newsfirstkannada.com

‘ದತ್ತು’ ಮಾತೇ ಕುತ್ತು.. ಸೋನು ಗೌಡಗೆ ಜಾಮೀನು ಸಿಗುತ್ತಾ? ರೀಲ್ಸ್​ ಸ್ಟಾರ್​ ಕಥೆ ಮುಂದೇನು?

Share :

Published March 23, 2024 at 9:56pm

    ಸೋಷಿಯಲ್ ಮೀಡಿಯಾದಲ್ಲಿ ಪಾಪ್ಯುಲರ್ ಆಗಿದ್ದ ಸೋನು ಗೌಡ

    ಸೋನುಗೌಡ ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಸಾಧ್ಯತೆ

    ಜಾಮೀನು ರಹಿತ ಸೆಕ್ಷನ್ 370, 370 (2),75 ಅಡಿ ಕೇಸ್ ದಾಖಲು

ಬೆಂಗಳೂರು: ಬಿಗ್​ಬಾಸ್​ ಸ್ಪರ್ಧಿ ಸೋನುಗೌಡ ಅವರ ವಿಚಾರ, ಜನರ ಮನಸ್ಸಿನಲ್ಲಿ ಎರಡು ಆಯಾಮಗಳಲ್ಲಿ ಚರ್ಚೆಯಾಗ್ತಿದೆ. ಒಂದು ಮಾನವೀಯತೆಯ ಆ್ಯಂಗಲ್‌ ಮತ್ತೊಂದು ಕಾನೂನಿನ ಆಯಾಮ. ಆಕೆಯ ಪರ ಮಾತನಾಡೋರು ಇದ್ದಾರೆ. ವಿರುದ್ಧವಾಗಿ ಮಾತನಾಡೋರು ಇದ್ದಾರೆ. ಆದ್ರೆ, ಕಾನೂನಿನ ದೃಷ್ಟಿಯಲ್ಲಿ ಆಕೆ ಈಗ ಆರೋಪಿಯೇ. ಹಾಗಾಗಿಯೇ ಈ ಕೇಸ್‌ನ ಕಾನೂನಿನ ಪರಿಧಿಯಲ್ಲಿ ನೋಡೋದು ಸೂಕ್ತವೇ. ಹಾಗಂತಾ ಜನರ ಅಭಿಪ್ರಾಯ ತಪ್ಪು ಅಂತಾನೂ ಅಲ್ಲ. ಇಷ್ಟೆಲ್ಲಾ ಚರ್ಚೆಗಳ ನಡುವೆ ತುಂಬಾ ಗಂಭೀರವಾಗಿ ಡಿಸ್ಕಸ್‌ ಆಗ್ತಿರೋದು. ಸದ್ಯಕ್ಕೆ ಸೋನುಗೌಡಗೆ ಬೇಲ್ ಸಿಗುತ್ತಾ ಅನ್ನೋದು.

ಸೋಷಿಯಲ್ ಮೀಡಿಯಾದಲ್ಲಿ ಮುಳುಗಿರೋರಿಗೆ ಸೋನು ಶ್ರೀನಿವಾಸ ಗೌಡ ಬಗ್ಗೆ ಚೆನ್ನಾಗಿಯೇ ಗೊತ್ತು. ಆಕೆಯ ರೈಸಿಂಗ್! ಡೌನ್‌ಫಾಲ್‌! ಮತ್ತೊಮ್ಮೆ ರೈಸಿಂಗ್ ಆಗಿದ್ದು, ಈಗ ಅರೆಸ್ಟ್ ಆಗಿರೋದು ಎಲ್ಲವೂ ಗೊತ್ತೇ ಇದೆ. ಸೋಷಿಯಲ್ ಮೀಡಿಯಾದಲ್ಲಿ ಪಾಪ್ಯುಲರ್ ಆಗಿದ್ದ ಕಾರಣಕ್ಕೆನೇ ಆಕೆಗೆ ಓಟಿಟಿ ಬಿಗ್‌ಬಾಸ್ ಅವತರಣಿಗೆ ಅವಕಾಶ ಸಿಕ್ಕಿದ್ದು. ಆ ಸಮಯದಲ್ಲೂ ಆಕೆಯ ವಿರುದ್ಧ ದೊಡ್ಡ ಅಲೆಯೇ ಎದ್ದಿತ್ತು. ಆಕೆಯನ್ನ ಬಿಗ್‌ಬಾಸ್‌ಗೆ ಸೆಲೆಕ್ಟ್ ಮಾಡಿದ್ದೇ ತಪ್ಪು ಅನ್ನೋ ರೀತಿ ದೊಡ್ಡ ಚರ್ಚೆಯಾಗಿತ್ತು. ಆದ್ರೆ, ಕೊನೆಗೂ ಆಕೆಗೂ ಒಂದು ಬದುಕಿದೆ ಬಿಡಿ ಅನ್ನೋ ಮಟ್ಟಿಗೆ ಜನರು ಮಾತನಾಡಿದ್ದು ಉಂಟು. ಈಗ, ಇದೇ ರೀತಿಯ ಚರ್ಚೆಗಳು ನಡೆಯುತ್ತಿವೆ. ಒಂದು ವರ್ಗ ಸೋನುಗೌಡ ಪರ ಬೆಂಬಲ ನಿಂತ್ರೆ, ಇನ್ನೊಂದು ವರ್ಗ ಆಕೆಯ ನಡೆಗೆ ಆಕ್ಷೇಪ ವ್ಯಕ್ತಪಡಿಸ್ತಿದೆ. ಆದ್ರೆ, ಸತ್ಯ ಏನಂದ್ರೆ, ಕಾನೂನಿನ ಕಣ್ಣಿನಲ್ಲಿ ಆಕೆ ಆರೋಪಿ. ಗಂಭೀರವಾದ ಪ್ರಕರಣದ ಆರೋಪಿ.

ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳ ದೂರಿನ ಮೇರೆಗೆ ನಿನ್ನೆ ಬ್ಯಾಡರಹಳ್ಳಿ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ಮೇಲೆ, ಜಡ್ಜ್‌ ಮುಂದೆ ಹಾಜರುಪಡಿಸಿದ್ದರು. ಬಳಿಕ ನ್ಯಾಯಧೀಶರು ಸೋನುಗೌಡ ಅವರನ್ನ 4 ದಿನ ಪೊಲೀಸ್‌ ಕಸ್ಟಡಿಗೆ ನೀಡಿದರು. ಸದ್ಯ, ಡೈರಿ ಸರ್ಕಲ್‌ನಲ್ಲಿರೋ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಸೋನುಗೌಡ ವಿಚಾರಣೆ ನಡೆಯುತ್ತಿದೆ.

ಇದನ್ನು ಓದಿ: ಬರೋಬ್ಬರಿ 25 ಲಕ್ಷ ರೂಪಾಯಿ ಲಂಚ.. ಲೋಕಾಯುಕ್ತ ಬಲೆಗೆ ಬಿದ್ದ ಕಮಿಷನರ್

ಅಷ್ಟಕ್ಕೂ ವಿಚಾರಣೆ ವೇಳೆ ಸೋನುಗೌಡ ಹೇಳಿದ್ದೇನು?

ಮಗುವನ್ನ ನಾನು ದತ್ತು ಪಡೆದು 41 ದಿನಗಳಾಗಿದೆ. ಮಗುವಿನ ಕುಟುಂಬ ನಾನು ವಾಸವಿದ್ದ ಅಪಾರ್ಟ್​​​ಮೆಂಟ್ ಪಕ್ಕದಲ್ಲೇ ಕೂಲಿ ಕೆಲಸ ಮಾಡುತ್ತಿತ್ತು. ಮಗುವಿನ ಕುಟುಂಬದಲ್ಲಿ ಒಟ್ಟು ನಾಲ್ವರು ಮಕ್ಕಳಿದ್ದಾರೆ. ಮೊದಲನೆಯದು ಗಂಡು, ಮೂವರು ಹೆಣ್ಮಕ್ಕಳು. ಅವರಲ್ಲಿ ಎರಡನೇ ಮಗುವನ್ನ ದತ್ತು ಪಡೆದಿದ್ದೇನೆ. ನನಗೆ ಒಂದು ವರ್ಷದ ಹಿಂದೆಯೇ ಮಗು ಪರಿಚಯ ಆಗಿತ್ತು. ಮನೆ ಪಕ್ಕದಲ್ಲಿ ಮಗುವಿನ ಪೋಷಕರು ಕೂಲಿ ಕಾರ್ಮಿಕರಾಗಿ ಬಂದಿದ್ದರು. ಈ ವೇಳೆ ಮಗು ನನ್ನ ಬಳಿ ತಿನ್ನಲು ತಿಂಡಿ ಕೇಳುತ್ತಿತ್ತು. ದಿನನಿತ್ಯ ಮಗುವಿಗೆ ಏನಾದರೂ ತಿಂಡಿ ಕೊಡುತ್ತಿದ್ದರಿಂದ ಸಲುಗೆ ಬೆಳೆದಿತ್ತು. ಮಗುವಿಗೆ ಏನಾದರೂ ಸಹಾಯ ಮಾಡಬೇಕು ಅನ್ನಿಸಿತ್ತು. ಕೆಲ ತಿಂಗಳುಗಳ ಹಿಂದೆ ದಂಪತಿ ಮತ್ತು ಮಕ್ಕಳನ್ನ ಕರೆದುಕೊಂಡು ಹುಟ್ಟೂರು ರಾಯಚೂರಿಗೆ ತೆರಳಿದ್ದರು. ಆಗ ನಾನು ಒಂಟಿಯಾಗಿ ಇರೋದ್ರಿಂದ ಮಗುವನ್ನ ಕರೆ ತರೋಣ ಎಂದು ಫೋನ್ ಮೂಲಕ ಸಂಪರ್ಕ ಮಾಡಿದ್ದೆ. ನಂತರ ಮಗುವನ್ನು ಕರೆ ತಂದಿದ್ದೇ. ಆಕೆ ನಮ್ಮ ಮನೆಯಲ್ಲಿಯೇ ಇದ್ದಳು ಅಂತಾ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ, ಈ ಪ್ರಕರಣದಲ್ಲಿ ಮಗುವಿನ ಪೋಷಕರ ಹೇಳಿಕೆಯನ್ನೂ ಪಡೆಯಬೇಕಾಗಿರುವುದು ಅತ್ಯಗತ್ಯ ಜೊತೆಗೆ ಸ್ಥಳ ಮಹಜರು ಕೂಡ ನಡೆಯಬೇಕಿದೆ. ಸ್ಥಳ ಮಹಜರಿಗೆ ಸೋನುಗೌಡ ಅವರನ್ನ ರಾಯಚೂರಿಗೆ ಮಹಜರಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.

ಸೋನು ಶ್ರೀನಿವಾಸ ಗೌಡಗೆ ಸಿಗುತ್ತಾ ಬೇಲ್?

4 ದಿನ ಪೊಲೀಸ್ ಕಸ್ಟಡಿಯಲ್ಲಿರೋ ಸೋನುಗೌಡಗೆ ಸದ್ಯಕ್ಕೆ ಬೇಲ್ ಸಿಗುತ್ತಾ ಅನ್ನೋ ಪ್ರಶ್ನೆ ಸದ್ಯ ಉದ್ಭವವಾಗಿದೆ. ಈ ಪ್ರಕರಣದಲ್ಲಿ ಬೇರೇ ಬೇರೇ ಆಯಾಮದಲ್ಲಿ ತನಿಖೆ ನಡೆಯಬೇಕಿರುವುದು, ನ್ಯಾಯಾಧೀಶರ ಮುಂದೆ ಕಸ್ಟಡಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಕೂಡ ಪೊಲೀಸರ ಮನವಿ ಪುರಸ್ಕರಿಸಿದೆ. ನಾಲ್ಕು ದಿನಗಳವೊಳಗೆ ಪೊಲೀಸರು, ವಿಚಾರಣೆ ನಡೆಸಿದ ನಂತರ ಮುಂದೇನು ಅನ್ನೋದೆ ಸದ್ಯದ ಪ್ರಶ್ನೆ. ಪೊಲೀಸ್ ಕಸ್ಟಡಿ ಮುಗಿದ ನಂತರ ಸೋನುಗೌಡ ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ. ಈಗಾಗಲೇ ಸೋನು ಪರ ವಕೀಲರಿಂದ ಜಾಮೀನು ಅರ್ಜಿ ಸಲ್ಲಿಸಲು ಸಿದ್ದತೆ ನಡೆಯುತ್ತಿದೆ. ಜಾಮೀನು ರಹಿತ ಸೆಕ್ಷನ್ 370, 370 (2),75 ಅಡಿ ಪ್ರಕರಣ ದಾಖಲಾಗಿರೋ ಹಿನ್ನೆಲೆಯಲ್ಲಿ, ವಕೀಲರು ಎಲ್ಲಾ ಆಯಾಮಗಳಿಂದ ಯೋಚನೆ ಮಾಡ್ತಿದ್ದಾರೆ. ದತ್ತು ಪಡೆಯುವ ಕಾನೂನುಗಳ ಬಗ್ಗೆ ಸೋನುಗೌಡ ಅವರಿಗೆ ಸಂಪೂರ್ಣವಾಗಿ ಅರಿವಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ದತ್ತು ಅನ್ನೋ ಪದ ಬಳಸಿದ್ದಾರೆ. ಮಾನವೀಯತೆ ಆಧಾರದ ಮೇಲೆ ಮಗುವನ್ನ ನೋಡಿಕೊಂಡಿದ್ದಾರೆಯೇ ವಿನಃ ಯಾವುದೇ ಲಾಭ ನಿರೀಕ್ಷೆ ಮಾಡಿಲ್ಲ ಅನ್ನೋ ಆಧಾರಗಳ ಮೇಲೆ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಸಹಜವಾಗಿಯೇ ಪಬ್ಲಿಕ್ ಪ್ರಾಸಿಕ್ಯೂಟರ್‌, ಆಕ್ಷೇಪಣೆ ಸಲ್ಲಿಸಲಿದ್ದಾರೆ. ಸಾಕ್ಷ ನಾಶ, ಮಗುವಿನ ಪೋಷಕರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಅಂತಾ ವಾದ ಮಂಡಿಸಲಿದ್ದಾರೆ. ಆದ್ರೆ, ಈ ಕೇಸ್‌ನಲ್ಲಿ ತುಂಬಾ ಮುಖ್ಯವಾಗಿರುವುದು ಮಗು ಮತ್ತು ಪೋಷಕರ ಹೇಳಿಕೆ. ಅವರ ಹೇಳಿಕೆ ಸೋನು ವಿರುದ್ಧವಾಗಿದ್ರೆ, ಬೇಲ್ ಸಿಗುವುದು ಕಷ್ಟಕರ ಆಗಬಹುದು. ಸೋನು ಪರ ಹೇಳಿಕೆ ನೀಡಿದರೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚಿರುತ್ತೆ ಅಂತಾ ಹೇಳಲಾಗ್ತಿದೆ. ಒಂದು ವೇಳೆ ತನಿಖೆಯಲ್ಲಿ ಹಣ ಪಡೆದು ಮಗುವನ್ನ ಕೊಟ್ಟಿದ್ರೆ, ಸೋನುಗೌಡ ಮತ್ತು ಪೋಷಕರಿಗೆ ಕಂಟಕ ಎದುರಾಗಲಿದೆ. ಮಗುವನ್ನು ಹಣಕ್ಕೆ ಮಾರಾಟ ಮಾಡಿದ್ರೆ ಪೋಷಕರ ವಿರುದ್ಧವೂ ದೂರು ದಾಖಲಾಗುತ್ತೆ. ಇನ್ನೊಂದೆಡೆ, ಸೋಷಿಯಲ್ ಮೀಡಿಯಾದಲ್ಲಿ ಸೋನುಗೌಡ ಅರೆಸ್ಟ್ ಆಗೋ ಮುನ್ನ ಮಾತನಾಡಿರೋ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಮಗುವನ್ನ ದತ್ತು ಪಡೆದಿರುವುದಾಗಿಯೂ ಹಾಗೂ ಕಾನೂನಿನ ಮೂಲಕ ಪಡೆಯುವುದಾಗಿಯೂ ಹೇಳಿದ್ದಾರೆ. ಕೆಲವರು ಪರವೂ ಇದ್ದಾರೆ. ಕೆಲವರು ವಿರೋಧವೂ ಇದ್ದಾರೆ. ಆದ್ರೆ, ಇವರಿಗೆ ಈ ಕೇಸ್‌ನಲ್ಲಿ ರಿಲೀಫ್ ಸಿಗಬೇಕಾದ್ರೆ, ಮುಖ್ಯವಾಗಿರೋದು ಕಾನೂನು. ಬೇಲ್‌ ಯಾವ ಗ್ರೌಂಡ್ಸ್‌ನಲ್ಲಿ ಅಪ್ಲೈ ಮಾಡ್ತಾರೆ? ಅದಕ್ಕೆ ಸರ್ಕಾರಿ ವಕೀಲರು ಯಾವ ರೀತಿ ವಾದ ಮಂಡಿಸುತ್ತಾರೆ? ವಾದ – ಪ್ರತಿವಾದ ಆಲಿಸುವ ನ್ಯಾಯಧೀಶರು ಯಾವ ತೀರ್ಪು ನೀಡುತ್ತಾರೆ ಅನ್ನೋದಷ್ಟೇ ಸೋನುಗೌಡಗೆ ಸದ್ಯ ಇಂಪಾರ್ಟ್‌ಟೆಂಟ್ ಆಗಿರೋದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ದತ್ತು’ ಮಾತೇ ಕುತ್ತು.. ಸೋನು ಗೌಡಗೆ ಜಾಮೀನು ಸಿಗುತ್ತಾ? ರೀಲ್ಸ್​ ಸ್ಟಾರ್​ ಕಥೆ ಮುಂದೇನು?

https://newsfirstlive.com/wp-content/uploads/2024/03/sonu-gowda-6-1.jpg

Load More