/newsfirstlive-kannada/media/post_attachments/wp-content/uploads/2025/05/sophia-qureshi.jpg)
ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಬಗ್ಗೆ ದೇಶಕ್ಕೆ ತಿಳಿಸಿಕೊಡಲು ಇಬ್ಬರು ಹೆಣ್ಮಕ್ಕಳು ಮುಂದಾಳತ್ವ ವಹಿಸಿದ್ದರು. ಅವರೇ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್. ಬೆನ್ನಲ್ಲೇ ಈ ಸೇನಾಧಿಕಾರಿಗಳ ಬಗ್ಗೆ ತಿಳಿದುಕೊಳ್ಳಲು ಜನ ಆಸಕ್ತಿ ತೋರಿಸುತ್ತಿದ್ದಾರೆ.
ಖುರೇಷಿ ಯಾರು?
ಕರ್ನಲ್ ಸೋಫಿಯಾ 1981ರಲ್ಲಿ ಗುಜರಾತ್‌ನ ವಡೋದರಾದಲ್ಲಿ ಜನಿಸಿದರು. ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1999ರಲ್ಲಿ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ (OTA) ಟ್ರೈನಿಂಗ್ ಪಡೆದು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ತವ್ಯಕ್ಕೆ ಸೇರಿದರು. ಖುಷಿಯ ವಿಚಾರ ಏನೆಂದರೆ ಖುರೇಷಿ ಕರ್ನಾಟಕದ ಸೊಸೆ.
ಇದನ್ನೂ ಓದಿ: ಬೆಳಗಾವಿ ಸೊಸೆ, ಈಗ ಭಾರತದ ಹೆಮ್ಮೆ.. ಆಪರೇಷನ್ ಸಿಂಧೂರ ಜಗತ್ತಿಗೆ ಬಿಚ್ಚಿಟ್ಟ ಖುರೇಷಿ ನಮ್ಮವರು..
ಇವರು ತಮ್ಮ ಸೇವಾ ಅವಧಿಯಲ್ಲಿ ಯುದ್ಧಭೂಮಿ ಮಾತ್ರವಲ್ಲದೇ ಈಶಾನ್ಯ ಭಾರತದಲ್ಲಿನ ಪ್ರವಾಹ ಪರಿಹಾರ ಸೇರಿದಂತೆ ಮಾನವೀಯ ಕಾರ್ಯಾಚರಣೆಗಳಲ್ಲಿ ಕೊಡುಗೆ ನೀಡಿದ್ದಾರೆ.
ಖುರೇಷಿಗೆ ಎಷ್ಟು ಸಂಬಳ..?
ವರದಿಗಳ ಪ್ರಕಾರ, ಕರ್ನಲ್ ಶ್ರೇಣಿಯ ಅಧಿಕಾರಿಯ ಮೂಲ ವೇತನ ತಿಂಗಳಿಗೆ ಸುಮಾರು 1,21,200 ರೂಪಾಯಿಯಿಂದ 2,12,400 ರೂ.ಗಳವರೆಗೆ ಇರುತ್ತದೆ. ಅಲ್ಲದೇ ಸರ್ಕಾರದಿಂದ ಅನೇಕ ಭತ್ಯೆಗಳೂ ಸಿಗುತ್ತವೆ.
- ಮಿಲಿಟರಿ ಸೇವಾ ವೇತನ: ತಿಂಗಳಿಗೆ 15,500 ರೂಪಾಯಿ
- ತುಟ್ಟಿ ಭತ್ಯೆ (DA): ಹಣದುಬ್ಬರ ದರಕ್ಕೆ ಅನುಗುಣವಾಗಿ ಬದಲಾಗುತ್ತದೆ
- HRA (ಮನೆ ಬಾಡಿಗೆ ಭತ್ಯೆ): ನಿಯೋಜನೆ ಪ್ರದೇಶದ ಪ್ರಕಾರ
- ಕ್ಷೇತ್ರ ಪ್ರದೇಶ ಭತ್ಯೆ: ಅಪಾಯಕಾರಿ ಪ್ರದೇಶದಲ್ಲಿ ನಿಯೋಜನೆಗೊಂಡರೆ 10,500 ರಿಂದ 25,000 ರೂಪಾಯಿವರೆಗೆ
- ಸಾರಿಗೆ ಭತ್ಯೆ: 3600 ದಿಂದ 7200 ರೂಪಾಯಿ
- ವಿಶೇಷ ಪಡೆ ಭತ್ಯೆ: 25,000 ವರೆಗೆ ಇರಲಿದೆ
- ಸಮವಸ್ತ್ರ ಭತ್ಯೆ: ವಾರ್ಷಿಕವಾಗಿ 20,000 ರೂಪಾಯಿ
ಹಾರಾಟ ಮತ್ತು ಪ್ರತಿ ಕಾರ್ಯಾಚರಣೆಯಲ್ಲಿನ ನಂಬಿಕೆಯ ಇನ್ನೊಂದು ಹೆಸರೇ ವ್ಯೋಮಿಕಾ ಸಿಂಗ್. ಇವರು 21ನೇ ಶಾರ್ಟ್ ಸರ್ವಿಸ್ ಕಮಿಷನ್ (ಮಹಿಳಾ) ಫ್ಲೈಯಿಂಗ್ ಪೈಲಟ್ ಕೋರ್ಸ್ ಅಡಿಯಲ್ಲಿ ಡಿಸೆಂಬರ್ 18, 2004 ರಂದು ವಾಯುಪಡೆಗೆ ಸೇರಿದರು. ಇಲ್ಲಿಯವರೆಗೆ ಅವರು 2,500 ಗಂಟೆಗಳಿಗೂ ಹೆಚ್ಚು ಕಾಲ ಹಾರಾಟವನ್ನು ಪೂರ್ಣಗೊಳಿಸಿದ್ದಾರೆ. ಅದು ಎತ್ತರದ ಪರ್ವತಗಳಾಗಲಿ, ದಟ್ಟವಾದ ಕಾಡುಗಳಾಗಲಿ ಅಥವಾ ಸುಡುವ ಮರುಭೂಮಿಗಳಾಗಲಿ. ವ್ಯೋಮಿಕಾ ಪ್ರತಿಯೊಂದು ಸವಾಲನ್ನೂ ಜಯಿಸಿದ್ದಾರೆ. ‘ಚೇತಕ್’ ಮತ್ತು ‘ಚೀತಾ’ ನಂತಹ ಲಘು ಹೆಲಿಕಾಪ್ಟರ್‌ಗಳನ್ನು ಚಲಾಯಿಸಿದ್ದಾರೆ. ಇವುಗಳನ್ನು ಕಷ್ಟಕರ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. 2017ರಲ್ಲಿ ವಾಯುಪಡೆಯ ಪ್ರಮುಖ ಮತ್ತು ಜವಾಬ್ದಾರಿಯುತ ಶ್ರೇಣಿಯಾದ ವಿಂಗ್ ಕಮಾಂಡರ್ ಹುದ್ದೆಗೆ ಬಡ್ತಿ ನೀಡಲಾಗಿದೆ.
ಇದನ್ನೂ ಓದಿ:ಚೀನಾ ಒಂದೇ ಅಲ್ಲ, ಯುದ್ಧ ನಡೆದ್ರೆ ಪಾಕ್ಗೆ ಯಾರೆಲ್ಲ ಬೆಂಬಲ ಇದೆ? ಭಾರತಕ್ಕೆ ಎಷ್ಟು ಶತ್ರುಗಳಿದ್ದಾರೆ..
ಸಂಬಳ ಎಷ್ಟು..?
ಭಾರತೀಯ ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಹುದ್ದೆಯಲ್ಲಿ ನೇಮಕಗೊಂಡ ಅಧಿಕಾರಿಯೊಬ್ಬರು ತಿಂಗಳಿಗೆ ಸರಿಸುಮಾರು 90,000 ದಿಂದ 1,20,000 ರೂಗಳವರೆಗೆ ಸಂಬಳ ಪಡೆಯುತ್ತಾರೆ.
ವಿಶೇಷ ಸೌಲಭ್ಯಗಳು
- ಸರ್ಕಾರಿ ವಸತಿ ಅಥವಾ ಮನೆ ಬಾಡಿಗೆ ಭತ್ಯೆ
- ಸೇನಾ ವಾಹನ ಮತ್ತು ಚಾಲಕ ಸೌಲಭ್ಯ
- ಉಚಿತ ವೈದ್ಯಕೀಯ ಸೌಲಭ್ಯ
- ಕ್ಲಬ್ ಮತ್ತು ಕ್ಯಾಂಟೀನ್ ಸೌಲಭ್ಯಗಳು
- ಸ್ವಯಂ ಮತ್ತು ಕುಟುಂಬಕ್ಕೆ ಪಿಂಚಣಿ
- ನಿವೃತ್ತಿಯ ಇತರ ಪ್ರಯೋಜನಗಳು
ಇದನ್ನೂ ಓದಿ: ಚೀನಾ ಒಂದೇ ಅಲ್ಲ, ಯುದ್ಧ ನಡೆದ್ರೆ ಪಾಕ್ಗೆ ಯಾರೆಲ್ಲ ಬೆಂಬಲ ಇದೆ? ಭಾರತಕ್ಕೆ ಎಷ್ಟು ಶತ್ರುಗಳಿದ್ದಾರೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ