ ಎಲ್ಲ ಸಹಕಾರವನ್ನು ನಾನು ನೀಡುತ್ತೇನೆ. ನಾನು ಕರ್ನಾಟಕದಿಂದ ದೈವಿಕ ಪ್ರೀತಿಯನ್ನು ಪಡೆದಿದ್ದೇನೆ ಮತ್ತು ನಿಮ್ಮ ತೀರ್ಪು ಏನೇ ಆಗಿರಲಿ, ಯಾವುದೇ ದ್ವೇಷವಿಲ್ಲದೆ ಅದನ್ನು ಸದಾ ಗೌರವದಿಂದ ಜ್ಞಾಪಿಸಿಕೊಳ್ಳುತ್ತೇನೆ ಎಂದಿದ್ದರು.

publive-image

ಇಷ್ಟಾದರೂ ಸೋನು ನಿಗಮ್ ಸಾರಿ ಕೇಳದೇ ಇರೋದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಕನ್ನಡಿಗರ ಭಾವನೆಗೆ ಕೊನೆಗೂ ಮಣಿದಿರುವ ಸೋನು ನಿಗಮ್ ತಮ್ಮ ಇನ್ಸ್‌ಸ್ಟಾಗ್ರಾಂನಲ್ಲಿ ಕ್ಷಮೆ ಕೇಳಿ ಪೋಸ್ಟ್ ಮಾಡಿದ್ದಾರೆ.
ಸಾರಿ ಕರ್ನಾಟಕ. ನಿಮ್ಮ ಪ್ರೀತಿಗಿಂದ ನನ್ನ ಅಹಂ ದೊಡ್ಡದೇನೂ ಅಲ್ಲ. ಸದಾ ಕರ್ನಾಟಕ, ಕನ್ನಡಿಗರನ್ನು ಪ್ರೀತಿಸುತ್ತೇನೆ ಎಂದು ಸೋನು ನಿಗಮ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment