newsfirstkannada.com

‘ಗಂಭೀರ್​ ಕೋಚ್ ಆದರೆ..’ ನೂತನ ಕೋಚ್ ಆಯ್ಕೆ ಬಗ್ಗೆ ಗಂಗೂಲಿ ಹೇಳಿದ್ದೇನು?​​

Share :

Published June 2, 2024 at 2:07pm

Update June 2, 2024 at 2:08pm

    ಟಿ20 ವಿಶ್ವಕಪ್ ನಂತರ ದ್ರಾವಿಡ್ ಅಧಿಕಾರಾವಧಿ ಮುಕ್ತಾಯ

    ನೂತನ ಕೋಚ್ ಹುಡುಕಾಟದಲ್ಲಿರುವ ಕ್ರಿಕೆಟ್ ಸಂಸ್ಥೆ ಬಿಸಿಸಿಐ

    ಪಾಂಟಿಂಗ್, ಲ್ಯಾಂಗರ್, ವಿವಿಎಸ್ ಸೇರಿ ಹಲವರಿಂದ ಅರ್ಜಿ ಆಹ್ವಾನ

ಟಿ20 ವಿಶ್ವಕಪ್ ನಂತರ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳುತ್ತಿದೆ. ಹೀಗಾಗಿ ಬಿಸಿಸಿಐ ನೂತನ ಕೋಚ್​​ಗಾಗಿ ಹುಡುಕಾಟ ನಡೆಸುತ್ತಿದೆ. ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಹಲವು ಸ್ಪರ್ಧಿಗಳ ಹೆಸರುಗಳು ಕೇಳಿ ಬಂದಿವೆ. ಅಧಿಕೃತವಾಗಿ ಇನ್ನೂ ಮಾಹಿತಿ ಬಹಿರಂಗಗೊಂಡಿಲ್ಲ.

ರಿಕಿ ಪಾಂಟಿಂಗ್, ಜಸ್ಟಿಲ್ ಲ್ಯಾಂಗರ್, ವಿವಿಎಸ್ ಲಕ್ಷ್ಮಣ್ ಮತ್ತು ಸ್ಟೀಫನ್ ಫ್ಲೆಮಿಂಗ್ ಹೆಸರುಗಳು ಕೇಳಿ ಬಂದರೂ ಅಂತಿಮ ನಿರ್ಧಾರಕ್ಕೆ ಬರಲಿಲ್ಲ. ಈ ನಡುವೆ ಗೌತಮ್ ಗಂಭೀರ್ ಅವರೇ ನೂತನ ಕೋಚ್ ಆಗಲಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಈ ಬಗ್ಗೆ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ಮತ್ತೊಂದು ಹೈಪ್ರೊಫೈಲ್ ಅಂತಾರಾಷ್ಟ್ರೀಯ ಸೆಕ್ಸ್ ದಂಧೆ; ಬಯಲಿಗೆಳೆದ ಓರ್ವ ಮಹಿಳೆ

ಗೌತಮ್ ಗಂಭೀರ್ ಮತ್ತೆ ಟೀಂ ಇಂಡಿಯಾಗೆ ಬಂದರೆ ಉತ್ತಮ ಮುಖ್ಯ ಕೋಚ್ ಎಂದು ಸಾಬೀತುಪಡಿಸಬಹುದು. ಗಂಭೀರ್​ಗೆ ಜವಾಬ್ದಾರಿ ನೀಡಿದರೆ ಅದನ್ನು ಸಾಬೀತು ಮಾಡಿ ತೋರಿಸುತ್ತಾರೆ. ನಾನು ಭಾರತೀಯ ಕೋಚ್ ಪರ ಇದ್ದೇನೆ. ಗಂಭೀರ್ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೆ ಉತ್ತಮ ಕೋಚ್ ಎಂದು ಸಾಬೀತುಪಡಿಸುತ್ತಾರೆ ಎಂದಿದ್ದಾರೆ. ಈ ಹಿಂದೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಭಾರತೀಯ ಕೋಚ್‌ಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದರು.

ಇದನ್ನೂ ಓದಿ:ವಿರಾಟ್ ಕೊಹ್ಲಿ ಯಾಕೆ ಬಾಂಗ್ಲಾ ವಿರುದ್ಧ ಆಡಲಿಲ್ಲ..? ಕ್ಯಾಪ್ಟನ್ ರೋಹಿತ್ ಹೇಳಿದ್ದೇ ಬೇರೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ಗಂಭೀರ್​ ಕೋಚ್ ಆದರೆ..’ ನೂತನ ಕೋಚ್ ಆಯ್ಕೆ ಬಗ್ಗೆ ಗಂಗೂಲಿ ಹೇಳಿದ್ದೇನು?​​

https://newsfirstlive.com/wp-content/uploads/2024/06/GANGULY.jpg

Load More