newsfirstkannada.com

ಸೌಂದರ್ಯ ಜಗದೀಶ್ ನಿಗೂಢ ಸಾವು.. ರಾತ್ರಿ ಖುಷಿ ಖುಷಿಯಾಗಿದ್ದ ‘ಶ್ರೀಮಂತ’ ಬೆಳಗ್ಗೆ ನೇಣಿಗೆ ಶರಣಾಗಿದ್ದೇಕೆ?

Share :

Published April 14, 2024 at 6:40pm

Update April 14, 2024 at 6:41pm

  ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿಗೆ ಕಂಬನಿ ಮಿಡಿದ ಸ್ಯಾಂಡಲ್​ವುಡ್​

  ದಿಟ್ಟ ನಿರ್ಮಾಪಕ ಬದುಕಿಗೆ ವಿದಾಯ ಹೇಳೋ ನಿರ್ಧಾರ ಮಾಡಿದ್ದು ಏಕೆ?

  ತಡರಾತ್ರಿವರೆಗೂ ಮ್ಯಾಚ್​ ನೋಡಿ ನಾದಿನಿ ಮಗನ ಜೊತೆ ಮಾತನಾಡಿದ್ರು!

ಬೆಂಗಳೂರು: ಸ್ಯಾಂಡಲ್​ವುಡ್ ದಿಲ್​ದಾರ್ ನಿರ್ಮಾಪಕ ಸೌಂದರ್ಯ ಜಗದೀಶ್​ ಬದುಕಿನ ಪುಟಕ್ಕೆ ಅಂತಿಮ ವಿದಾಯ ಹೇಳಿದ್ದಾರೆ. ಎಂತಹ ಕಷ್ಟವಿದ್ರೂ ಫೇಸ್​ ಮಾಡ್ತಿದ್ದ ಜಗದೀಶ್​ ನಿಧನ ಇಡೀ ಕುಟುಂಬಕ್ಕೆ ದಿಗ್ಬ್ರಮೆ ಮೂಡಿಸಿದೆ. ಮನೆಯಲ್ಲಿ ನೀರವ ಮೌನ ಆವರಿಸಿದೆ. ಗಟ್ಟಿ ಮನುಷ್ಯ ದಿಟ್ಟ ನಿರ್ಮಾಪಕ ಬದುಕಿಗೆ ವಿದಾಯ ಹೇಳೋ ನಿರ್ಧಾರ ಮಾಡಿದ್ದೇಕೆ ಎಂಬ ಗೊಂದಲ ಶುರುವಾಗಿದೆ.

ಖಾಸಗಿ ಆಸ್ಪತ್ರೆಗೆ ದಾಖಲು.. ಚಿಕಿತ್ಸೆ ಫಲಿಸದೇ ಜಗದೀಶ್ ಸಾವು!

ಹೌದು ಭಾನುವಾರ ಬೆಳಗ್ಗೆ 9 ಗಂಟೆ ಸಮಯ. ನಿರ್ಮಾಪಕ ಸೌಂದರ್ಯ ಜಗದೀಶ್​ ಮಹಾಲಕ್ಷ್ಮೀ ಲೇಔಟ್​ನಲ್ಲಿರುವ ತಮ್ಮ ಮನೆಯಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಯತ್ನ ಮಾಡಿದ್ರು. ಮನೆಯವರು ಜಗದೀಶ್​ರನ್ನ ಆಸ್ಪತ್ರೆಗೆ ದಾಖಲಿಸಿದ್ರು, ಯಾವುದೇ ಪ್ರಯೋಜನವಾಗಿಲ್ಲ. ಯಾಕಂದ್ರೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸೌಂದರ್ಯ ಜಗದೀಶ್​ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅದೇನು ನೋವಿತ್ತು.. ಅದ್ಯಾವ ಬೇಸರವಿತ್ತೋ ಗೊತ್ತಿಲ್ಲ. ಸೂರ್ಯ ಉದಯಿಸಿದ ಕೆಲ ಗಂಟೆಗಳಲ್ಲೇ ಸೌಂದರ್ಯ ಜಗದೀಶ್ ಜೀವಜ್ಯೋತಿ ನಂದಿ ಹೋಗಿತ್ತು. ಆರಂಭದಲ್ಲಿ ಇದು ಸೂಸೈಡಾ? ಅಥವಾ ಹೃದಯಾಘಾತನಾ ಅನ್ನೋ ಅನುಮಾನಗಳು ಮೂಡಿದ್ರು, ಕೊನೆಗೆ ಜಗದೀಶ್​ ಆಪ್ತ ಸ್ಮೇಹಿತ ಶ್ರೇಯಸ್ ಎಲ್ಲ ಪ್ರಶ್ನೆಗಳಿಗೆ ತೆರೆ ಎಳೆದ್ರು. ಜಗದೀಶ್ ಸಾವು ಆತ್ಮಹತ್ಯೆಯೇ ಅಂತ ಸ್ಪಷ್ಟನೆ ಕೊಟ್ಟರು. ಬೆಳಗ್ಗೆ 9 ಗಂಟೆ ಹೊತ್ತಿಗೆ ಜಗದೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಯತ್ನಿಸಿದ್ದಾರೆ. ಆದ್ರೆ, ಪ್ರಾಣ ಹೋಗುವ ಮುನ್ನ ಜಗದೀಶ್ ಮನೆಯವರು ನೋಡಿ ಆಸ್ಪತ್ರೆ ಕರ್ಕೊಂಡು ಬಂದಿದ್ದಾರೆ. ಆಸ್ಪತ್ರೆಗೆ ತಂದ ಬಳಿಕ ವೈದ್ಯರು ಉಸಿರು ನಿಂತಿರೋ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಇಡೀ ಕುಟುಂಬಕ್ಕೆ ದಿಗ್ಭ್ರಮೆ ಮೂಡಿದಂತಾಗಿದೆ.

ತಡರಾತ್ರಿವರೆಗೂ ಮ್ಯಾಚ್​ ನೋಡಿದ್ರು! ನಾದಿನಿ ಮಗನ ಜೊತೆ ಮಾತನಾಡಿದ್ರು!

ಶನಿವಾರ ರಾತ್ರಿ 11.30 ವರೆಗೂ ಜಗದೀಶ್ ಕ್ರಿಕೆಟ್ ನೋಡಿದ್ದಾರಂತೆ. ಅಷ್ಟೆ ಅಲ್ಲದೇ ಮದುವೆ ವಿಚಾರವಾಗಿ ಜರ್ಮನಿಯಲ್ಲಿರೋ ನಾದಿನಿ ಮಗನ ಜೊತೆ ಫೋನ್​ನಲ್ಲೂ ಮಾತನಾಡಿದ್ರಂತೆ. ದುರಂತ ಏನಂದ್ರೆ ಭಾನುವಾರ ಬೆಳಗ್ಗೆ ಜಗದೀಶ್ ಮನೆಯವರೆಲ್ಲ ಜರ್ಮನಿಯಲ್ಲಿರುವ ನಾದಿನಿ ಮಗನಿಗಾಗಿ ಹೆಣ್ಣು ನೋಡೋದಕ್ಕೆ ಅಂತ ಹೋಗ್ಬೆಕಿತ್ತು. ಇದೇ ಕಾರಣಕ್ಕೆ ಜಗದೀಶ್​ ನಾದಿನಿ ಮನೆಯವರು ಮಹಾಲಕ್ಷ್ಮೀ ಲೇಔಟ್​ನಲ್ಲಿರುವ ಮನೆಗೆ ಬಂದಾಗ, ಜಗದೀಶ್​ ಮನೆಯ ಅಡುಗೆ ಕೋಣೆಯಲ್ಲಿ ನೇಣಿಗೆ ಕೊರಳೊಡ್ಡಿದ್ರು. ತಕ್ಷಣವೇ ಮನೆಯವರೆಲ್ಲ ಸೇರಿ ಹತ್ತಿರದ ಸುಗುಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅಷ್ಟೋತಿಗಾಗಲೇ ಜಗದೀಶ್​ ದೇಹದಲ್ಲಿ ಜೀವ ಇರಲಿಲ್ಲ. ಯಾರನ್ನೇ ಕೇಳಿದ್ರೂ ಜಗದೀಶ್ ಒಳ್ಳೆ ವ್ಯಕ್ತಿ. ಎಲ್ಲರ ಜೊತೆ ಒಡನಾಟ ಹೊಂದಿದ್ದ ಮನುಷ್ಯ ಸಡನ್ ಆಗಿ ಯಾಕೆ ಹೀಗ್ ಮಾಡ್ಕೊಂಡ ಅಂತ ಅಚ್ಚರಿಗೊಂಡಿದ್ದಾರೆ. ಹೀಗಾಗಿ ಜಗದೀಶ್​ ಆತ್ಮಹತ್ಯೆಗೆ ಕಾರಣ ನಿಗೂಢವಾಗಿದ್ರೂ ಒಂದಷ್ಟು ವಿಚಾರಗಳು ಜಗದೀಶ್​​ರನ್ನ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ವು ಅನ್ನೋದು ಬಲ ಮೂಲಗಳಿಂದ ಬಂದಿರೋ ಮಾಹಿತಿ.

ಸೌಂದರ್ಯ ಜಗದೀಶ್ ಮಾಡಿದ್ದು ಒಂದೆರಡು ಸಿನಿಮಾಗಳು. ಆದ್ರೆ ಮಾಡಿದ ಸಿನಿಮಾಗಳು ಯಾವುದು ಕೈ ಹಿಡಿದಿರಲಿಲ್ಲ. ಇಂಥಾ ಸಂದರ್ಭದಲ್ಲಿ ಜಗದೀಶ್ ಬ್ಯುಸಿನೆಸ್​​ನಲ್ಲೂ ನಷ್ಟ ಅನುಭವಿಸಿದ್ರಂತೆ. ಇದ್ರ ಜೊತೆಗೆ ಕೆಲ ದಿನಗಳ ಹಿಂದೆ ರಾಜಾಜಿನಗರದ 5 ಮತ್ತು 6 ನೇ ಬ್ಲಾಕ್​​ನಲ್ಲಿರೋ ಮನೆಯನ್ನ ಸೀಜ್ ಮಾಡಲಾಗಿತ್ತಂತೆ. ಈ ವಿಚಾರಗಳು ಜಗದೀಶ್​ ತಲೆಯಲ್ಲಿ ಕೊರಿತೀತ್ತಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಇನ್ನೊಂದೆಡೆ ಸೌಂದರ್ಯ ಜಗದೀಶ್​ ಅತ್ತೆ ಕೆಲ ದಿನಗಳ ಹಿಂದಷ್ಟೆ ಸಾವನ್ನಪ್ಪಿದ್ರು. ಇದರ ಜೊತೆಗೆ ಜಗದೀಶ್ ಒಡೆತನದ ಜೆಟ್​ಲ್ಯಾಗ್​ ಹೋಟೆಲ್ ಕಾಟೇರ ಸಕ್ಸಸ್ ಪಾರ್ಟಿಯಿಂದ ವಿವಾದಕ್ಕೆ ಕಾರಣವಾಗಿತ್ತು. ಅಲ್ಲೂ ಸೌಂದರ್ಯ ಜಗದೀಶ್ ಹೆಸರು ತಳುಕು ಹಾಕಿಕೊಂಡಿತ್ತು. ಪರಿಣಾಮ ಬರೋಬ್ಬರಿ 15 ದಿನಗಳ ಕಾಲ ಜೆಟ್​ಲ್ಯಾಗ್ ಹೋಟೆಲ್​ನನ್ನ ಮುಚ್ಚಲಾಗಿತ್ತು. ಇದಾದ ಬಳಿಕ ಹೋಟೆಲ್​ನಲ್ಲಿ ಬ್ಯುಸಿನೆಸ್​ ಸಿಕ್ಕಾಪಟ್ಟೆ ಕಮ್ಮಿಯಾಗ್ತಿತ್ತಂತೆ. ಹೀಗಾಗಿ ಇದು ಕೂಡ ಜಗದೀಶ್ ಆತ್ಮಹತ್ಯೆಗೆ ಕಾರಣವಾಯ್ತಾ ಅನ್ನೋ ಪ್ರಶ್ನೆ ಕಾಡ್ತಿರೋದಂತು ಸುಳ್ಳಲ್ಲ. ಇನ್ನು, ಸೌಂದರ್ಯ ಜಗದೀಶ್ ಮಗ ಸ್ನೇಹಿತ್​ ಕೂಡ ವಿವಾದಕ್ಕೆ ಕಾರಣವಾಗಿದ್ದ. ಮೂರು ವರ್ಷದ ಹಿಂದೆ ನಡೆದಿದ್ದ ಸ್ನೇಹಿತ್ ಗಲಾಟೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಪಕ್ಕದ ಮನೆ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸ್ನೇಹಿತ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಇನ್ನೊಂದೆಡೆ ಎರಡು ತಿಂಗಳ ಹಿಂದಷ್ಟೆ ಸೌಂದರ್ಯ ಜಗದೀಶ್ ಮಗಳ ಮದುವೆ ಕೂಡ ಮಾಡಿದ್ರು. ಹೀಗಾಗಿ ಈ ಎಲ್ಲ ವಿಚಾರಗಳು ಜಗದೀಶ್ ಆತ್ಮಹತ್ಯೆಗೆ ಕಾರಣವಾಯ್ತಾ? ಅನ್ನೋದು ಸಧ್ಯಕ್ಕಿರುವ ಯಕ್ಷ ಪ್ರಶ್ನೆ.

ಸೌಂದರ್ಯ ಜಗದೀಶ್ ನಿಧನ.. ಸ್ಯಾಂಡಲ್​ವುಡ್​ ಮಂದಿ ಭಾವುಕ!

ಜಗದೀಶ್ ಯಾವುದೇ ತರಹದ ನೋವು ತೋರಿಸಿಕೊಳ್ತಿಲ್ಲ. ಏನೇ ಬಂದ್ರು ದಿಲ್​ದಾರರಾಗಿ ಫೇಸ್ ಮಾಡ್ತಿದ್ರು. ಆದ್ರೆ ಇಂಥಾ ದಿಲ್​ದಾರ್ ಮನುಷ್ಯ ಏಕಾಏಕಿ ಆತ್ಮಹತ್ಯೆಗೆ ಶರಣಾಗಿರೋದು ಸ್ಯಾಂಡಲ್​ವುಡ್ ಮಂದಿಗೆ ಬಿಗ್ ಶಾಕ್ ನೀಡಿದೆ. ಈ ವಿಚಾರ ಗೊತ್ತಾಗುತ್ತಲೇ ನಟ ಪ್ರೇಮ್ ಪತ್ನಿ ಸಮೇತ ಸುಗುಣ ಆಸ್ಪತ್ರೆಗೆ ಭೇಟಿ ನೀಡಿ ಜಗದೀಶ್​ ಕುಟುಂಬಕ್ಕೆ ಧೈರ್ಯ ತುಂಬಿದ್ರು. ಬಳಿಕ ಮಾತನಾಡಿದ ನಟ ಪ್ರೇಮ್, ನಾಳೆ ಮನೆಗೆ ಬನ್ನಿ ಮೀಟ್ ಮಾಡೋಣ ಅಂದಿದ್ರು. ಆದ್ರೆ ಬೆಳಗ್ಗೆ ಅವರ ಸಾವಿನ ಸುದ್ದಿ ಕೇಳಿ ಶಾಕ್ ಆಯ್ತು. ಜಗದೀಶ್ ಕಷ್ಟ ಅಂತ ಬಂದ್ರೆ ಎಲ್ಲರಿಗೂ ಸಹಾಯ ಮಾಡ್ತಿದ್ರು. ಅಪರೂಪದ ಸ್ನೇಹ ಕಳೆದುಕೊಂಡು ತುಂಬಾ ದುಃಖ ಆಗ್ತಿದೆ ಎಂದ್ರು.

ಇನ್ನು ನಟಿ ಅಮೂಲ್ಯ ಕೂಡ ಜಗದೀಶ್ ಸಾವಿಗೆ ಸಂತಾಪ ಸೂಚಿಸಿದ್ರು, ಜಗದೀಶ್ ಅವರು ನಮಗೆ ತುಂಬಾ ಅಪ್ತರು, ಅವರು ಆತ್ಮಹತ್ಯೆ ಸುದ್ದಿ ನನಗೆ ತುಂಬಾ ಶಾಕ್ ನೀಡಿದೆ ಅಂತೇಳಿದ್ರು. ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ ಕೂಡ ಜಗದೀಶ್ ಸಾವಿಗೆ ವಿಷಾಧ ವ್ಯಕ್ತಪಡಿಸಿದ್ರು, ಅವ್ರು ತುಂಬಾ ಜಂಟಲ್ ಮನ್ ಅವ್ರಿಗೆ ಹೀಗೆ ಆಗುತ್ತೆ ಅಂದುಕೊಂಡಿರಲಿಲ್ಲ. ಅವರ ವೈಯಕ್ತಿಕ ನೋವುಗಳು ಏನಿತ್ತು ಅಂತಾ ನಮಗೆ ಗೊತ್ತಿಲ್ಲ. ಇಂಡಸ್ಟ್ರಿಗೆ ಒಂದೊಳ್ಳೆ ಕೊಡುಗೆ ಕೊಟ್ಟಿದ್ದಾರೆ ಅಂತ ಹೇಳಿದ್ರು. ಅದೇನೆ ಹೇಳಿ ಸ್ಯಾಂಡಲ್​ವುಡ್​ ದಿಲ್​ದಾರ್ ನಿರ್ಮಾಪಕ ಅಂತಾನೇ ಗುರುತಿಸಿಕೊಂಡಿದ್ದ ಸೌಂದರ್ಯ ಜಗದೀಶ್ ಸಾವು ನಿಜಕ್ಕೂ ಇಂಡಸ್ಟ್ರಿಗೆ ದೊಡ್ಡ ಶಾಕ್ ನೀಡಿದೆ. ಸಿನಿಮಾ ರಂಗದಲ್ಲಿ ಇಷ್ಟೆಲ್ಲ ಸ್ನೇಹಿತರ ಬಳಗ ಪಡೆದಿರೋ ಜಗದೀಶ್ ದುಡುಕಿನ ನಿರ್ಧಾರ ಕೈಗೊಂಡಿರೋದು ನಿಜಕ್ಕೂ ದುರಂತವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೌಂದರ್ಯ ಜಗದೀಶ್ ನಿಗೂಢ ಸಾವು.. ರಾತ್ರಿ ಖುಷಿ ಖುಷಿಯಾಗಿದ್ದ ‘ಶ್ರೀಮಂತ’ ಬೆಳಗ್ಗೆ ನೇಣಿಗೆ ಶರಣಾಗಿದ್ದೇಕೆ?

https://newsfirstlive.com/wp-content/uploads/2024/04/jagadish1.jpg

Load More