newsfirstkannada.com

23 ವರ್ಷಕ್ಕೆ ಜೈಲು ನೋಡಿ ಬಂದೆ.. ಜೈಲುವಾಸ ಅನುಭವದ ಬಗ್ಗೆ ಸೋನು ಗೌಡ ಹೇಳಿದ್ದೇನು?

Share :

Published April 13, 2024 at 3:46pm

Update April 13, 2024 at 5:24pm

    ಅನಧಿಕೃತವಾಗಿ ಮಗುವನ್ನು ದತ್ತು ಪಡೆದುಕೊಂಡಿದ್ದ ಸೋನು ಗೌಡ

    ಜೈಲಿನಿಂದ ಬಿಡುಗಡೆ ಬೆನ್ನಲ್ಲೇ ಕಂಪ್ಲೀಟ್ ಮಾಹಿತಿ ಬಿಚ್ಚಿಟ್ಟ ರೀಲ್ಸ್​ ರಾಣಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಸೋನು ಗೌಡ ವಿಡಿಯೋ

ಬೆಂಗಳೂರು: ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಮಾಜಿ ಸ್ಪರ್ಧಿ ಹಾಗೂ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಯಾಗಿರೋ ಸೋನು ಶ್ರೀನಿವಾಸ್ ಗೌಡ ಜೈಲುವಾಸ ಅನುಭವಿಸಿ ವಾಪಸ್​ ಆಗಿದ್ದಾರೆ. ಅನಧಿಕೃತವಾಗಿ ಮನೆಯಲ್ಲಿ ಮಗುವನ್ನು ಇಟ್ಟುಕೊಂಡಿದ್ದ ಆರೋಪದಲ್ಲಿ ಬ್ಯಾಡರಹಳ್ಳಿ ಪೊಲೀಸರು ಸೋನು ಗೌಡರನ್ನು ಬಂಧಿಸಿದ್ದರು. ಪರಪ್ಪನ ಅಗ್ರಹಾರ ಕಾರಾಗೃಹದಿಂದ ಜಾಮೀನಿನ ಮೇಲೆ ಸೋನು ಗೌಡ ಹೊರಗೆ ಬಂದ ಮೇಲೆ ಜೈಲುವಾಸ ಅನುಭವ ಬಗ್ಗೆ ಮಾತಾಡಿದ್ದಾರೆ.

ಇದನ್ನೂ ಓದಿ: VIDEO: ಜೈಲಿನಿಂದ ಬಿಡುಗಡೆ ಬೆನ್ನಲ್ಲೇ ಕ್ಯಾಮೆರಾಗೆ ಪೋಸ್​​ ಕೊಟ್ಟ ಸೋನು ಗೌಡ; ಫ್ಯಾನ್ಸ್​ ಏನಂದ್ರು?

ಇನ್ನು, ಈ ಬಗ್ಗೆ ಸೋನು ಗೌಡ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಮೂಲಕ ಜೈಲಿನಲ್ಲಿದ್ದಾಗ ಆದ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೈಲಿನಿಂದ ಹೊರ ಬಂದ ಸೋನು ಗೌಡಗೆ  ಸಾಕಷ್ಟು ಜನರು ಜೈಲಿನಲ್ಲಿ ಕಳೆದ ದಿನಗಳ ಬಗ್ಗೆ ವಿಡಿಯೋ ಮಾಡುವಂತೆ ಕೇಳಿದ್ದರಂತೆ. ಹೀಗಾಗಿ ಈ ವಿಡಿಯೋವನ್ನು ಮಾಡುತ್ತಿರುವೆ ಎಂದು ಸೋನು ಗೌಡ ಹೇಳಿದ್ದಾರೆ. ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಸೋನು ಗೌಡ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ನನ್ನನ್ನು ಕಾನೂನಾತ್ಮಕವಾಗಿ ವಿಚಾರಣೆ ಮಾಡಿದ್ದರು. ಪೊಲೀಸ್​​ ಸ್ಟೇಷನ್​​ ಬಳಿಕ ಕೋರ್ಟ್​ನಲ್ಲಿ ನನ್ನನ್ನು ಸೆಂಟ್ರೆಲ್ ಜೈಲಿನಲ್ಲಿ 4 ಗೋಡೆಗಳ ಮಧ್ಯೆ ಹಾಕಿದ್ದರು. ಆ 4 ದಿನ ಕಳೆದಾಗ ನನಗೆ ಇದೆಲ್ಲಾ ಬೇಕಿತ್ತಾ ಎಂದು ಅನಿಸಿತು.

ನನ್ನ ಕೇಸ್​​ನಂತೆ ಬೇರೆ ಬೇರೆ ಪ್ರಕರಣದವರು ಕೂಡ ಅಲ್ಲಿ ಇದ್ದರು. ಫುಲ್ ಮರ್ಡರ್, ಹಾಫ್​ ಮರ್ಡರ್ ಮಾಡಿದವರೆಲ್ಲಾ ಇದ್ರು. ಹಲವು ರೀತಿಯ ಜನಗಳ ಜೊತೆ ಇರೋದು ನನಗೆ ಕಷ್ಟ ಅನಿಸಿತು. ಜೈಲಿನಲ್ಲಿ 3 ದಿನಕ್ಕೆ ಒಮ್ಮೆ ಫೋನ್ ಕೊಡುತ್ತಿದ್ದರು. 3-4 ನಿಮಿಷ ಮಾತಾಡಲು ಮೂರು ದಿನ ಕಾಯಬೇಕಿತ್ತು. ಇದರಿಂದ ನನಗೆ ವ್ಯಕ್ತಿಯ ಬೆಲೆ ಗೊತ್ತಾಯ್ತು. ಜೈಲಿನ 4 ಗೋಡೆ ಮಧ್ಯೆ ಇದ್ದು ಅನೇಕ ವಿಚಾರ ಕಲಿತುಕೊಂಡೆ ಅಂತಾ ಹೇಳಿಕೊಂಡಿದ್ದಾರೆ. ಇನ್ನೊಂದು ವಿಚಾರ ಅಂದ್ರೆ, ಜೈಲಿನಲ್ಲಿ ತುಂಬಾನೇ ಸೊಳ್ಳೆ ಕಾಟ ಇತ್ತು. ನಾನು ಫ್ಯಾನ್​ ಇಲ್ಲದೇ ಇರೋದಿಲ್ಲ. ಅಲ್ಲೂ ಫ್ಯಾನ್​ ಇತ್ತು. ಆದ್ರೆ, ನಮ್ಮ ಲೈಫ್​ ಸ್ಟೈಲ್ ಬೇರೆ, ಅಲ್ಲಿ ಇರುವವರ ಜೀವನ ಬೇರೆನೆ ಇದೆ. 24ನೇ ವಯಸ್ಸಿಗೆ ನಾನು ಜೈಲು ನೋಡಿದೆ ಅನ್ನೋದೇ ನನಗೆ ಬೇಸರದ ವಿಚಾರ.

ನಾಲ್ಕು ಗೋಡೆ ನಡುವೆ ಇದ್ದಾಗ ಯಾಕೆ ಈ ರೀತಿ ಆಯ್ತು ಎಂದು ಯೋಚಿಸಿದೆ. ನನ್ನ ಜೀವನ ಮತ್ತೆ ನೆಗೆಟಿವ್ ಆಗಿ ಹೋಯ್ತು ಅಂತ ತುಂಬಾ ಬೇಸರವಾಯ್ತು. ನನ್ನವರು ಅಂತ ಯಾರು ಇಲ್ಲ. ಅದಕ್ಕಾಗಿ ನನಗೆ ತುಂಬಾ ಬೇಸರ ಆಯ್ತು. ಇದರಲ್ಲಿ ಖುಷಿ ವಿಚಾರ ಅಂದ್ರೆ. ಟ್ರೋಲ್ ಪೇಜ್​ಗಳು ನನ್ನನ್ನು ಸಪೋರ್ಟ್ ಮಾಡಿದ್ದಾರೆ. ಇದನ್ನು ನೋಡಿ ನನಗೆ ಖುಷಿ ಆಯ್ತು. ಜೈಲಿನಿಂದ ಬಂದ ಮೊದಲ ದಿನ ನಾನು ಫೋನ್ ನೋಡಿಲ್ಲ. ನಂತರ ನೋಡಿದೆ. ನನ್ನದು ಸಣ್ಣ ಸರ್ಕಲ್, ನನ್ನ ಅಣ್ಣ, ನಮ್ಮ ಮನೆಯವರು, ರಾಕೇಶ್​ ಅಡಿಗ ಎಲ್ಲರು ನನ್ನ ಜೊತೆ ಇದ್ದರು. ಈ ಕೇಸ್​ ಬಗ್ಗೆ ನಾನು ಹೆಚ್ಚು ಮಾತಾಡುವಂತಿಲ್ಲ. ಆದ್ರೆ ಇನ್ಮುಂದೆ ನಾನು ಎಂದಿನಂತೆ ವಿಡಿಯೋ ಮಾಡುವೆ, ನಿಮ್ಮ ಸಪೋರ್ಟ್ ಬೇಕು ಎಂದು ಹೇಳಿಕೊಂಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

23 ವರ್ಷಕ್ಕೆ ಜೈಲು ನೋಡಿ ಬಂದೆ.. ಜೈಲುವಾಸ ಅನುಭವದ ಬಗ್ಗೆ ಸೋನು ಗೌಡ ಹೇಳಿದ್ದೇನು?

https://newsfirstlive.com/wp-content/uploads/2024/04/sonu-gowda4.jpg

Load More