VIDEO: ಲೈವ್‌ ಶೋ ಮಧ್ಯೆ ವೇದಿಕೆಯಿಂದ ದಿಢೀರ್‌ ಹೊರ ಬಂದ ಗಾಯಕ ಸೋನು ನಿಗಮ್; ಏನಾಯ್ತು?

author-image
Gopal Kulkarni
Updated On
VIDEO: ಲೈವ್‌ ಶೋ ಮಧ್ಯೆ ವೇದಿಕೆಯಿಂದ ದಿಢೀರ್‌ ಹೊರ ಬಂದ ಗಾಯಕ ಸೋನು ನಿಗಮ್; ಏನಾಯ್ತು?
Advertisment
  • ಪುಣೆಯಲ್ಲಿ ಶೋ ನಡೆಸಿ ಕೊಡುತ್ತಿದ್ದ ಸೋನು ನಿಗಮ್​ಗೆ ಏನಾಯ್ತು?
  • ಇವು ನನ್ನ ಬದುಕಿನ ಅತ್ಯಂತ ಕೆಟ್ಟ ದಿನಗಳು ಅಂದಿದ್ದೇಕೆ ಗಾಯಕ?
  • ಸೋನು ನಿಗಮ್ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಏನಿದೆ ಗೊತ್ತಾ?

ಖ್ಯಾತ ಬಹುಭಾಷಾ ಸಿನಿಮಾ ಗಾಯಕ ಸೋನು ನಿಗಮ ವಿಡಿಯೋವೊಂದನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದು ಪುಣೆಯಲ್ಲಿ ಶೋ ನಡೆಸಿಕೊಟ್ಟ ಮೇಲೆ ಸಹಿಸಲಾಗದ ಬೆನ್ನು ನೋವೊಂದು ಕಾಣಿಸಿಕೊಂಡಿದೆ. ಅದರಿಂದ ಸೋನು ನಿಗಮ್ ತೀವ್ರವಾಗಿ ಒದ್ದಾಡಿದ್ದಾರೆ. ಇದು ನಿಜಕ್ಕೂ ನನ್ನ ಕಠಿಣ ದಿನಗಳು ಎಂದು ಹೇಳಿದ್ದಾರೆ.

ಸೋನು ನಿಗಮ್ ಪೋಸ್ಟ್ ಮಾಡಿರುವ ಎಡಿಟೆಡ್​ ವಿಡಿಯೋದಲ್ಲಿ ಅವರು ಬೆಡ್ ಮೇಲೆ ಮಲಗಿಕೊಂಡು ಮಾತನಾಡಿದ್ದಾರೆ. ಮತ್ತೊಂದು ಕಡೆ ಶೋ ನಡೆದ ಸ್ಥಳದಲ್ಲಿ ಅವರು ಬೆನ್ನು ನೋವಿನಿಂದ ಒದ್ದಾಡುತ್ತಿದ್ದಾರೆ ಹಾಗೆಯೇ ಅವರಿಗೆ ಅವರ ಜೊತೆಗಾರರು ಸಹಾಯ ಮಾಡುತ್ತಿದ್ದಾರೆ. ಸೋನು ನಿಗಮ್ ಶೋ ನಡೆಸಿಕೊಡುವ ವೇಳೆ ಹಾಡುತ್ತ ಹಾಡುತ್ತ ಕೆಲವೊಂದು ಸ್ಟೆಪ್ ಹಾಕಿದ್ದಾರೆ. ಈ ವೇಳೆ ಅಸಹನೀಯವಾದ ನೋವು ಕಾಣಿಸಿಕೊಂಡಿದೆ. ಅವರು ಅದರಿಂದ ಹೊರಬರಲು ಸ್ಟ್ರೇಚ್ ಮಾಡಿದ್ದಾರೆ. ಬೇರೆಯವರ ಸಹಾಯ ತೆಗೆದುಕೊಂಡಿದ್ದಾರೆ ಆದರೂ ಕೂಡ ಅವರು ನೋವಿನಿಂದ ಹೊರಗೆ ಬರಲು ಸಾಧ್ಯವಾಗಿಲ್ಲ.

ಇದನ್ನೂ ಓದಿ:ರಮ್ಯಾಗೆ ಸಹೋದರನ ಮದುವೆ ಆಮಂತ್ರಣ ಕೊಟ್ರಾ.. ಈ ಬಗ್ಗೆ ರಕ್ಷಿತಾ ಪ್ರೇಮ್ ಹೇಳಿದ್ದೇನು?

ವಿಡಿಯೋದಲ್ಲಿ ಸೋನು ನಿಗಮ್ ಇದು ನನ್ನ ಬದುಕಿನ ಅತ್ಯಂತ ಕಠಿಣ ದಿನಗಳು, ಆದರೂ ಪರವಾಗಿಲ್ಲ. ಹಾಡುತ್ತಾ ಹಾಡುತ್ತಾ ನಾವು ಡಾನ್ಸ್ ಮಾಡುತ್ತೇವೆ. ಅದು ಇದಕ್ಕೆ ಕಾರಣವಾಯ್ತು. ಆದರೂ ನಾನು ಶೋವನ್ನು ಸರಿಯಾಗಿ ನಡೆಸಿಕೊಟ್ಟೆ. ನನ್ನಿಂದ ಜನರು ಅಪಾರವಾಗಿ ನಿರೀಕ್ಷೆ ಮಾಡುವಾಗ ನಾನು ಅವರಿಗೆ ನನ್ನಿಂದ ಅಲ್ಪಸ್ಪಲ್ಪ ಪೂರೈಸಲಾರೆ. ಅವರು ತೃಪ್ತಿಯಾಗುವವರೆಗೂ ಹಾಡಿದ್ದೇನೆ. ಶೋ ಚೆನ್ನಾಗಿಯೇ ಹೋಯಿತು ಎಂದಿದ್ದಾರೆ.

ಆದರೆ ನನಗೆ ಮಾತ್ರ ಸಹಿಸಲಾಗದ ಅಸಾಧ್ಯ ನೋವು ಉಂಟಾಗಿದೆ. ಬೆನ್ನ ಮೂಳೆಯಲ್ಲಿ ಯಾರೋ ಮೊಳೆ ಹೊಡೆದಷ್ಟು ನೋವು ಆಗಿದೆ. ಅಷ್ಟೊಂದು ಸಹಿಸಲಾಗದ ನೋವು ಈಗ ನನ್ನನ್ನು ಕಾಡುತ್ತಿದೆ. ಇದು ನಿಜಕ್ಕೂ ದುರದೃಷ್ಟಕರ ಆದ್ರೆ ಮಾತೆ ಸರಸ್ವತಿ ನಿನ್ನೆ ರಾತ್ರಿ ನನ್ನ ಕೈ ಹಿಡಿದಿದ್ದಾಳೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಬರೋಬ್ಬರಿ 29 ವರ್ಷಗಳ ಬಳಿಕ ಮತ್ತೆ ಆ ಸ್ಥಳಕ್ಕೆ ಭೇಟಿ ಕೊಟ್ಟ ಹ್ಯಾಟ್ರಿಕ್ ಹೀರೋ.. ಶಿವಣ್ಣ ಹೇಳಿದ್ದೇನು?

ಸೋನು ನಿಗಮ್​ ಅವರ ಈ ಪೋಸ್ಟ್ ನೋಡಿದ ಅಭಿಮಾನಿಗಳು ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಕಳೆದ ರಾತ್ರಿ ಪುಣೆಯಲ್ಲಿ ಸೋನು ನಿಗಮ್ ಅವರ ಸಂಗೀತ ಕಾರ್ಯಕ್ರಮವಿತ್ತು. ಶೋ ಆರಂಭಕ್ಕೂ ಮುನ್ನವೇ ಅವರಿಗೆ ಸಮಸ್ಯೆ ಕಾಡಲು ಶುರುವಾಗಿತ್ತು. ಆದ್ರೆ ಅದೆಲ್ಲವನ್ನು ಮರೆತು ಅವರು ಡಬಲ್ ಎನರ್ಜಿಯೊಂದಿಗೆ ವೇದಿಕೆ ಮೇಲೆ ಬಂದು ಎಲ್ಲರನ್ನೂ ರಂಜಿಸಿದರು ಎಂದು ಸೋನು ಅವರ ಶ್ರದ್ಧೆಯನ್ನು ಹಾಡಿ ಹೋಗಳುತ್ತಿದ್ದಾರೆ

ಸೋನು ನಿಗಮ್ ಇಲ್ಲಿವರೆಗೂ ಒಟ್ಟು 10 ಸಾವಿರ ಹಿಂದಿ ಹಾಡುಗಳನ್ನು ಹಾಡಿದ್ದಾರೆ. ಹಿಂದಿ ಜೊತೆ ಜೊತೆಗೆ ಕನ್ನಡ, ಓಡಿಯಾ, ಬೆಂಗಾಲಿ, ಗುಜರಾತಿ, ತಮಿಳು, ತೆಲುಗು, ಮರಾಠಿ, ನೇಪಾಳಿ, ಮಲಯಾಳಂ ಮತ್ತು ಬೊಜಪುರಿ ಗೀತೆಗಳನ್ನು ಹಾಡಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment