newsfirstkannada.com

ಸ್ಯಾಂಡಲ್‌ವುಡ್‌ಗೆ ಶಾಕ್ ಕೊಟ್ಟ ಸೌಂದರ್ಯ ಜಗದೀಶ್ ಸಾವು; ಆತ್ಮಹತ್ಯೆ ನಿರ್ಧಾರ ಮಾಡಿದ್ದೇಕೆ?

Share :

Published April 14, 2024 at 9:41pm

  ಚನ್ನರಾಯಪಟ್ಟಣದ ಸಾಯಿ ಬಾಬಾ ಫಾರ್ಮ್‌ಹೌಸ್‌ನಲ್ಲಿ ಅಂತಿಮ ದರ್ಶನ

  ನಾಳೆವರೆಗೂ ಸೌಂದರ್ಯ ಜಗದೀಶ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

  FSLಗೆ ರವಾನಿಸಿ ಮೊಬೈಲ್ ಡೇಟಾ ರಿಟ್ರೀವಲ್ ಮಾಡಿಸಿ ತನಿಖೆಗೆ ರವಾನೆ

ಬೆಂಗಳೂರು: ಸ್ಯಾಂಡಲ್​ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್​ ಬದುಕಿನ ಪುಟಕ್ಕೆ ಅಂತಿಮ ವಿದಾಯ ಹೇಳಿದ್ದಾರೆ. ಎಷ್ಟೇ ಕಷ್ಟ ಬಂದರೂ ಫೇಸ್​ ಮಾಡ್ತಿದ್ದ ಜಗದೀಶ್​ ನಿಧನ ಇಡೀ ಕುಟುಂಬಕ್ಕೆ ದಿಗ್ಬ್ರಮೆ ಮೂಡಿಸಿದೆ. ಮನೆಯಲ್ಲಿ ನೀರವ ಮೌನ ಆವರಿಸಿದೆ. ಗಟ್ಟಿ ಮನುಷ್ಯ ದಿಟ್ಟ ನಿರ್ಮಾಪಕ ಬದುಕಿಗೆ ವಿದಾಯ ಹೇಳೋ ನಿರ್ಧಾರ ಮಾಡಿದ್ದೇಕೆ ಎಂಬ ಅನುಮಾನ ಶುರುವಾಗಿದೆ.

ಪ್ರೊಡ್ಯೂಸರ್ ಜೊತೆಗೆ ಬಿಲ್ಡರ್. ಜೆಟ್​ಲ್ಯಾಗ್​ ಮಾಲೀಕರು ಆಗಿರೋ ಸೌಂದರ್ಯ ಜಗದೀಶ್ ಜೀವನದ ಜಂಜಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವತ್ತು ಬೆಳಗ್ಗೆ ನಿರ್ಮಾಪಕ ಸೌಂದರ್ಯ ಜಗದೀಶ್​ ಮಹಾಲಕ್ಷ್ಮೀ ಲೇಔಟ್​ನಲ್ಲಿರುವ ತಮ್ಮ ಮನೆಯಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಯತ್ನ ಮಾಡಿದ್ರು. ಮನೆಯವರು ಜಗದೀಶ್​ರನ್ನ ಆಸ್ಪತ್ರೆಗೆ ದಾಖಲಿಸಿದ್ರು, ಯಾವುದೇ ಪ್ರಯೋಜನವಾಗಿಲ್ಲ. ಯಾಕಂದ್ರೆ ಆಸ್ಪತ್ರೆಗೆ ತಂದ ಬಳಿಕ ವೈದ್ಯರು ಉಸಿರು ನಿಂತಿರೋ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಫಿಲಿಪ್ ಸಾಲ್ಟ್ ಭರ್ಜರಿ ಬ್ಯಾಟಿಂಗ್‌.. ಕೋಲ್ಕತ್ತಾ ವಿರುದ್ಧ ಕನ್ನಡಿಗ ಕೆ.ಎಲ್‌ ರಾಹುಲ್ ಪಡೆಗೆ ಹೀನಾಯ ಸೋಲು

ಅಪ್ಪು ಪಪ್ಪು ಮೂಲಕ ಮಗನನ್ನು ಇಂಡಸ್ಟ್ರಿಗೆ ಪರಿಚಯಿಸಿದ್ದ ಸೌಂದರ್ಯ ಜಗದೀಶ್, ಸ್ನೇಹಿತರು, ರಾಮ್​ಲೀಲಾ, ಮಸ್ತ್‌ ಮಜಾ ಮಾಡಿ ಚಿತ್ರಗಳನ್ನ ನಿರ್ಮಾಣ ಕೂಡ ಮಾಡಿದ್ರು. ಅಷ್ಟಾಗಿ ಸಿನಿಮಾಗಳು ಕೈ ಹಿಡಿಯದೇ ಇದ್ರೂ ಕೂಡ ಸ್ಯಾಂಡಲ್‌ವುಡ್‌ ಮಂದಿ ಜಗದೀಶ್ ಕೈ ಬಿಟ್ಟಿರಲಿಲ್ಲ. ದೊಡ್ಡ ದೊಡ್ಡ ಸ್ಟಾರ್ ಬಳಗದಲ್ಲಿ ಜಗದೀಶ್ ಗುರುತಿಸಿಕೊಂಡಿದ್ರು. ನಿನ್ನೆ ರಾತ್ರಿ ಮದುವೆ ವಿಚಾರವಾಗಿ ಜರ್ಮನಿಯಲ್ಲಿರೋ ನಾದಿನಿ ಮಗನ ಜೊತೆ ಫೋನ್‌ನಲ್ಲಿ ಮಾತನಾಡಿದ್ರಂತೆ. ದುರಂತ ಏನಂದ್ರೆ ಭಾನುವಾರ ಬೆಳಗ್ಗೆ ಜಗದೀಶ್ ಮನೆಯವರೆಲ್ಲ ಜರ್ಮನಿಯಲ್ಲಿರುವ ನಾದಿನಿ ಮಗನಿಗಾಗಿ ಹೆಣ್ಣು ನೋಡೋದಕ್ಕೆ ಅಂತ ಹೋಗ್ಬೆಕಿತ್ತು. ಇದೇ ಕಾರಣಕ್ಕೆ ಜಗದೀಶ್​ ನಾದಿನಿ ಮನೆಯವರು ಮಹಾಲಕ್ಷ್ಮೀ ಲೇಔಟ್​ನಲ್ಲಿರುವ ಮನೆಗೆ ಬಂದಾಗ, ಜಗದೀಶ್ ನೇಣಿಗೆ ಕೊರಳೊಡ್ಡಿದ್ರು. ನಿರ್ಮಾಪಕ ಜಗದೀಶ್ ಆತ್ಮಹತ್ಯೆಗೆ ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ ಸುರೇಶ್, ನಟಿ ಅಮೂಲ್ಯ ಕಂಬನಿ ಮಿಡಿದಿದ್ದಾರೆ. ನಿರ್ಮಾಪಕ ಸಾವಿನ ವಿಚಾರ ಗೊತ್ತಾಗುತ್ತಲೇ ನಟ ಪ್ರೇಮ್ ಪತ್ನಿ ಸಮೇತ ಸುಗುಣ ಆಸ್ಪತ್ರೆಗೆ ಭೇಟಿ ನೀಡಿ ಜಗದೀಶ್​ ಕುಟುಂಬಕ್ಕೆ ಧೈರ್ಯ ತುಂಬಿದ್ರು.

ಹಲವು ಅನುಮಾನ.. ಖಿನ್ನತೆಯೋ ಇಲ್ಲ ಆರ್ಥಿಕ ಸಂಕಷ್ಟವೋ

ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅತ್ತೆಯ ಸಾವಿನ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಜಗದೀಶ್, ಇತ್ತೀಚೆಗೆ ತೀವ್ರ ಆರ್ಥಿಕ ಸಂಕಷ್ಟಕ್ಕೂ ಗುರಿಯಾಗಿದ್ದರು. ಹಲವು ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದ ಜಗದೀಶ್‌ಗೆ, ಕೆಲವೊಂದು ಪ್ರಾಪರ್ಟಿಗಳಿಗೆ ಬ್ಯಾಂಕ್​ನವರು ನೋಟಿಸ್ ಕೂಡ ಕೊಟ್ಟಿದ್ರು. ಅಷ್ಟೇ ಅಲ್ಲದೇ, ಜಗದೀಶ್ ಒಡೆತನದ ಜೆಟ್​ಲ್ಯಾಗ್​ ಹೋಟೆಲ್ ಕಾಟೇರ ಸಕ್ಸಸ್ ಪಾರ್ಟಿಯಿಂದ ವಿವಾದಕ್ಕೆ ಕಾರಣವಾಗಿತ್ತು. ಅಲ್ಲೂ ಸೌಂದರ್ಯ ಜಗದೀಶ್ ಹೆಸರು ತಳುಕು ಹಾಕಿಕೊಂಡಿತ್ತು. ಪರಿಣಾಮ ಬರೋಬ್ಬರಿ 15 ದಿನಗಳ ಕಾಲ ಜೆಟ್​ಲ್ಯಾಗ್ ಹೋಟೆಲ್​ನನ್ನ ಮುಚ್ಚಲಾಗಿತ್ತು. ಇದಾದ ಬಳಿಕ ಹೋಟೆಲ್​ನಲ್ಲಿ ಬ್ಯುಸಿನೆಸ್​ ಸಿಕ್ಕಾಪಟ್ಟೆ ಕಮ್ಮಿಯಾಗ್ತಿತ್ತಂತೆ. ಸದ್ಯ ಜಗದೀಶ್‌ಗೆ ಸಂಬಂಧಪಟ್ಟ ಎರಡು ಮೊಬೈಲ್‌ಗಳನ್ನ ಮಹಾಲಕ್ಷ್ಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದು, FSLಗೆ ರವಾನಿಸಿ ಮೊಬೈಲ್ ಡೇಟಾ ರಿಟ್ರೀವಲ್ ಮಾಡಿಸಿ ತನಿಖೆಗೆ ಮುಂದಾಗಿದ್ದಾರೆ.

ನಿರ್ಮಾಪಕ ಸೌಂದರ್ಯ ಜಗದೀಶ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ಸೇರಿದಂತೆ ಹಲವು ಅಂತಿಮ ದರ್ಶನ ಪಡೆದಿದ್ದಾರೆ. ನಾಳೆ ಹಾಸನದ ಚನ್ನರಾಯಪಟ್ಟಣದ ಸಾಯಿ ಬಾಬಾ ಫಾರ್ಮ್‌ಹೌಸ್‌ನಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ. ಸೌಂದರ್ಯ ಜಗದೀಶ್ ಸಾವು ನಿಜಕ್ಕೂ ಇಂಡಸ್ಟ್ರಿಗೆ ದೊಡ್ಡ ಶಾಕ್ ನೀಡಿದೆ. ಸಿನಿಮಾ ರಂಗದಲ್ಲಿ ಇಷ್ಟೆಲ್ಲ ಸ್ನೇಹಿತರ ಬಳಗ ಪಡೆದಿರೋ ಜಗದೀಶ್ ದುಡುಕಿನ ನಿರ್ಧಾರ ಕೈಗೊಂಡಿರೋದು ನಿಜಕ್ಕೂ ದುರಂತವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಯಾಂಡಲ್‌ವುಡ್‌ಗೆ ಶಾಕ್ ಕೊಟ್ಟ ಸೌಂದರ್ಯ ಜಗದೀಶ್ ಸಾವು; ಆತ್ಮಹತ್ಯೆ ನಿರ್ಧಾರ ಮಾಡಿದ್ದೇಕೆ?

https://newsfirstlive.com/wp-content/uploads/2024/04/jagadish4.jpg

Load More