/newsfirstlive-kannada/media/post_attachments/wp-content/uploads/2024/06/sonu-gowda1.jpg)
ಕನ್ನಡದ ಬಿಗ್​ ರಿಯಾಲಿಟಿ ಬಿಗ್​ಬಾಸ್​ ಒಟಿಟಿ ಸೀಸನ್ 1ಕ್ಕೆ ಎಂಟ್ರಿ ಕೊಟ್ಟಿದ್ದ ಸೋನು ಶ್ರೀನಿವಾಸ ಗೌಡ ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ಒಂದಲ್ಲಾ ಒಂದು ವಿಚಾರಕ್ಕೆ ಸೋನು ಗೌಡ ಸುದ್ದಿಯಲ್ಲಿ ಇರುತ್ತಾರೆ. ಇದೀಗ ನಟ ದರ್ಶನ್​ ಜೈಲಿಗೆ ಹೋದ ಬಳಿಕ ಕೊಲೆಯಾದ ರೇಣುಕಾಸ್ವಾಮಿ ನನಗೂ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಅಂತ ಹೇಳಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/04/sonu-gowda4.jpg)
ಇದನ್ನೂ ಓದಿ:ಏನ್ ಟೈಗರ್ ಅಂದ್ರು.. ಜೈಲಿನಲ್ಲಿ ದರ್ಶನ್ ನೋಡಿ ಶಾಕ್ ಆದ ವಿನೋದ್ ಪ್ರಭಾಕರ್; ಹೇಳಿದ್ದೇನು?
ಹೌದು, ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ದರ್ಶನ್​ ಹಾಗೂ ಪವಿತ್ರ ಜೈಲು ಸೇರುತ್ತಿದ್ದಂತೆ ಕುಟುಂಬಸ್ಥರು ಅವರನ್ನು ಭೇಟಿ ಮಾಡಲು ಬರುತ್ತಿದ್ದಾರೆ. ಆದರೆ ಇದರ ಮಧ್ಯೆ ನೆಚ್ಚಿನ ನಟ ಜೈಲು ಸೇರಿದ ಹಿನ್ನೆಲೆಯಲ್ಲಿ ಸೋನು ಗೌಡ ಬೇಸರ ಹೊರ ಹಾಕಿದ್ದಾರೆ. ಜೊತೆಗೆ ಆ ಅಕೌಂಟ್​ನಿಂದ ನನಗೂ ಕೆಟ್ಟದಾಗಿ ಮೆಸೇಜ್ ಬಂದಿದೆ ಅಂತ ಯ್ಯೂಟೂಬ್​ ಚಾನೆಲ್​ನಲ್ಲಿ ಬೇಸರ ಹೊರ ಹಾಕಿದ್ದಾರೆ.
/newsfirstlive-kannada/media/post_attachments/wp-content/uploads/2024/06/sonu-gowda.jpg)
ಇನ್ನು, ಇದೇ ವಿಚಾರವಾಗಿ ಮಾತಾಡಿದ ಸೋನು ಗೌಡ, ಯ್ಯೂಟೂಬ್​ನಲ್ಲಿ ನಾನು ಒಂದು ವಿಡಿಯೋ ನೋಡಿದೆ. ಅದೇ ಅಕೌಂಟ್​ನಿಂದ ಸಾಕಷ್ಟು ಹುಡುಗಿಯರಿಗೆ ಈತ ಕೆಟ್ಟ ಕೆಟ್ಟದಾಗಿ ಮೆಸೇಜ್​ ಮಾಡಿದ್ದ. ಹಾಗಾಗಿ ನಾನೂ ನನ್ನ ಫೋನ್​ನಲ್ಲಿ ಚೆಕ್​ ಮಾಡಿದೆ. ಆಗ ಆ ಯಪ್ಪ ನನಗೂ ಮೆಸೇಜ್​ ಮಾಡಿದ್ದಾರೆ. ಆತ ತಪ್ಪು ಮಾಡಿದ್ದಾನೆ ಅಂತ ಅವರ ಕುಟುಂಬಕ್ಕೆ ನಾನು ಏನು ಹೇಳುತ್ತಿಲ್ಲ. ನನಗೂ ಕೆಟ್ಟದಾಗಿ ಅನೇಕರು ಕಾಮೆಂಟ್ ಮಾಡುತ್ತಾರೆ. ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಕಾಮೆಂಟ್ ಮಾಡಿದ್ರೆ ಸುಮ್ಮನೆ ಇರ್ತೀರಾ? ಅವರು ಕೂಡ ಒಳ್ಳೆವರಾಗಿ ಇದಿದ್ದರೇ ದೇವರು ಅವರನ್ನು ಚೆನ್ನಾಗಿ ಇಡುತ್ತಾರೆ ಅಂತ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/06/renuka-case1.jpg)
ಇನ್ನೂ ನಿನ್ನೆ ಬಿಗ್‌ಬಾಸ್ ಖ್ಯಾತಿಯ ನಟಿ ಚಿತ್ರಾಲ್ ರಂಗಸ್ವಾಮಿ ಕೂಡ ತಮಗೂ ಈ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿತ್ತು ಎಂದು ಆರೋಪಿಸಿದ್ದರು. ಈ ಬಗ್ಗೆ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿ ರೇಣುಕಾಸ್ವಾಮಿ ಅವರದ್ದು ಎನ್ನಲಾದ ಅಕೌಂಟ್​ ಫೋಟೋವನ್ನು ಸ್ಟೋರಿಯಲ್ಲಿ ಶೇರ್ ಮಾಡಿಕೊಂಡು ಅದರ ಬಗ್ಗೆ ಸವಿವರವಾಗಿ ಮಾತನಾಡಿದ್ದರು. ಹೌದು, ನಟಿ ಹಾಗೂ ಬಿಗ್‌ಬಾಸ್ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ ಅವರು ಈ ಬಗ್ಗೆ ಮಾತಾಡಿದ್ದಾರೆ. ಪ್ರಸ್ತುತವಾಗಿ ಇಲ್ಲಿ ಏನು ನಡೆಯುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಈ ಕೊಲೆ ವಿಚಾರವಾಗಿ ಎಲ್ಲರಿಗೂ ಡಿಸ್ಟರ್ಬ್ ಕೂಡ ಆಗಿದೆ. ಇಲ್ಲಿ ಯಾರಿಗೂ ನಾನು ಸಪೋರ್ಟ್ ಮಾಡಲು ಬಂದಿಲ್ಲ. ದೇವರು ರೇಣುಕಾಸ್ವಾಮಿ ಕುಟುಂಬಕ್ಕೆ ಶಕ್ತಿ ಕೊಡಲಿ. ಆದರೆ ರೇಣುಕಾಸ್ವಾಮಿ ಅವರು ಈ ತರ ಹಲವರಿಗೆ ಸಂದೇಶ ಕಳುಹಿಸಿದ್ದರು. ಈ ಬಗ್ಗೆ ಮಾರ್ಚ್‌ನಲ್ಲಿ ಪೊಲೀಸ್​ ಸ್ಟೇಷನ್‌ನಲ್ಲಿ ಕಂಪ್ಲೇಟ್ ಕೂಡ ಆಗಿದೆ. ಅವರ ಅಕೌಂಟ್ ಈ ರೀತಿ ಗೌತಮ್ ಅನ್ನುವ ಹೆಸರಲ್ಲಿ ಇತ್ತು. ಈ ಅಕೌಂಟ್​ನಿಂದ ಅದೇ ರೀತಿಯ ಕೆಟ್ಟ ಮೆಸೇಜ್‌ಗಳನ್ನು ಸಾಕಷ್ಟು ಜನರಿಗೆ ಕಳುಹಿಸಿದ್ದರಂತೆ. ನನಗೆ ಅಚ್ಚರಿ ಆಯಿತು ಅಂತ ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us