/newsfirstlive-kannada/media/post_attachments/wp-content/uploads/2024/10/SHAMI-1.jpg)
ಬಾರ್ಡರ್-ಗವಾಸ್ಕರ್​ ಟೆಸ್ಟ್​ ಸರಣಿಯಿಂದ ಹೊರಬಿದ್ದ ಬಳಿಕ ವೇಗಿ ಮೊಹಮ್ಮದ್​ ಶಮಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಚೇತರಿಸಿಕೊಳ್ಳುವಲ್ಲಿ ವಿಫಲನಾಗಿರುವುದಕ್ಕೆ ಅಭಿಮಾನಿಗಳು ಹಾಗೂ ಬಿಸಿಸಿಐಗೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ಆದಷ್ಟು ಶೀಘ್ರವಾಗಿ ನಾನು ಚೇತರಿಸಿಕೊಂಡು ರೆಡ್​ ಬಾಲ್​ ಕ್ರಿಕೆಟ್ ಮರಳುತ್ತೇನೆ ಎಂದು ಇನ್​​​ಸ್ಟಾಗ್ರಾಂನಲ್ಲಿ ಬರೆದುಕೊಂಡು ವರ್ಕೌಟ್​ ಮಾಡ್ತಿರೋ ವಿಡಿಯೋವನ್ನ ಪೋಸ್ಟ್​ ಮಾಡಿದ್ದಾರೆ. ಇಂಜುರಿ ನಡುವೆಯೂ 2023ರ ಏಕದಿನ ವಿಶ್ವಕಪ್​ನಲ್ಲಿ ಆಡಿದ್ದ ಶಮಿ, ಟೂರ್ನಿಯ ಬಳಿಕ ಸರ್ಜರಿಗೆ ಒಳಗಾಗಿದ್ರು.
ಇದನ್ನೂ ಓದಿ: Aadhaar ಬಳಕೆದಾರರಿಗೆ ಗುಡ್ ನ್ಯೂಸ್.. ಕೇಂದ್ರದಿಂದ ಪ್ರಮುಖ ನಿರ್ಧಾರ, ಹೊಸ ಅಪ್ಡೇಟ್!
ಇತ್ತೀಚೆಗೆ ಶಮಿ ಮೈದಾನದಲ್ಲಿ ಪ್ರ್ಯಾಕ್ಟೀಸ್ ಮಾಡ್ತಿರುವ ವಿಡಿಯೋ, ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಶಮಿ ಮುಂಬರುವ ಸೀರೀಸ್​ಗಳಲ್ಲಿ ಕಂಬ್ಯಾಕ್ ಮಾಡಲಿದ್ದಾರೆ ಅನ್ಕೊಂಡಿದ್ದರು. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ನಡೆಯುವ ಬಾರ್ಡರ್​ ಗವಾಸ್ಕರ್​ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅಭಿಮಾನಿಗಳ ಆಸೆಗೆ ನಿರಾಸೆಯಾಗಿದೆ.
ಯಾರಿಗೆಲ್ಲ ಸ್ಥಾನ..?
ರೋಹಿತ್ ಶರ್ಮಾ, ಜಸ್​ಪ್ರಿತ್ ಬೂಮ್ರಾ, ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಬ್ ಪಂತ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್, ಆರ್​ ಅಶ್ವಿನ್, ಆರ್​. ಜಡೇಜಾ, ಮೊಹ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ತಂಡದಲ್ಲಿದ್ದಾರೆ. ಮುಕೇಶ್ ಕುಮಾರ್​, ನವದೀಪ್ ಶೈನಿ ಹಾಗೂ ಖಲೀಲ್ ಅಹ್ಮದ್ ಕೂಡ ಆಸ್ಟ್ರೇಲಿಯಾಗೆ ರಿಸರ್ವ್ ಪ್ಲೇಯರ್​ ಆಗಿ ಪ್ರಯಾಣ ಬೆಳಸುತ್ತಿದ್ದಾರೆ.
ಇದನ್ನೂ ಓದಿ: ಸಾಕ್ಸ್ ಧರಿಸದೇ ಬೂಟುಗಳನ್ನು ಹಾಕಲೇಬೇಡಿ! ಎಷ್ಟು ಡೇಂಜರ್ ಅಂದರೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ