newsfirstkannada.com

ಸರ್ಕಾರಿ ಸ್ವಾಮ್ಯದ ಮದರಸಾಗಳಲ್ಲಿ ಶ್ರೀರಾಮನ ಕಥೆ ಸೇರಿಸುತ್ತೇವೆ -ವಕ್ಫ್​​ಬೋರ್ಡ್​ ಅಧ್ಯಕ್ಷ ಹೇಳಿಕೆ

Share :

Published January 27, 2024 at 1:35pm

    ಮಕ್ಕಳು ಶ್ರೀರಾಮನಂತೆ ಆಗಬೇಕು, ಔರಂಗಜೇಬ್ ಅಲ್ಲ

    ಪ್ರವಾದಿ ಮೊಹ್ಮದ್, ಭಗವಾನ್ ರಾಮನ ಕುರಿತ ವಿಚಾರಗಳು

    ಮಾರ್ಚ್​​ನಿಂದ ಹೊಸ ಪಠ್ಯಕ್ರಮ ಅಳವಡಿಸಲು ಚಿಂತನೆ

ವಕ್ಫ್​​ ಮಂಡಳಿಯೊಂದಿಗೆ ಸಂಯೋಜಿತವಾಗಿರುವ ಮದರಸಾಗಳಿಗೆ ಭಗವಾನ್ ಶ್ರೀರಾಮನ ಕಥೆಯನ್ನು ಮುಂದಿನ ಹೊಸ ಪಠ್ಯದಲ್ಲಿ ಸೇರಿಸಲಾಗುವುದು ಎಂದು ಉತ್ತರಾಖಂಡ್​​ನ ಡೆಹ್ರಾಡೂನ್ ವಕ್ಫ್​​ಬೋರ್ಡ್​ ಅಧ್ಯಕ್ಷ ಶಾದಾಬ್ ಶಾಮ್ಸ್​ ಮಾಹಿತಿ ನೀಡಿದ್ದಾರೆ.

ಮುಂದಿನ ಮಾರ್ಚ್​​ನಿಂದ ಹೊಸ ಪಠ್ಯ ಸೇರಿಸಲು ನಿರ್ಧರಿಸಲಾಗಿದೆ. ಮದರಸಾಗಳಲ್ಲಿ ಓದುತ್ತಿರುವ ಮಕ್ಕಳು ಔರಂಗಜೇಬನಂತೆ ಅಲ್ಲ, ಶ್ರೀರಾಮನಂತೆ ಆಗಬೇಕೆಂದು ನಾವು ಭಯಸುತ್ತೇವೆ. ನಮ್ಮ ಮದರಸಾ ವಿದ್ಯಾರ್ಥಿಗಳಿಗೆ ಪ್ರವಾದಿ ಮೊಹಮ್ಮದ್ ಮತ್ತು ಭಗವಾನ್ ರಾಮನ ಜೀವನ ಕಥೆಯನ್ನು ಕಲಿಸಲಾಗುವುದು. ಅನುಭವಿ ಮುಸ್ಲಿಂ ಧರ್ಮಗುರುಗಳು ಕೂಡ ಇದಕ್ಕೆ ಅನುಮೋದಿಸಿದ್ದಾರೆ.

ಬಿಜೆಪಿ ನಾಯಕರಾಗಿರುವ ಶಾದಾಬ್ ಶಾಮ್ಸ್​, ಶ್ರೀರಾಮನು ತೋರಿಸಿರುವ ಮೌಲ್ಯಗಳು ಅವರ ಧರ್ಮ ಅಥವಾ ನಂಬಿಕೆಯನ್ನು ಲೆಕ್ಕಿಸದೇ ಎಲ್ಲರೂ ಅನುಸರಿಸಲು ಅರ್ಹವಾಗಿವೆ. ಅಂದ್ಹಾಗೆ ಉತ್ತರಾಖಂಡ್ ಸರ್ಕಾರದ ಅಡಿಯಲ್ಲಿ 117 ಮದರಸಾಗಳಿವೆ. ನೂತನ ಪಠ್ಯಕ್ರಮವು ಡೆಹ್ರಾಡೂನ್, ಹರಿದ್ವಾರ, ಉಧಮ್ ಸಿಂಗ್ ನಗರ ಮತ್ತು ನೈನಿತಾಲ್ ಜಿಲ್ಲೆಗಳಲ್ಲಿರುವ ಮದರಾಸಗಳಲ್ಲಿ ಸೇರಿಸಲಾಗುತ್ತದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಸ್ವಾಮ್ಯದ ಮದರಸಾಗಳಲ್ಲಿ ಶ್ರೀರಾಮನ ಕಥೆ ಸೇರಿಸುತ್ತೇವೆ -ವಕ್ಫ್​​ಬೋರ್ಡ್​ ಅಧ್ಯಕ್ಷ ಹೇಳಿಕೆ

https://newsfirstlive.com/wp-content/uploads/2024/01/MADARASA.jpg

Load More