ಬೆಡ್​ ರೂಂನಲ್ಲಿ ಬಿಗ್​ಬಾಸ್​ ಬೆಡಗಿ ಹಾಟ್​ ಅವತಾರ; ಮನಸು ಹಿಂಡಿದನಲ್ಲ ಅಂದಿದ್ಯಾರಿಗೆ ಸೋನು ಗೌಡ

author-image
Veena Gangani
Updated On
ಬೆಡ್​ ರೂಂನಲ್ಲಿ ಬಿಗ್​ಬಾಸ್​ ಬೆಡಗಿ ಹಾಟ್​ ಅವತಾರ; ಮನಸು ಹಿಂಡಿದನಲ್ಲ ಅಂದಿದ್ಯಾರಿಗೆ ಸೋನು ಗೌಡ
Advertisment
  • ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರ್ತಾರೆ ಸೋನು​ ಗೌಡ
  • ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್ ಆಗ್ತಿದೆ ಈ ವಿಡಿಯೋ
  • ಅಬ್ಬಬ್ಬಾ ಏನ್​ ಹಾಟ್, ಸೋನು ಸಖತ್ ಬೋಲ್ಡ್ ಎಂದ ನೆಟ್ಟಿಗರು

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ ಒಟಿಟಿ ಸೀಸನ್​ 1ರ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್​ ಗೌಡ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬಿಗ್​ಬಾಸ್ ಮನೆಗೆ​ ಹೋಗಿದ್ದಾಗಲೂ ಸಖತ್​ ಸುದ್ದಿಯಲ್ಲಿದ್ದರು ಸೋನು ಗೌಡ. ಇದೀಗ ಬೆಡ್ ರೂಂನಲ್ಲಿ ರೀಲ್ಸ್​ ಮಾಡಿ ಅಭಿಮಾನಿಗಳ ಎದೆಗೆ ಕಚಗುಳಿ ಇಟ್ಟಿದ್ದಾರೆ.

ಇದನ್ನೂ ಓದಿ:ಜೈಲಿನಿಂದ ಹೊರ ಬಂದ ಬೆನ್ನಲ್ಲೇ ಹೊಸ ಬಾಂಬ್​ ಸಿಡಿಸಿದ ಸೋನು ಗೌಡ; ಏನದು?

publive-image

ರೀಲ್ಸ್​ ರಾಣಿ ಸೋನು ಗೌಡ ಅವರು ಅಕ್ರಮವಾಗಿ ಮಗುವನ್ನು ದತ್ತು ಪಡೆದ ಕೇಸ್​ ಸಂಬಂಧ ಜೈಲುವಾಸ ಅನುಭವಿಸುತ್ತಿದ್ದರು. ಜೈಲಿನಿಂದ ಆಚೆ ಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್​ ಆಗಿದ್ದಾರೆ. ಹೊಸ ಹೊಸ ರೀಲ್ಸ್​ ಮಾಡುವ ಮೂಲಕ ಸಖತ್ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಬೆಡ್​ ರೂಂನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ನೀಲಕಂಠ ಸಿನಿಮಾದ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ ಎಂಬ ಹಾಡಿಗೆ ರೀಲ್ಸ್​ ಮಾಡಿದ್ದಾರೆ.

ಇದೇ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ನೋಡಿದ ಕೆಲವರು ಬೆಡ್​ನಲ್ಲಿ ಅರಳಿದ ಪ್ರತಿಭೆಗೆ ಲೈಕ್​ ಕೊಡ್ರೊ, ವಿಡಿಯೋ ಮಾಡಿದ ಕ್ಯಾಮರಾ ಮ್ಯಾನ್​ಗೆ ಕೊಡ್ರೋ ಅವಾರ್ಡ್, ಅಬ್ಬಬ್ಬಾ ಏನ್​ ಹಾಟ್ ಬೋಲ್ಡ್ ಸೋನು ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ. ಕೆಲವರು, ಸೂಪರ್​ ಸೋನು, ಲುಕಿಂಗ್​ ಬ್ಯೂಟಿಫುಲ್​, ಸೀರೆಯಲ್ಲಿ ಒಂದು ರೀಲ್ಸ್ ಮಾಡಿ ಅಂತ ಪ್ರತಿಕ್ರಿಯೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment