Advertisment

Ganguly Car Accident : ಭೀಕರ ಅಪಘಾತದಿಂದ ದಾದಾ ಕೂದಲೆಳೆ ಅಂತರದಲ್ಲಿ ಪಾರು

author-image
Ganesh
Updated On
Ganguly Car Accident : ಭೀಕರ ಅಪಘಾತದಿಂದ ದಾದಾ ಕೂದಲೆಳೆ ಅಂತರದಲ್ಲಿ ಪಾರು
Advertisment
  • ರಾಷ್ಟ್ರಿಯ ಹೆದ್ದಾರಿಯಲ್ಲಿ ಗಂಗೂಲಿ ಕಾರು ಅಪಘಾತ
  • ಏಕಾಏಕಿ ಕಾರಿಗೆ ಅಡ್ಡ ಬಂದ ಟ್ರಕ್, ಆಮೇಲೆ ಏನಾಯ್ತು?
  • ವಿವಿ ಕಾರ್ಯಕ್ರಮಕ್ಕೆ ಹೋಗ್ತಿದ್ದ ಸೌರವ್ ಗಂಗೂಲಿ

ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ (Sourav Ganguly ) ಭೀಕರ ರಸ್ತೆ ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಅವರ ಕಾರು ದುರ್ಗಾಪುರ ಎಕ್ಸ್‌ಪ್ರೆಸ್‌ವೇಯಲ್ಲಿ (Durgapur Express) ಅಪಘಾತಕ್ಕೆ ಒಳಗಾಗಿದೆ. ಮಾಜಿ ಬಿಸಿಸಿಐ ಅಧ್ಯಕ್ಷರಿಗೆ ಯಾವುದೇ ಗಾಯವಾಗಿಲ್ಲ.

Advertisment

ವರದಿಗಳ ಪ್ರಕಾರ, ಸೌರವ್ ಗಂಗೂಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬುರ್ದ್ವಾನ್‌ಗೆ ಹೋಗುತ್ತಿದ್ದರು. ದುರ್ಗಾಪುರ ಎಕ್ಸ್‌ಪ್ರೆಸ್‌ವೇಯಲ್ಲಿ ಬರುವ ದಂತನ್‌ಪುರದಲ್ಲಿ ಟ್ರಕ್ ಒಂದು ಬೆಂಗಾವಲು ಪಡೆಯ ವಾಹನದ ಮುಂದೆ ಬಂದಿದೆ. ಆಗ ಕಾರಿನ ಚಾಲಕ ಬ್ರೇಕ್ ಹಾಕಬೇಕಾಯಿತು. ಪರಿಣಾಮ ಅವರ ಹಿಂದಿದ್ದ ಕಾರುಗಳು ಏಕಾಏಕಿ ಡಿಕ್ಕಿಯಾಗಿವೆ. ಗಂಗೂಲಿಯಿದ್ದ ಕಾರು ಕೂಡ ಅಪಘಾತಕ್ಕೆ ಒಳಗಾಗಿದೆ.

ಈ ಅಪಘಾತದಲ್ಲಿ ಗಂಗೂಲಿ ಮತ್ತು ಅವರ ಬೆಂಗಾವಲು ಪಡೆಗೆ ಯಾವುದೇ ಗಾಯವಾಗಿಲ್ಲ. ಬೆಂಗಾವಲು ಪಡೆಯ ಎರಡು ವಾಹನಗಳಿಗೆ ಸ್ವಲ್ಪ ಹಾನಿಯಾಗಿದೆ. ಅಪಘಾತ ಹಿನ್ನೆಲೆಯಲ್ಲಿ ಗಂಗೂಲಿ ಘಟನಾ ಸ್ಥಳದಲ್ಲಿ ಸುಮಾರು 10 ನಿಮಿಷಗಳ ಕಾಲವಿದ್ದರು. ನಂತರ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಿದ್ದಾರೆ. ಪಶ್ಚಿಮ ಬಂಗಾಳದ ಬುರ್ದ್ವಾನ್ ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ಹೋಗ್ತಿದ್ದಾಗ ದುರ್ಘಟನೆ ನಡೆದಿದೆ.

ಇದನ್ನೂ ಓದಿ: FBIಗೆ ಭಾರತೀಯ ಕಾಶ್​ ಪಟೇಲ್ ಸರದಾರ; ಯಾವ್ದೇ ಗೃಹದಲ್ಲಿದ್ರೂ ಹುಡುಕಿ ಹೊಡೀತಿವಿ ಎಂದ ಟ್ರಂಪ್ ಆಪ್ತ!

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment