ಕನ್ನಡ.. ಕನ್ನಡ.. ಕನ್ನಡಿಗರ ಆಕ್ರೋಶದ ಬಳಿಕ ಸ್ಪಷ್ಟನೆ ಕೊಟ್ಟ ಗಾಯಕ ಸೋನು ನಿಗಮ್‌; ಹೇಳಿದ್ದೇನು?

author-image
Bheemappa
Updated On
ಗಾಯಕ ಸೋನು ನಿಗಮ್‌ಗೆ ಬಿಗ್ ರಿಲೀಫ್‌.. ಆದ್ರೆ ಹೈಕೋರ್ಟ್‌ ಖಡಕ್ ಸೂಚನೆ; ಹೇಳಿದ್ದೇನು?
Advertisment
  • ಕಾರ್ಯಕ್ರಮದಲ್ಲಿ ನಾಲ್ಕೈದು ಜನಕ್ಕೆ ತಿಳುವಳಿಕೆ ಹೇಳೋದು ಅಗತ್ಯವಿತ್ತು
  • ಭಾಷೆಯ ಬಗ್ಗೆ ಅಪಮಾನ ಮಾಡಿಲ್ಲ ಎನ್ನುವುದು ಸೋನು ಸಮರ್ಥನೆ
  • ಯಾವುದೇ ರಾಜ್ಯಕ್ಕೆ ಹೋದರೂ ಈ ನಾಲ್ಕೈದು ಜನ ಕೆಟ್ಟವರು ಇರ್ತಾರೆ

ಕನ್ನಡಿಗರ ಭಾವನೆಗೆ ಧಕ್ಕೆ ಉಂಟು ಮಾಡುವ ಹೇಳಿಕೆ ನೀಡಿದ್ದ ಬಾಲಿವುಡ್ ಗಾಯಕ ಸೋನು ನಿಗಮ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ತಮ್ಮ ಹೇಳಿಕೆ ಕುರಿತು ಸೋನು ನಿಗಮ್​ ಪ್ರತಿಕ್ರಿಯಿಸಿದ್ದು ತಮ್ಮನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಕನ್ನಡ ಕನ್ನಡ ಕನ್ನಡ ಎಂದು ಖುಷಿಯಲ್ಲಿ ಹೇಳುವುದಕ್ಕೂ ಹಾಗೂ ಕೋಪದಿಂದ ಬೆದರಿಕೆಯೊಡ್ಡುವ ರೀತಿ ಕನ್ನಡ ಕನ್ನಡ ಎಂದು ಹೇಳುವುದಕ್ಕೂ ವ್ಯತ್ಯಾಸ ಇದೆ. ನಾನು ಕಾರ್ಯಕ್ರಮ ಕೊಡುವಾಗ ನಾಲ್ಕೈದು ಗೂಂಡಾಗಳ ರೀತಿಯಲ್ಲಿ ಇದ್ದರು. ಬೇರೆಯವರು ಕೂಡ ಅವರಿಗೆ ಆ ತರ ಸೀನ್ ಕ್ರಿಯೇಟ್ ಮಾಡಬೇಡಿ ಅಂತ ಹೇಳಿದರು. ಅಲ್ಲಿ ಆ ನಾಲ್ಕೈದು ಜನರಿಗೆ ತಿಳುವಳಿಕೆ ಹೇಳುವುದು ಅಗತ್ಯವಿತ್ತು ಎಂದು ಹೇಳಿದ್ದಾರೆ.

ಕಾಶ್ಮೀರದ ಪಹಲ್ಗಾಮ್​ನಲ್ಲಿ ಪ್ಯಾಂಟ್​ ತೆಗೆಸಿದರೆ ಹೊರತು, ಯಾವ ಭಾಷೆ ಎಂದು ಯಾರು ಕೂಡ ಕೇಳಲಿಲ್ಲ ಎನ್ನುವುದನ್ನು ನಾವು ಇಲ್ಲಿ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಪ್ರದೇಶಕ್ಕೆ, ರಾಜ್ಯಕ್ಕೆ ಹೋದರು ಇಂತಹ ನಾಲ್ಕೈದು ಜನರು ಇದ್ದೇ ಇರುತ್ತಾರೆ. ನಾನು ಭಾಷೆಯ ಬಗ್ಗೆ ಅಪಮಾನ ಮಾಡಿಲ್ಲ ಎನ್ನುವುದನ್ನು ಸೋನು ನಿಗಮ್ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: RCB ಓಪನರ್​ ಫಿಲ್​ ಸಾಲ್ಟ್​ ಇವತ್ತೂ ಆಡಲ್ಲ.. ಏನಾಯ್ತು? ರಜತ್ ಪಾಟೀದಾರ್‌ಗೆ ಕೈ ಕೊಟ್ರಾ?

publive-image

ಜಗತ್ತು ಪ್ರೀತಿಯಿಂದ ನಿಮ್ಮ ಜೊತೆ ನಡೆದುಕೊಳ್ಳುವಾಗ ನೀವು ಹಾಡಲೇಬೇಕು ಎಂದು ಯಾರೊಬ್ಬರೂ ಬೆದರಿಕೆ ಹಾಕಬಾರದು. ನಾನು ಯಾವಾಗಲೂ ಕನ್ನಡ ಹಾಡನ್ನು ಹಾಡಲು ಎಲ್ಲ ರೀತಿಯಿಂದಲೂ ಸಿದ್ಧನಾಗಿ ಬಂದಿರುತ್ತೇನೆ. ಇದನ್ನು ಈಗಾಗಲೇ ಅನೇಕ ಬಾರಿ ಹೇಳಿದ್ದೇನೆ. ಆದರೆ, ಈ ರೀತಿ ತೊಂದರೆ ಕೊಡುವವರು ಯಾರೇ ಆದರೂ ಅವರನ್ನು ಅಲ್ಲಿಯೇ ತಡೆಯಬೇಕು ಎಂದರು.

ಕನ್ನಡಿಗರು ಬ್ಯೂಟಿಫುಲ್ ಜನರು. ಇದನ್ನು ಜಾಸ್ತಿ ದೊಡ್ಡದು ಮಾಡಬೇಡಿ. ಅಲ್ಲಿದ್ದ ನಾಲ್ಕೈದು ಜನರ ಬಗ್ಗೆ ಮಾತ್ರ ನಾನು ಹೇಳಿದ್ದು. ಅವರು ನನ್ನ ಕಡೆಗೆ ಕೋಪದಿಂದ ನೋಡಿದರು. ಮೊದಲ ಹಾಡು ಹಾಡಿದ ನಂತರ ಈ ಘಟನೆ ನಡೆಯಿತು. ಅವರು ಕನ್ನಡ ಹಾಡು ಹೇಳು ಅಂತ ಡಿಮ್ಯಾಂಡ್ ಮಾಡಲಿಲ್ಲ. ಬದಲಿಗೆ ಬೆದರಿಕೆ ಹಾಕುವ ರೀತಿ ಕೇಳಿದರು ಎಂದು ಘಟನೆಯನ್ನು ಬಾಲಿವುಡ್​ ಸಿಂಗರ್​ ಸೋನು ನಿಗಮ್ ಸಮರ್ಥನೆ ಮಾಡಿಕೊಂಡಿದ್ದಾರೆ.

ಅಂದು ಆಗಿದ್ದೇನು?
ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನ ಕಾರ್ಯಕ್ರಮದಲ್ಲಿ ಸೋನು ನಿಗಮ್ ಭಾಗಿಯಾಗಿದ್ದಾಗ, ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿದ್ದಾನೆ. ಆಗ ಸೋನು ನಿಗಮ್ ತಮ್ಮ ಹಾಡನ್ನು ಅರ್ಧಕ್ಕೆ ನಿಲ್ಲಿಸಿ, ತಮಗೆ ಕನ್ನಡ ಮೇಲಿರುವ ಪ್ರೀತಿ, ಇಲ್ಲಿನ ಜನರ ಮೇಲಿರುವ ಗೌರವದ ಬಗ್ಗೆ ಹೇಳಿದ್ದಾರೆ. ಅಲ್ಲದೇ ಮಾತಾಡುವ ಬರದಲ್ಲಿ ಪಹಲ್ಗಾಮ್ ದಾಳಿ ಹಾಗೂ ಕರ್ನಾಟಕದ ಬಗ್ಗೆ ಮಾತಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment