/newsfirstlive-kannada/media/post_attachments/wp-content/uploads/2024/10/STOLEN-CAR.jpg)
ಕಳ್ಳರ ಕೈಗೆ ಒಂದು ಬಾರಿ ಅನ್ಯರ ವಸ್ತು ಹೋದ್ರೆ ಮುಗಿತು ಅದಕ್ಕೆ ಎಳ್ಳು ನೀರು ಬಿಟ್ಟ ಹಾಗೆಯೇ. ವಾಪಸ್ ಮಾಲೀಕರ ಕೈಗೆ ಸಿಗೋದು ಹೆಚ್ಚು ಕಡಿಮೆ ಕನಸಿನ ಮಾತು ಆದ್ರೆ ರಾಜಸ್ತಾನದ, ಬಿಕನೇರ್​ನಲ್ಲೊಬ್ಬ ಪ್ರಾಮಾಣಿಕ ಕಳ್ಳನೊಬ್ಬ ಸಿಕ್ಕಿದ್ದಾನೆ. ಕದ್ದ ಕಾರನ್ನು 450 ಕಿಲೋ ಮೀಟರ್​ವರೆಗೂ ತೆಗೆದುಕೊಂಡು ಹೋಗಿ, ವಾಪಸ್ ಅದು ಮಾಲೀಕರಿಗೆ ಸಿಗುವಂತೆ ಒಂದು ಪೇಪರ್​ನಲ್ಲಿ ಒಂದಿಷ್ಟು ನೋಟ್ಸ್ ಬರೆದು ಕಾರಿಗೆ ಅಂಟಿಸಿದ್ದಾನೆ. ಇದು ಕಳ್ಳರಿಗೂ ಅಪರೂಪಕ್ಕೆ ಆತ್ಮಸಾಕ್ಷಿ ಮಿಡಿಯುತ್ತದೆ ಎಂಬುದಕ್ಕೆ ನಿದರ್ಶನವಾಗಿದೆ.
ದೆಹಲಿಯಿಂದ ಕಾರನ್ನು ಕದ್ದುಕೊಂಡು ಬಂದ ಕಳ್ಳ ರಾಜಸ್ತಾನದ ಬಿಕನೇರ್​ನಲ್ಲಿ ನಿಲ್ಲಿಸಿ ಅದರ ನಂಬರ್ ಪ್ಲೇಟ್​ನೊಂದಿಗೆ ಎಸ್ಕೇಪ್ ಆಗಿದ್ದಾನೆ. ಕಾರು ಕದ್ದ ಕಳ್ಳನಿಗೆ ನಡುರಸ್ತೆಯಲ್ಲಿ ಪಾಪಪ್ರಜ್ಞೆ ಕಾಡಿದೆಯೋ ಏನೊ ಬಿಕನೇರ್​ನ ನಪಸಾರ್​ ಪಟ್ಟಣದ ಹೆದ್ದಾರಿ ಬಳಿ ಕಾರು ನಿಲ್ಲಿಸಿ ಅದರ ಮೇಲೆ ಮೂರು ಕರಪತ್ರ ಅಂಟಿಸಿ ಹೋಗಿದ್ದಾನೆ. ಮೊದಲ ಕರಪತ್ರದಲ್ಲಿ ಈ ಕಾರನ್ನು ದೆಹಲಿಯ ಪಾಲಮ್​ನಿಂದ ಕದಿಯಲಾಗಿದೆ. ದಯವಿಟ್ಟು ಇದನ್ನು ಪೊಲೀಸರ ಗಮನಕ್ಕೆ ತನ್ನಿ, Sorry ಎಂದು ಬರೆಯಲಾಗಿದ್ದು, ಕಾರಿನ ನಂಬರ್​ನ್ನು ಕೂಡ ಅದರ ಮೇಲೆ ಉಲ್ಲೇಖಿಸಿದ್ದಾನೆ. ಇದು ಪೊಲೀಸರಿಗೆ ಕಾರಿನ ಅಸಲಿ ಮಾಲೀಕರನ್ನು ಪತ್ತೆ ಹಚ್ಚಲು ಸಹಾಯಕವಾಗಿದೆ.
ಮತ್ತೊಂದು ಕರಪತ್ರದಲ್ಲಿ ಐ ಲವ್ ಮೈ ಇಂಡಿಯಾ ಎಂದು ಬರೆದಿರುವ ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ. ಹೀಗೆ ಕರಪತ್ರಗಳನ್ನು ಅಂಟಿಸಿಕೊಂಡು ನಿಂತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ಇದನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.ಪೊಲೀಸರು ಕರಪತ್ರದಲ್ಲಿ ಅಂಟಿಸಲಾಗಿದ್ದ ನಂಬರ್​ನ್ನು ಟ್ರೇಸ್ ಮಾಡಿ ಕಾರಿನ ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದು. ಕಾರ್​ ಮಾಲೀಕರು ಅಕ್ಟೋಬರ್ 10ರಂದು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us