/newsfirstlive-kannada/media/post_attachments/wp-content/uploads/2024/04/sonu-gowda1.jpg)
ಸೋನು ಶ್ರೀನಿವಾಸ ಗೌಡ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಸೋಷಿಯಲ್ ಮೀಡಿಯಾದಲ್ಲಿ ಮುಳುಗಿರೋರಿಗೆ ಸೋನು ಶ್ರೀನಿವಾಸ ಗೌಡ ಬಗ್ಗೆ ಚೆನ್ನಾಗಿಯೇ ಗೊತ್ತು. ಸೋಷಿಯಲ್ ಮೀಡಿಯಾದಲ್ಲಿ ಪಾಪ್ಯುಲರ್ ಆಗಿದ್ದ ಕಾರಣಕ್ಕೆನೇ ಸೋನು ಗೌಡಗೆ ಓಟಿಟಿ ಬಿಗ್‌ಬಾಸ್ ಅವಕಾಶ ಸಿಕ್ಕಿದ್ದು. ಆದರೆ ಮೊನ್ನೆಯಷ್ಟೇ ಅಕ್ರಮವಾಗಿ ಮಗು ದತ್ತು ಪಡೆದ ಆರೋಪದಲ್ಲಿ ರೀಲ್ಸ್ ಸ್ಟಾರ್, ಬಿಗ್‌ಬಾಸ್ ಸ್ಪರ್ಧಿ ಸೋನು ಗೌಡ ಅವರು ಜೈಲುವಾಸ ಅನುಭವಿಸಿ ಬಂದಿದ್ದಾರೆ.
ಇದನ್ನೂ ಓದಿ:ಜೈಲಲ್ಲೇ ರಾಕೇಶ್ ಅಡಿಗ ಮುಂದೆ ಗಳಗಳನೆ ಕಣ್ಣೀರಿಟ್ಟ ಸೋನು ಗೌಡ
/newsfirstlive-kannada/media/post_attachments/wp-content/uploads/2024/04/sonu-gowda3.jpg)
ಕೆಣಕುತಿದೆ….ನಿನ್ನ ಕಣ್ಣೋಟ ಅನ್ನೋ ಹಾಡಿಗೆ ಸೋನು ರೀಲ್ಸ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಕೆಲವರು ಪಾಸಿಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ. ಒಳ್ಳೆಯ ಟೈಮ್ ಬರುತ್ತೆ ಸ್ವಲ್ಪ ಸಮಾಧಾನವಾಗಿ ಇರೀ. ಕನ್ನಡತಿ ಅಂತಾ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನೀವು ಇಲ್ಲದೆ ಇರೋದಕ್ಕೆ ಇನ್ಸ್ಟಾಗ್ರಾಮ್ ನೋಡುವುದಕ್ಕೆ ಬೇಸರ ಆಗುತ್ತಿತ್ತು ಅಂತಾ ಕಾಮೆಂಟ್ ಮಾಡಿದ್ದಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ