newsfirstkannada.com

IPL ಫೈನಲ್​ ಮ್ಯಾಚ್​​ನಲ್ಲಿ ಕ್ಯಾಮೆರಾಮ್ಯಾನ್​ ಆಗಿ ಕೆಲಸ ಮಾಡಿದ್ರಾ ನಟ ಸೋನ್ ಸೂದ್​..?

Share :

Published May 27, 2024 at 9:01am

Update May 27, 2024 at 9:55am

    ಎಂ.ಎ ಚಿದಂಬರಂ ​ ಸ್ಟೇಡಿಯಂ​ನಲ್ಲಿ ನಡೆದ ಫೈನಲ್​​ ಪಂದ್ಯ

    ಹೈದ್ರಾಬಾದ್​ ಅನ್ನು ಸೋಲಿಸಿ ಟ್ರೋಫಿ ಎತ್ತಿ ಹಿಡಿದ ಕೆಕೆಆರ್

    ಕಾವ್ಯ ಮಾರನ್ ತಂಡದ ವಿರುದ್ಧ ಶಾರುಖ್​ ಟೀಮ್​ಗೆ ಗೆಲುವು

ಬಹುನಿರೀಕ್ಷಿತ 2024ರ ಐಪಿಎಲ್​ನ​ ಸೀಸನ್- 17ರ ಫೈನಲ್​ ಪಂದ್ಯದಲ್ಲಿ ಹೈದ್ರಾಬಾದ್​ ಅನ್ನು ಮಣಿಸುವ ಮೂಲಕ ಕೋಲ್ಕತ್ತಾ ಟ್ರೋಫಿಗೆ ಮುತ್ತಿಕ್ಕಿದೆ. ಈ ಮೂಲಕ 3ನೇ ಬಾರಿಗೆ ಕೆಕೆಆರ್​ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಚೆನ್ನೈನಲ್ಲಿ ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಫೈನಲ್ ಪಂದ್ಯದಲ್ಲಿ 8 ವಿಕೆಟ್​ಗಳ ಅಮೋಘ ಗೆಲುವು ಪಡೆದು ಸಂಭ್ರಮದಲ್ಲಿ ತೇಲಾಡಿತು. ಆದರೆ ಫೈನಲ್​ ಪಂದ್ಯದ ವೇಳೆ ಬಹುಭಾಷ ನಟ ಸೋನು ಸೂದ್​ ಅವರು ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡಿದ್ರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಚೆನ್ನೈನ ಎಂ.ಎ ಚಿದಂಬರಂ ​ ಸ್ಟೇಡಿಯಂ​ನಲ್ಲಿ ನಡೆದ ಫೈನಲ್​​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಶಾರುಖ್​ ಖಾನ್​ ಮಾಲೀಕತ್ವದ ಕೆಕೆಆರ್​ ಗೆದ್ದು ಬೀಗಿದೆ. 2012, 2014 ಹಾಗೂ 2024ರಲ್ಲಿ ಕೆಕೆಆರ್ ಚಾಂಪಿಯನ್ ಪಟ್ಟಕ್ಕೇರಿದೆ. ಮ್ಯಾಚ್ ನಡೆಯುತ್ತಿರುವಾಗ ಆ್ಯಕ್ಟರ್​ ಸೋನು ಸೂದ್ ಅವರು ಕ್ಯಾಮೆರಾಮ್ಯಾನ್ ಆಗಿ ಕಾಣಿಸಿಕೊಂಡಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಏಕೆಂದರೆ ನಟನೆ ಜೊತೆಗೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸೂನು ಸೂದ್ ಅವರು ಐಪಿಎಲ್​ ಫೈನಲ್​ನಲ್ಲಿ ಕ್ಯಾಮೆರಾಮ್ಯಾನ್​ ಜೊತೆ ಕಾಣಿಸಿಕೊಂಡಿರುವುದು ವಿಶೇಷ ಎನಿಸಿದೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಸೋನು ಸೂದ್ ಅವರು ಪಂದ್ಯವನ್ನು ಸೆರೆ ಹಿಡಿಯುವ ಕ್ಯಾಮೆರಾಮ್ಯಾನ್​ ಬಳಿ ಹೋಗಿದ್ದಾರೆ. ಈ ವೇಳೆ ತಮಾಷೆಗೆಂದು ಕ್ಯಾಮೆರಾಮ್ಯಾನ್ ಬಳಿ ಇದ್ದ ಕ್ಯಾಮೆರಾವನ್ನು ಇಸ್ಕೊಂಡು ವಿಡಿಯೋ ಮಾಡಿದ್ದಾರೆ. ತಮ್ಮ ಭುಜದ ಮೇಲೆ ಕ್ಯಾಮೆರಾ ಇಟ್ಟುಕೊಂಡು ಅಭಿಮಾನಿಗಳ ಕಡೆ ತಿರುಗಿ ವಿಡಿಯೋ ಮಾಡಿ ನೆವೇಲ್ಲ ಟಿವಿಯಲ್ಲಿ ಬರುತ್ತೀರಾ ನೋಡಿ ಎಂದಿದ್ದಾರೆ. ಅಲ್ಲದೇ ತಮ್ಮ ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ವಿಡಿಯೋ ಶೇರ್ ಮಾಡಿರುವ ಸೋನು ಸೂದ್, ಐಪಿಎಲ್​​ಗೆ ಕ್ಯಾಮೆರಾಮ್ಯಾನ್​ ಬೇಕಿದ್ರೆ ಹೇಳಿ ನಾನು ರೆಡಿಯಾಗಿದ್ದೇನೆ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IPL ಫೈನಲ್​ ಮ್ಯಾಚ್​​ನಲ್ಲಿ ಕ್ಯಾಮೆರಾಮ್ಯಾನ್​ ಆಗಿ ಕೆಲಸ ಮಾಡಿದ್ರಾ ನಟ ಸೋನ್ ಸೂದ್​..?

https://newsfirstlive.com/wp-content/uploads/2024/05/IPL_SONU_SOOD.jpg

Load More