ಸೋನು ನಿಗಮ್ ಕನ್ನಡದಿಂದ ಬ್ಯಾನ್? ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಶಾಕಿಂಗ್ ನಿರ್ಧಾರದ ನಿರೀಕ್ಷೆ..!

author-image
Veena Gangani
Updated On
ಅರ್ಜುನ್ ಜನ್ಯ ಸೇರಿ ಅನೇಕ ಸಂಗೀತ ನಿರ್ದೇಶಕರಿಗೆ ವಾರ್ನಿಂಗ್ ಕೊಟ್ಟ ರೂಪೇಶ್ ರಾಜಣ್ಣ
Advertisment
  • ಸ್ಯಾಂಡಲ್​ವುಡ್​ನಿಂದ ಸೋನು ನಿಗಮ್ ಬಹಿಷ್ಕಾರಕ್ಕೆ ಒತ್ತಾಯ
  • ಚಲನಚಿತ್ರ ಮಂಡಳಿಗೆ ದೂರು ನೀಡಿದ ರೂಪೇಶ್ ರಾಜಣ್ಣ
  • ವಿವಾದ ಹುಟ್ಟು ಹಾಕಿದ್ದ ಗಾಯಕ ಸೋನು ನಿಗಮ್ ಹೇಳಿಕೆ

ಬೆಂಗಳೂರು: ಸೆಲೆಬ್ರಿಟಿಗಳು ಮಾತಾಡೋವಾಗ ಎಷ್ಟು ಎಚ್ಚರಿಕೆಯಿಂದ ಇದ್ದ ಕಡಿಮೆನೆ. ಅದರಲ್ಲೂ ಕನ್ನಡ ನಾಡು, ನುಡಿ ವಿಚಾರಕ್ಕೆ ಬಂದರೇ ಕನ್ನಡಿಗರು ಕೆರಳಿ ಕೆಂಡವಾಗುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸೋನು ನಿಗಮ್ ಕನ್ನಡದಿಂದ ಬ್ಯಾನ್ ಆಗುತ್ತಾರಾ? ಸುಖಾ ಸುಮ್ನೆ ಸ್ಟಾರ್​ ಗಾಯಕ ಕನ್ನಡ ಹಾಡುಗಳ ಬಗ್ಗೆ, ಕರ್ನಾಟಕದ ಬಗ್ಗೆ ಹೆಮ್ಮೆಯಿಂದ ಮಾತಾಡುತ್ತಲೇ ವಿವಾದಾತ್ಮಕವಾಗಿ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ಅಲ್ಲದೇ ಸೋನು ವಿರುದ್ಧ ಕನ್ನಡಿಗರ ಆಕ್ರೋಶ, ಬಹಿಷ್ಕಾರಕ್ಕೆ ಒತ್ತಾಯ ಮಾಡಲಾಗುತ್ತಿದೆ.

ಹೌದು, ಈಸ್ಟ್ ಪಾಯಿಂಟ್ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಭಾಗಿಯಾಗಿದ್ದಾಗ, ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿದ್ದಾನೆ. ಆಗ ಅದಕ್ಕೆ ಸೋನು ನಿಗಮ್ ತಮ್ಮ ಹಾಡನ್ನು ಅರ್ಧಕ್ಕೆ ನಿಲ್ಲಿಸಿ, ತಮಗೆ ಕನ್ನಡ ಮೇಲಿರುವ ಪ್ರೀತಿ, ಇಲ್ಲಿನ ಜನರ ಮೇಲಿರುವ ಗೌರವದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೇ ಮಾತಾಡುವ ಭರದಲ್ಲಿ ಪಹಲ್ಗಾಮ್ ದಾಳಿ ಹಾಗೂ ಕರ್ನಾಟಕದ ಬಗ್ಗೆ ಮಾತಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಸೋನು ನಿಗಮ್ ಹೇಳಿದ್ದೇನು?

ನಾನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ಆದರೆ ದಿ ಬೆಸ್ಟ್ ಸಾಂಗ್ಸ್ ಹಾಡಿರೋದು ಹೆಚ್ಚು ಕನ್ನಡದಲ್ಲಿ. ಕರ್ನಾಟಕಕ್ಕೆ ಬರುವಾಗ ತುಂಬಾ ಖುಷಿಯಾಗುತ್ತೆ. ತುಂಬಾ ಆಸೆಯಿಂದಲೇ ಇಲ್ಲಿ ಬರ್ತೇನೆ. ಸಾಮಾನ್ಯವಾಗಿ ಕನ್ನಡ ಸಾಂಗ್ಸ್ ಹಾಡಿ ಅಂತ ಕೇಳ್ತಾರೆ. ಯಾವುದೇ ಕಾರ್ಯಕ್ರಮಕ್ಕೆ ಹೋದಾಗಲೂ, ಯಾರಾದರೂ ಕನ್ನಡ ಎಂದು ಕೂಗಿದಾಗ ಅವರಿಗಾಗಿ ಒಂದು ಸಾಲು ಕನ್ನಡ ಹಾಡನ್ನಾದರೂ ಹಾಡಿರುತ್ತೇನೆ. ಆದರೆ ಆ ಹುಡುಗ ಕನ್ನಡ, ಕನ್ನಡ ಎಂದು ಕಿರುಚಿಕೊಂಡು ಕೇಳಿದ್ದು ನನಗೆ ಇಷ್ಟವಾಗಲಿಲ್ಲ. ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಇದನ್ನೂ ಓದಿ: ಕನ್ನಡ.. ಕನ್ನಡ.. ಅಂತ ಭಯ ಪಡಿಸ್ತೀರಾ, ಅದ್ಕೆ ಪಹಲ್ಗಾಮ್ ಅಟ್ಯಾಕ್..’ ಏನು ಹೇಳಿಬಿಟ್ರಿ ಸೋನು ನಿಗಮ್?

ಸದ್ಯ ಕರ್ನಾಟಕ ಯುವ ಕರ್ನಾಟಕ ವೇದಿಕೆ ಸೋನು ನಿಗಮ್ ಅವರನ್ನು ಕನ್ನಡದಿಂದ ಬ್ಯಾನ್ ಮಾಡುವಂತೆ ಒತ್ತಾಯಿಸಿದೆ. ಕನ್ನಡ ನಾಡು, ನುಡಿ ವಿಚಾರದಲ್ಲಿ ಈ ಹಿಂದೆಯೂ ಅನೇಕ ದಿಟ್ಟ ನಿರ್ಧಾರಗಳನ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೆಗೆದುಕೊಂಡಿದೆ. ಅಂತೆಯೇ ಸೋನು ನಿಗಮ್ ವಿಚಾರದಲ್ಲೂ ಕಠಿಣ ನಿಲುವು ತೆಗೆದುಕೊಂಡರೂ ಅಚ್ಚರಿ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment