/newsfirstlive-kannada/media/post_attachments/wp-content/uploads/2024/04/Soundarya-Jagadish.jpg)
ಸ್ಯಾಂಡಲ್‌ವುಡ್ ನಿರ್ದೇಶಕ ಸೌಂದರ್ಯ ಜಗದೀಶ್ ಅವರ ಪಾರ್ಥಿವ ಶರೀರಕ್ಕೆ ಮನೆಯವರಿಂದ ಅಂತಿಮ ಪೂಜೆ ಮಾಡಿದ್ದಾರೆ. ಈ ವೇಳೆ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ. ಪುತ್ರಿ ಸೌಂದರ್ಯ ಹಾಗು ಪುತ್ರ ಸ್ನೇಹಿತ್ ಕಣ್ಣೀರು ಹಾಕಿದ್ದಾರೆ.
ಸೌಂದರ್ಯ ಜಗದೀಶ್ ಮೃತ ದೇಹವನ್ನು ಹಿರಿಸಾವೆ ಕಡೆಗೆ ಕೊಂಡೊಯ್ಯಲಾಗುತ್ತಿದೆ. ಚಿರಶಾಂತಿ ವಾಹನದಲ್ಲಿ ಜಗದೀಶ್ ಮೃತದೇಹ ತೆಗೆದುಕೊಂಡು ಹೋಗಲಾಗುತ್ತಿದೆ. ಅದಕ್ಕೂ ಮುಂಚೆ ನಿವಾಸದಲ್ಲಿ ಅಂತಿಮ ಪೂಜೆ ಮಾಡಲಾಯಿತು.
ಇದನ್ನೂ ಓದಿ: ಇಂದು ಸೌಂದರ್ಯ ಜಗದೀಶ್ ಅಂತ್ಯಕ್ರಿಯೆ.. ಹತ್ತಾರು ಅನುಮಾನಕ್ಕೆ ಕಾರಣವಾಯ್ತು ನಿರ್ಮಾಪಕನ ಸಾವು
ಹಾಸನ ಹೈವೇದಲ್ಲಿರುವ ಜಗದೀಶ್ ಅವರ ಫಾರ್ಮ್ ಹೌಸ್ನಲ್ಲಿ ಅಂತ್ಯಕ್ರಿಯೆ ಮಾಡಲಿದ್ದಾರೆ. ಮಧ್ಯಾಹ್ನ 12ರ ನಂತರ ಅಂತ್ಯಕ್ರಿಯೆ ನೆರವೇರಲಿದೆ. ಪತ್ನಿ ರೇಖಾ, ಪುತ್ರಿ ಸೌಂದರ್ಯ ಹಾಗೂ ಪುತ್ರ ಸ್ನೇಹಿತ್ರನ್ನು ಜಗದೀಶ್ ಅಹಲಿದ್ದಾರೆ.
ನೇಣಿಗೆ ಕೊರಳೊಡ್ಡಿದ ಸೌಂದರ್ಯ ಜಗದೀಶ್
ಪ್ರೊಡ್ಯೂಸರ್ ಜೊತೆಗೆ ಬಿಲ್ಡರ್, ಜೆಟ್ಲ್ಯಾಗ್ ಮಾಲೀಕರು ಆಗಿರೋ ಸೌಂದರ್ಯ ಜಗದೀಶ್ ಜೀವನದ ಜಂಜಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವತ್ತು ಬೆಳಗ್ಗೆ ನಿರ್ಮಾಪಕ ಸೌಂದರ್ಯ ಜಗದೀಶ್ ಮಹಾಲಕ್ಷ್ಮೀ ಲೇಔಟ್ನಲ್ಲಿರುವ ತಮ್ಮ ಮನೆಯಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಯತ್ನ ಮಾಡಿದ್ರು. ಮನೆಯವರು ಜಗದೀಶ್ರನ್ನ ಆಸ್ಪತ್ರೆಗೆ ದಾಖಲಿಸಿದ್ರು, ಯಾವುದೇ ಪ್ರಯೋಜನವಾಗಿಲ್ಲ. ಯಾಕಂದ್ರೆ ಆಸ್ಪತ್ರೆಗೆ ತಂದ ಬಳಿಕ ವೈದ್ಯರು ಉಸಿರು ನಿಂತಿರೋ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಪ್ಪು ಪಪ್ಪು ಮೂಲಕ ಮಗನನ್ನು ಇಂಡಸ್ಟ್ರಿಗೆ ಪರಿಚಯಿಸಿದ್ದ ಸೌಂದರ್ಯ ಜಗದೀಶ್, ಸ್ನೇಹಿತರು, ರಾಮ್ಲೀಲಾ, ಮಸ್ತ್ ಮಜಾ ಮಾಡಿ ಚಿತ್ರಗಳನ್ನ ನಿರ್ಮಾಣ ಕೂಡ ಮಾಡಿದ್ರು. ಅಷ್ಟಾಗಿ ಸಿನಿಮಾಗಳು ಕೈ ಹಿಡಿಯದೇ ಇದ್ರೂ ಕೂಡ ಸ್ಯಾಂಡಲ್‌ವುಡ್ ಮಂದಿ ಜಗದೀಶ್ ಕೈ ಬಿಟ್ಟಿರಲಿಲ್ಲ. ದೊಡ್ಡ ದೊಡ್ಡ ಸ್ಟಾರ್ ಬಳಗದಲ್ಲಿ ಜಗದೀಶ್ ಗುರುತಿಸಿಕೊಂಡಿದ್ರು. ನಿನ್ನೆ ರಾತ್ರಿ ಮದುವೆ ವಿಚಾರವಾಗಿ ಜರ್ಮನಿಯಲ್ಲಿರೋ ನಾದಿನಿ ಮಗನ ಜೊತೆ ಫೋನ್‌ನಲ್ಲಿ ಮಾತನಾಡಿದ್ರಂತೆ. ದುರಂತ ಏನಂದ್ರೆ ಭಾನುವಾರ ಬೆಳಗ್ಗೆ ಜಗದೀಶ್ ಮನೆಯವರೆಲ್ಲ ಜರ್ಮನಿಯಲ್ಲಿರುವ ನಾದಿನಿ ಮಗನಿಗಾಗಿ ಹೆಣ್ಣು ನೋಡೋದಕ್ಕೆ ಅಂತ ಹೋಗ್ಬೆಕಿತ್ತು. ಇದೇ ಕಾರಣಕ್ಕೆ ಜಗದೀಶ್ ನಾದಿನಿ ಮನೆಯವರು ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಮನೆಗೆ ಬಂದಾಗ, ಜಗದೀಶ್ ನೇಣಿಗೆ ಕೊರಳೊಡ್ಡಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ