/newsfirstlive-kannada/media/post_attachments/wp-content/uploads/2025/05/Sonu-nigam-kannada-2.jpg)
ಬೆಂಗಳೂರು: ಕನ್ನಡದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದ ಸೋನು ನಿಗಮ್ ಅವರಿಂದ ಹೇಳಿಕೆ ಪಡೆಯೋದೇ ದೊಡ್ಡ ಸವಾಲ್ ಆಗಿದೆ. ಹೈಕೋರ್ಟ್ ಆದೇಶ ನೀಡಿ ಹನ್ನೆರಡು ದಿನ ಕಳೆದ್ರೂ ಖ್ಯಾತ ಗಾಯಕ ಬೆಂಗಳೂರಿನ ಅವಲಹಳ್ಳಿ ಪೊಲೀಸರ ಕೈಗೆ ಸಿಕ್ಕಿಲ್ಲ.
ಹೀಗಾಗಿ ಗಾಯಕನಿಂದ ಹೇಳಿಕೆ ಪಡೆಯೋದೇ ಸವಾಲಾಗಿದೆ. ಇದರಿಂದ ಬೇಸತ್ತಿರುವ ಪೊಲೀಸರು ಕಾನೂನು ಹೋರಾಟದ ಎಚ್ಚರಿಕೆಯನ್ನು ವಕೀಲರ ಮೂಲಕ ನೀಡಲಾಗಿದೆ. ಇದೇ ವಾರ ನಿಮ್ಮ ಹೇಳಿಕೆ ಪಡೆಯಬೇಕಿದೆ. ವಿಡಿಯೋ ರೆಕಾರ್ಡ್ ಜೊತೆ ಹೇಳಿಕೆ ದಾಖಲಿಸಿಕೊಳ್ಳಬೇಕಿದೆ. ನೀವು ಇದೇ ರೀತಿ ಸಮಯ ವ್ಯರ್ಥ ಮಾಡಿಕೊಂಡು ಹೋದರೆ ಹೈಕೋರ್ಟ್ಗೆ ಅರ್ಜಿ ಹಾಕೋದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಮತ್ತೆ ಕೋರ್ಟ್ ಮೆಟ್ಟಿಲೇರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಈಗ ಏನಾಯ್ತು..?
ವಕೀಲರ ಮೂಲಕ ವಾರ್ನಿಂಗ್ ಸಿಕ್ಕ ಬೆನ್ನಲ್ಲೇ ಇದೇ ವಾರದಲ್ಲಿ ವಿಚಾರಣೆಗೆ ಸಹಕರಿಸೋದಾಗಿ ಸೋನು ನಿಗಮ್ ಹೇಳಿದ್ದಾರೆ ಎನ್ನಲಾಗಿದೆ. ವಿದೇಶ ಹಾಗೂ ಹೊರ ರಾಜ್ಯಗಳಲ್ಲಿ ಕಾರ್ಯಕ್ರಮಗಳಿವೆ. ಇದೇ ವಾರದಲ್ಲಿ ವಿಚಾರಣೆಗೆ ಬರೋದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಜೈ ಹಿಂದ್.. ಯೋಧರ ಕುಟುಂಬ, ನಿವೃತ್ತ ಯೋಧರ ಕಲ್ಯಾಣಕ್ಕೆ ಸಿದ್ದರಾಮಯ್ಯ ಮಹತ್ವದ ಘೋಷಣೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ